ಮಂಗಳೂರಿನಲ್ಲಿ ಸುಸಜ್ಜಿತ ಆಧುನಿಕ ಜೈಲು: ಡಿಜಿಪಿ


Team Udayavani, May 4, 2017, 11:58 AM IST

0305mlr20.jpg

ಮಂಗಳೂರು: ಆಧುನಿಕ ಮತ್ತುಸಮಗ್ರ ಸೌಲಭ್ಯಗಳಿರುವ ಸುಸಜ್ಜಿತ ಜೈಲು ಮಂಗಳೂರಿನ ಮುಡಿಪು ಸಮೀಪದ ಚೇಳೂರಿನಲ್ಲಿ 67.87 ಎಕರೆ ನಿವೇಶನದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ರಾಜ್ಯ ಬಂದೀಖಾನೆ ಇಲಾಖೆಯ ಡಿಜಿಪಿ ಎಚ್‌.ಎನ್‌. ಸತ್ಯನಾರಾಯಣ ರಾವ್‌ ತಿಳಿಸಿದರು.

ಅವರು ಬುಧವಾರ ಮಂಗಳೂರಿನ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಸಾರ್ವಜನಿಕರಿಗೆ ಮತ್ತು ಸಂಬಂಧಿಕರಿಗೆ ವಿಚಾರಣಾಧೀನ ಕೈದಿಗಳ ವೀಕ್ಷಣೆಗೆ ಅನುಕೂಲವಾಗುವಂತೆ 17.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಂದರ್ಶಕರ ಕೊಠಡಿ ಉದ್ಘಾಟನೆ ಮತ್ತು 12.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪ್ರವೇಶ ದ್ವಾರದ ಶಿಲಾನ್ಯಾಸವನ್ನು ನೆರವೇರಿಸಿ ಸುದ್ದಿಗಾರರ ಜತೆ ಮಾತನಾಡಿದರು.

ಜೈಲು ನಿರ್ಮಾಣಕ್ಕಾಗಿ 2 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಈ ವರ್ಷದ ಬಜೆಟ್‌ನಲ್ಲಿ 7.5 ಕೋಟಿ ರೂ. ಒದಗಿಸಲಾಗಿದೆ. ನಿವೇಶನದ ಆರ್‌ಟಿಸಿ ಮಾಡಿಸಲಾಗಿದ್ದು, ಗಡಿ ರೇಖೆ ಗುರುತಿಸಿ ಬೇಲಿ /ಆವರಣ ಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯನ್ನು ತಯಾರಿಸಿ ಅಂದಾಜು ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದವರು ವಿವರಿಸಿದರು.

ಸಂದರ್ಶಕರ ಕೊಠಡಿ
ಸಂದರ್ಶಕರ ಕೊಠಡಿಯಲ್ಲಿ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳು ಜೈಲಿನ ಒಳಗಿದ್ದುಕೊಂಡೇ ಹೊರ ಭಾಗದಲ್ಲಿರುವ ತಮ್ಮಸಂಬಂಧಿಕರ/ ಸ್ನೇಹಿತರ ಜತೆ ಮಾತನಾಡಲು ವ್ಯವಸ್ಥೆ ಇದೆ. ಏಕಕಾಲದಲ್ಲಿ 10 ಮಂದಿ ಭೇಟಿಯಾಗಿ ಮಾತನಾಡಲು ಅನುಕೂಲವಾಗುವಂತೆ 10 ಕಂಪಾರ್ಟ್‌ಮೆಂಟ್‌ಗಳನ್ನು ಮಾಡಲಾಗಿದೆ. ಅದರೊಳಗೆ ಸಿಸಿ ಕೆಮರಾ ಕೂಡ ಇದೆ.

ಶಿವಮೊಗ್ಗದಲ್ಲಿ 10 ವರ್ಷಗಳ ಹಿಂದೆ ಆರಂಭವಾದ ಹೊಸ ಆಧುನಿಕ ಜೈಲು ನಿರ್ಮಾಣ ಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಅಂತಹ2ನೇ ಜೈಲನ್ನು ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇಲ್ಲದ ಹೆಲಿಪ್ಯಾಡ್‌ ಸೌಲಭ್ಯ ಈ ಜೈಲಿನಲ್ಲಿರುತ್ತದೆ.

