ಸ್ಟೆನ್ಸಿಲ್‌ ಆರ್ಟ್‌ನಲ್ಲಿ ಜಾಗತಿಕ ಸಾಧನೆ ಮಾಡಿದ ಪರೀಕ್ಷಿತ್‌


Team Udayavani, Oct 13, 2019, 5:00 AM IST

e-22

3.12 ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರ ರಚಿಸಿದ ನೆಲ್ಯಾಡಿಯ ಯುವಕ

ನೆಲ್ಯಾಡಿ: ಪುತ್ತೂರು ತಾಲೂಕಿನ ನೆಲ್ಯಾಡಿ ಗ್ರಾಮ ದೇಶದಲ್ಲೇ 9ನೇ ಗ್ರಾ.ಪಂ. ಆಗಿ ಪ್ರಶಸ್ತಿ ಪಡೆದು ಹಿರಿಮೆ ಸಾಧಿಸಿತ್ತು. ಪ್ರಸ್ತುತ ನೆಲ್ಯಾಡಿಯ ಯುವ ಕಲಾ ಪ್ರತಿಭೆ ಪರೀಕ್ಷಿತ್‌ ವಿಶ್ವದಾಖಲೆಯ ಮೂಲಕ ನೆಲ್ಯಾಡಿಯ ಹಿರಿಮೆಯನ್ನು ಮತ್ತಷ್ಟು ಮೇಲಕ್ಕೆತ್ತಿದ್ದಾರೆ.

ಸ್ಟೆನ್ಸಿಲ್‌ ಆರ್ಟ್‌ ಕಲೆಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಕೇವಲ 3 ನಿಮಿಷ 12 ಸೆಕೆಂಡ್‌ಗಳಲ್ಲಿ 2019ರ ಸೆ. 20ರಂದು ರಚಿಸುವ ಮೂಲಕ ನೆಲ್ಯಾಡಿಯ ಪರೀಕ್ಷಿತ್‌ (18 ವರ್ಷ) ಅಮೋಘ ಸಾಧನೆ ಮಾಡಿದ್ದಾರೆ. ಕಪ್ಪು, ಬಿಳಿ ಪೇಪರ್‌ಗಳು, ಒಂದು ಪೆನ್ಸಿಲ್‌, ಬ್ಲೇಡ್‌, ಗಮ್‌ ಟೇಪ್‌, ಸ್ಟಾಂಡ್‌ ಮತ್ತು ಬೋರ್ಡ್‌ – ಇವಿಷ್ಟು ಪರಿಕರಗಳನ್ನು ಕೈಯಲ್ಲಿಟ್ಟುಕೊಂಡು ಪೇಪರ್‌ ಕಟ್ಟಿಂಗ್‌ ಪೋಟ್ರೈಟ್‌ ಸ್ಟೆನ್ಸಿಲ್‌ ಆರ್ಟ್‌ ಕಲೆಯಲ್ಲಿ ಪರೀಕ್ಷಿತ್‌ ಸಾಧನೆ ಮಾಡಿದ್ದಾರೆ.

ಸಹಪಾಠಿಯ ಪ್ರೇರಣೆ
ಅವರ ಹಿರಿಯ ಸಹಪಾಠಿ ಚಂದನ್‌ ಸುರೇಶ್‌ ಇದೇ ಕಲೆಯಲ್ಲಿ ಇಂಡಿಯಾ ಬುಕ್‌ ಆಫ್ ದ ರೆಕಾರ್ಡ್‌ ನಲ್ಲಿ ಐದು ನಿಮಿಷ ಆರು ಸೆಕೆಂಡ್‌ಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನು ಬಿಡಿಸಿದ್ದರು. ಅವರಿಂದ ಪ್ರೇರಣೆಗೊಳಗಾಗಿದ್ದ ಪರೀಕ್ಷಿತ್‌ ಈ ಕಲೆ ಯನ್ನು ಕರಗತ ಮಾಡಿಕೊಂಡಿದ್ದಾರೆ. ವಿಶ್ವ ದಲ್ಲೇ ಪ್ರಥಮ ಸ್ಥಾನಿಯಾಗಿರುವ ಅವರು ದೇಶಕ್ಕೆ ಕೀರ್ತಿ ತಂದಿದ್ದಾರೆ.

ವಿಶ್ವಕ್ಕೇ ಅಗ್ರಗಣ್ಯ
ತುಂಬಾ ವಿರಳವಾಗಿರುವ ಸ್ಟೆನ್ಸಿಲ್‌ ಆರ್ಟ್‌ನಲ್ಲಿ ಇಡೀ ದೇಶದಲ್ಲಿ ಮುಂಚೂಣಿಯಲ್ಲಿರುವ ಹೆಸರು ಇರುವುದು ಮೂರು ಮಂದಿಯದ್ದು. ಅದರಲ್ಲೂ ಪ್ರಥಮ ಸ್ಥಾನವನ್ನು ಹೊಂದಿರುವ ದ.ಕ. ಜಿಲ್ಲೆಯ ನೆಲ್ಯಾಡಿಯ ಈ ಸಾಧಕ ಬಾಲಕ ಸದ್ಯ ವಿಶ್ವದಲ್ಲೇ ಪ್ರಥಮ ಸ್ಥಾನಿ. ಚಿತ್ರಕಲೆಯಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡಿರುವ ಪರೀಕ್ಷಿತ್‌ ಹಲವಾರು ಕಾರ್ಯಕ್ರಮದಲ್ಲಿ ಸ್ಥಳದಲ್ಲೇ ಮಹಾನ್‌ ವ್ಯಕ್ತಿಗಳ, ಅತಿಥಿಗಳ ಭಾವಚಿತ್ರವನ್ನು ಕ್ಷಣಾರ್ಧದಲ್ಲಿ ಬಿಡಿಸಿದ್ದಾರೆ. ದ.ಕ. ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಸಂಘದಿಂದ ಪ್ರಶಸ್ತಿಯೂ ಲಭಿಸಿದೆ.