ಹೆಲಿಪ್ಯಾಡ್‌, ಆಸ್ಪತ್ರೆ, ಲೈಬ್ರರಿ…
ಅಖೀಲ ಭಾರತ ಕಾರಾಗೃಹ ಕೈಪಿಡಿಯಲ್ಲಿರುವ ಮಾರ್ಗಸೂಚಿ ಪ್ರಕಾರ ನೂತನ ಜೈಲಿನ ಯೋಜನೆಯನ್ನು ತಯಾರಿಸಲಾಗಿದೆ. ಪ್ರಸ್ತಾವಿತ ಜೈಲು1,000 ಮಂದಿ ಕೈದಿಗಳನ್ನು ಇರಿಸುವ ಸಾಮರ್ಥ್ಯಹೊಂದಿರುತ್ತದೆ. ಗರಿಷ್ಠ ಭದ್ರತೆಯ ಬೇಲಿ, ದ್ವಾರ
ದಲ್ಲಿ ಮೊಳೆ ಜೋಡಣೆ, ಆಸ್ಪತ್ರೆ, ಗ್ರಂಥಾಲಯ,ಹೆಲಿಪ್ಯಾಡ್‌, ಕೈದಿಗಳಿಗೆ ಕೆಲಸ ಮಾಡಲು ಉದ್ಯಮ ಘಟಕ, ಸಾಕಷ್ಟು ಸಿಬಂದಿ ನೇಮಕ ಮತ್ತು ಸಿಬಂದಿ ವಸತಿ ಗೃಹ, ವೀಡಿಯೋ ಕಾನ್ಫರೆನ್ಸಿಂಗ್‌ ಇತ್ಯಾದಿ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಡಿಜಿಪಿ ತಿಳಿಸಿದರು.

ಜಾಮರ್‌ ಬದಲು ಸೆಕ್ಯುರಿಟಿ ಪೋಲ್‌ 
ಜೈಲಿನಲ್ಲಿ ಮೊಬೈಲ್‌ ಜಾಮರ್‌ ಹಾಕುವುದರಿಂದ ಆಸು ಪಾಸಿನ ಜನರಿಗೆ ಮೊಬೈಲ್‌ ಫೋನ್‌ ಸಂಪರ್ಕ ಸಮಸ್ಯೆ ಉಂಟಾಗುತ್ತಿರುವುದನ್ನು ಮನಗಂಡು ಮೊಬೈಲ್‌ ಜಾಮರ್‌ಗಳನ್ನು ಕ್ರಮೇಣ ತೆಗೆದು ಅವುಗಳ ಸ್ಥಾನದಲ್ಲಿ ಪರಿಣಾಮಕಾರಿ ಲೋಹ ಶೋಧಕ ಉಪಕರಣ ಎಫ್‌ಜಿ1 ಸೆಕ್ಯುರಿಟಿ ಪೋಲ್‌ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಸೆಕ್ಯುರಿಟಿ ಪೋಲನ್ನು ಸ್ಥಳಾಂತರಿಸಲು ಅವಕಾಶವಿದೆ. ಮೊಬೈಲ್‌ ಫೋನ್‌ ಜತೆಗೆ,ಸಿಮ್‌ ಕಾರ್ಡ್‌ನ್ನು ಕೂಡ ಇದು ಪತ್ತೆಹಚ್ಚ ಬಲ್ಲುದು ಎಂದು ಡಿಜಿಪಿ ವಿವರಿಸಿದರು.

ಪೊಲೀಸ್‌ ಕಮಿಷನರ್‌ ಎಂ. ಚಂದ್ರಶೇಖರ್‌, ಪಶ್ಚಿಮ ವಲಯದ ಐಜಿಪಿ ಹರಿಶೇಖರನ್‌, ಎಸ್‌ಪಿ ಭೂಷಣ್‌ ಜಿ. ಬೊರಸೆ, ಅಡಿಶನಲ್‌ ಎಸ್‌ಪಿ ಡಾ| ವೇದಮೂರ್ತಿ, ಎಸಿಪಿ ಉದಯ ನಾಯಕ್‌, ಬರ್ಕೆ ಠಾಣೆ ಇನ್ಸ್‌ಪೆಕ್ಟರ್‌ ರಾಜೇಶ್‌, ಕಾರಾಗೃಹದ ಅಸಿಸ್ಟೆಂಟ್‌ ಸೂಪರಿಂಟೆಂಡೆಂಟ್‌ ವಿ. ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಕರಾವಳಿಗರ ಹಿಂದೇಟು
ಬಂದೀಖಾನೆ ಇಲಾಖೆಯಲ್ಲಿ ಕೆಲಸ ಮಾಡಲು ಕರಾವಳಿ ಭಾಗದ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜನರು ಮುಂದೆ ಬರುತ್ತಿಲ್ಲ. ಹಾಗಾಗಿ ಇಲಾಖೆಯಲ್ಲಿ ಶೇ. 70ರಷ್ಟು ಮಂದಿ ಉತ್ತರ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್‌ ಕರ್ನಾಟಕದ ಜನರೇ ಅಧಿಕಇದ್ದಾರೆ. ಅವರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ/ ಉಡುಪಿ ಜಿಲ್ಲೆಗಳಲ್ಲಿ ಕೆಲಸ ಮಾಡಲು ಒಪ್ಪುವುದಿಲ್ಲ. ಇಲ್ಲಿಗೆ ನೇಮಕಾತಿ ಮಾಡಿದರೂ ಕೆಲವೇ ಸಮಯದಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಮಂಗಳೂರು ಜೈಲಿನಲ್ಲಿ ಸಿಬಂದಿ ಕೊರತೆ ಕಂಡು ಬರಲು ಇದುವೇ ಮುಖ್ಯ ಕಾರಣ ಎಂದು ಡಿಜಿಪಿ ವಿವರಿಸಿದರು. ಜೈಲು ಸಿಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಈ ವರ್ಷ 11 ಮಂದಿಗೆ ಮುಖ್ಯಮಂತ್ರಿ ಪದಕ, ಒಬ್ಬರಿಗೆ ರಾಷ್ಟ್ರಪತಿ ಪದಕ, 86 ಮಂದಿಗೆ ಪ್ರಶಂಸಾ ಪತ್ರ ಬಂದಿದೆ.

ಸಾಮರ್ಥ್ಯ 210; ಇರುವ ಕೈದಿಗಳು 415
ಮಂಗಳೂರು ಜೈಲು ಕೈದಿಗಳಿಂದ ತುಂಬಿ ತುಳುಕುತ್ತಿದೆ. ಜೈಲಿನ ಸಾಮರ್ಥ್ಯ 210. ಆದರೆ ಈಗ 400 ಪುರುಷರು, 13 ಮಹಿಳೆಯರು ಮತ್ತು ಇಬ್ಬರು ಮಕ್ಕಳ ಸಹಿತ ಒಟ್ಟು 415 ಮಂದಿ ಕೈದಿಗಳಿದ್ದಾರೆ. ಅವರಲ್ಲಿ 60 ಮಂದಿ ಹಳೆ ಜೈಲಿನಲ್ಲಿ ಹಾಗೂ ಉಳಿದವರು ಹೊಸ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಪಿಎಫ್‌ಐ ಕಾರ್ಯಕರ್ತರೂ ಇಲ್ಲಿದ್ದಾಗ ಕೈದಿಗಳ ಸಂಖ್ಯೆ 489ರ ವರೆಗೂ ತಲುಪಿತ್ತು. ಶಿಕ್ಷೆಗೊಳಗಾದ ನಾಲ್ವರು ಕೈದಿಗಳಿದ್ದು, ಅವರನ್ನು ಬೇರೆ ಜಿಲ್ಲಾ ಕಾರಾಗೃಹಕ್ಕೆ ಇನ್ನಷ್ಟೇ ಸ್ಥಳಾಂತರಿಸಬೇಕಾಗಿದೆ. ಹೀಗೆ ಬೇರೆ ಜೈಲುಗಳಿಗೆ ವರ್ಗಾವಣೆಗೊಂಡಿರುವ ಸುಮಾರು 60ರಷ್ಟು ಕೈದಿಗಳಿದ್ದಾರೆ.
ಲೆಕ್ಕಕ್ಕಿಂತ ಹೆಚ್ಚು ಕೈದಿಗಳಿರುವ ಜಿಲ್ಲೆಗಳಲ್ಲಿ ಹೊಸ ಜೈಲು ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜೈಲನ್ನು ಅಂಕೋಲಾಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ರಾಯಚೂರಿನಲ್ಲಿಯೂ ಹೊಸ ಜೈಲು ನಿರ್ಮಾಣವಾಗಲಿದೆ ಎಂದು ಡಿಜಿಪಿ ಸತ್ಯನಾರಾಯಣ ರಾವ್‌ ತಿಳಿಸಿದರು.

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.