ಸಕಲಕಲಾ ವಲ್ಲಭ!
ಫೈರ್‌ ಆರ್ಟ್‌ (ಬೆಂಕಿಯ ದೀವಟಿಗೆಯನ್ನು ಪೇಪರ್‌ಗೆ ಹಿಡಿದು ಅದರ ಮೂಲಕ ಭಾವಚಿತ್ರ ಬಿಡಿಸುವ ಕಲೆ), ಪ್ರಿಂಟ್‌ ವರ್ಕ್‌, ಗಿಟಾರ್‌ ವಾದನ, ಭರತನಾಟ್ಯ ಕಲೆಯನ್ನು 9 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾರೆ. ಪಾಶ್ಚಾತ್ಯ ನೃತ್ಯ, ನಾಟಕ, ಮೈಮ್‌ ಶೋ, ಸಂಗೀತ ಉಪಕರಣಗಳ ಶಬ್ದವನ್ನು ಬಾಯಿಯಲ್ಲೆ ನುಡಿಸುವ ಬೀಟ್‌ ಬಾಕ್ಸ್‌, ಕ್ರಿಯೇಟಿವ್‌ ಆರ್ಟ್‌, ಎರಡೂ ಕೈಗಳಲ್ಲಿ ಚಿತ್ರ ಬಿಡಿಸುವ ಕಲೆ, ಅಷ್ಟಾವಧಾನ, ಸಂಜ್ಞೆಯ ಮೂಲಕ ಹೇಳಲಾದ ದೂರವಾಣಿ ಸಂಖ್ಯೆಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡಿ ಅಸಂಖ್ಯಾತ ದೂರವಾಣಿ ಸಂಖ್ಯೆಗಳನ್ನು ಮನಃಪಟಲದಲ್ಲಿ ಇಟ್ಟುಕೊಳ್ಳುವ ಕಲೆ, ಬಡಗುತಿಟ್ಟಿನ ಯಕ್ಷಗಾನದಲ್ಲಿ ಮರದ ಕಾಲುಗಳನ್ನು ಬಳಸಿ ನೃತ್ಯ ಮೊದಲಾದವುಗಳನ್ನು ಸಿದ್ಧಿಸಿಕೊಳ್ಳುತ್ತಿರುವ ಪರೀಕ್ಷಿತ್‌, ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವ ಅಭಿಲಾಷೆ ಹೊಂದಿದ್ದಾರೆ. ತಾನು ಈಗ ಕಲಿಯುತ್ತಿರುವ ಇಂಟೀರಿಯರ್‌ ಡಿಸೈನ್‌ನಲ್ಲಿ ದೇಶದಲ್ಲಿ ಈವರೆಗೆ ಇಲ್ಲದ ಹೊಸ ಆವಿಷ್ಕಾರಗಳನ್ನು ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಗೋಪಾಡ್ಕರ್‌ ಪ್ರೋತ್ಸಾಹ
ಪರೀಕ್ಷಿತ್‌ ಅವರು ನೆಲ್ಯಾಡಿ ಶ್ರೀಧರ್‌ ಎಂ.-ಸುಧಾಮಣಿ ಅವರ ಪುತ್ರ. 9ನೇ ತರಗತಿಯವರೆಗೆ ನೆಲ್ಯಾಡಿಯ ಜ್ಞಾನೋದಯ ಬೆಥನಿ, ಎಸೆಸೆಲ್ಸಿಯನ್ನು ಮಂಗಳೂರಿನ ಗೋಪಾಡ್ಕರ್‌ ಅವರ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಮಾಡಿದ ಅನಂತರ ಅವರಿಗೆ ಮೈಮ್‌ ಶೋ, ನೆರಳು ಬೆಳಕಿನ ಸಂಯೋಜನೆಯ ಪ್ರಸಿದ್ಧ ಕಲಾವಿದರಾದ ಗೋಪಾಡ್ಕರ್‌ ಅವರ ವಿದ್ಯಾಸಂಸ್ಥೆಯಲ್ಲಿ ಅವರ ತಂಡದೊಂದಿಗೆ ಚಿತ್ರಕಲೆ ಮತ್ತಿತರ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಗೆ ಸೂಕ್ತ ವೇದಿಕೆಯೂ ಲಭಿಸಿತು. ಉತ್ತರ ಕರ್ನಾಟಕದ ಹಲವಾರು ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ತನ್ನ ಆಸಕ್ತಿಯ ಈ ಸ್ಟೆನ್ಸಿಲ್‌ ಆರ್ಟ್‌ಗಳನ್ನು ಪ್ರದರ್ಶಿಸುವ ಅವಕಾಶ, ಪ್ರೋತ್ಸಾಹ ಗೋಪಾಡ್ಕರ್‌ ಅವರ ಮೂಲಕ ಲಭಿಸಿತ್ತು. ಇಂದಿನ ಮಹತ್‌ ಸಾಧನೆಗೆ ಅದುವೇ ಪ್ರೇರಣೆಯೂ ಆಯಿತು.

ಪ್ರಶಸ್ತಿಗೆ ಆಯ್ಕೆ
ಉತ್ತರ ಪ್ರದೇಶದಲ್ಲಿ ಎಕ್ಸ್‌ಕ್ಲೂಸಿವ್‌ ವರ್ಲ್ಡ್ ರೆಕಾರ್ಡ್‌ ಪ್ರಧಾನ ಕಚೇರಿ ಇದ್ದು, ವಿಶ್ವದ ಎಲ್ಲ ದೇಶಗಳಿಂದ ಇಲ್ಲಿಗೆ ಸ್ಪರ್ಧಿಗಳು ತಮ್ಮ ಇವೆಂಟ್‌ ಅನ್ನು ಕಳುಹಿಸುತ್ತಾರೆ. ಇದೀಗ ಈ ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್‌ ಪಂಕಜ್‌ ಕತ್ವಾನಿ ಪರೀಕ್ಷಿತ್‌ನ ಲೈವ್‌ ವೀಡಿಯೋವನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಗುರುಮೂರ್ತಿ ಎಸ್‌. ಕೊಕ್ಕಡ

ಟಾಪ್ ನ್ಯೂಸ್

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ

America-Congress

House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.