ಪ್ರಚಾರವಿಲ್ಲದ ಮ್ಯೂಸಿಯಂಗೆ ಬೇಕಿದೆ ಕಾಯಕಲ್ಪ

ಆರು ತಿಂಗಳಲ್ಲಿ ಈ ಸರಕಾರಿ ಮ್ಯೂಸಿಯಂಗೆ 60 ವರ್ಷ

Team Udayavani, Nov 25, 2019, 5:59 AM IST

2311MLR101-BEJAI-MUSEUM

ಮಹಾನಗರ: ಆರು ತಿಂಗಳು ಕಳೆದರೆ ಈ ಮ್ಯೂಸಿಯಂ 60 ವರ್ಷ ಪೂರೈಸುತ್ತದೆ. ಆದರೆ ಆರು ದಶಕಗಳಿಂದ ಇಲ್ಲೊಂದು ಮ್ಯೂಸಿಯಂ ಇದೆ ಎಂದು ಜನಸಾಮಾನ್ಯರಿಗೆ ಗೊತ್ತೇ ಇಲ್ಲ. ಪ್ರವಾಸಿ ತಾಣವಾದರೂ ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ಸರಕಾರಿ ಮ್ಯೂಸಿಯಂ ಸೊರಗುತ್ತಿದೆ.

ಪ್ರವಾಸಿತಾಣಗಳ ಪಟ್ಟಿಯಲ್ಲಿದ್ದರೂ ಇಲ್ಲದಂತಿರುವ ಮಂಗಳೂರಿನ ಏಕೈಕ ಸರಕಾರಿ ವಸ್ತು ಸಂಗ್ರಹಾಲಯವಾಗಿರುವ ಬಿಜೈಯ ಶ್ರೀಮಂತಿ ಬಾಯಿ ಸರಕಾರಿ ವಸ್ತು ಸಂಗ್ರಹಾಲಯ ಪರಿಚಯದಿಂದ ದೂರವೇ ಉಳಿದಿದೆ. 1960ರ ಮೇ 4ರಂದು ಆರಂಭವಾದ ಈ ಮ್ಯೂಸಿಯಂ ದ್ವಿತೀಯ ಮಹಾಯುದ್ಧದಲ್ಲಿ ಸೇನಾ ವೈದ್ಯ ರಾಗಿದ್ದ ಕರ್ನಲ್‌ ಮಿರಾಜರ್‌ ಅವರ ಕೊಡುಗೆ. ತಮ್ಮ ತಾಯಿ ಶ್ರೀಮಂತಿ ಬಾಯಿ ಅವರ ಸ್ಮರಣಾರ್ಥ ಈ ಮ್ಯೂಸಿ ಯಂನ್ನು ಸ್ಥಾಪಿಸಿದ್ದರು.

ಅನಂತರ ಪ್ರಾಚೀನತೆಯ ಸೊಗಡು ಸಾರ್ವಜನಿಕರಿಗೆ ತಿಳಿಯುವಂತಾಗಲಿ ಎಂಬ ಕಾರಣಕ್ಕಾಗಿ ಅಪ ರೂಪದ ದಾಖಲೆಗಳನ್ನೊಳಗೊಂಡ ಈ ಮ್ಯೂಸಿಯಂನ್ನು ಸರ ಕಾರಕ್ಕೆ ಹಸ್ತಾಂತರಿಸಿದ್ದರು. ಆದರೆ ಪ್ರವಾಸಿ ಗರ ಮುಖ್ಯ ಆಕರ್ಷಣೆಯ ಕೇಂದ್ರವಾಗ ಬೇಕಿದ್ದ ಮ್ಯೂಸಿಯಂಗೆ ಪ್ರವಾಸಿಗರನ್ನು ಸೆಳೆ ಯಲು ಮಾಡಬೇಕಾದ ಯಾವುದೇ ಕೆಲ ಸಗಳನ್ನು ಇಲ್ಲಿನ ಆಡಳಿತ ವರ್ಗ ಮಾಡದೇ ಇರುವುದರಿಂದ ಪುರಾತನ ಮ್ಯೂಸಿಯಂ ಜನರಿಂದ ದೂರವೇ ಉಳಿ ಯುವಂತಾಗಿದೆ.

ನಾಮಫಲಕವಿಲ್ಲದ ಕಟ್ಟಡ
ಬಿಜೈಯ ಗುಡ್ಡ ಪ್ರದೇಶದಲ್ಲಿ ಈ ಮ್ಯೂಸಿಯಂ ಇದೆ. ಮುಖ್ಯ ರಸ್ತೆ ಬದಿಯಲ್ಲಿ ಮ್ಯೂಸಿಯಂಗೆ ದಾರಿ ತೋರಿಸುವ ಬೋರ್ಡ್‌ ಇದೆ. ಮ್ಯೂಸಿಯಂನ ಆವರಣದಲ್ಲಿ ಹಸುರು ಬೋರ್ಡ್‌ನಲ್ಲಿ ಮ್ಯೂಸಿಯಂನ ಹೆಸರು ಬರೆಯಲಾಗಿದೆ. ಆದರೆ ಮುಂದೆ ಹೋದಾಗ ಮೂರ್‍ನಾಲ್ಕು ಕಟ್ಟಡಗಳು ಕಾಣಿಸಿಕೊಳ್ಳುವುದರಿಂದ ಮ್ಯೂಸಿಯಂ ಯಾವುದು ಎಂದು ತತ್‌ಕ್ಷಣಕ್ಕೆ ತಿಳಿಯುವುದಿಲ್ಲ. ಸುಮಾರು ಮುಕ್ಕಾಲು ಎಕ್ರೆ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ಎಲ್ಲಿಯೂ ಮ್ಯೂಸಿಯಂ ಎಂದು ಸೂಚಿಸುವ ನಾಮಫಲಕವಾಗಲೀ, ಬರೆದಿರುವ ಕುರುಹುಗಳು ಇಲ್ಲ.

ಜನರೇ ಬರುವುದಿಲ್ಲ
ಶ್ರೀಮಂತಿ ಬಾಯಿ ಮ್ಯೂಸಿಯಂ ಇರುವ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಅಲ್ಲದೆ, ಈ ಮ್ಯೂಸಿಯಂನ್ನು ಜನಾಕರ್ಷಣೆಗೊಳಪಡಿಸುವ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೇ ಇರುವುದರಿಂದ ಇಲ್ಲಿಗೆ ಪ್ರವಾಸಿಗರು ಮಾತ್ರವಲ್ಲ, ಸ್ಥಳೀಯ ಜನರೂ ಬರುತ್ತಿಲ್ಲ ಎಂದು ಇಲ್ಲಿನ ಕೆಲವು ಸಿಬಂದಿ ಹೇಳುತ್ತಾರೆ. ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದಂತಹ ಯಾವುದೇ ಕಾರ್ಯಕ್ರಮಗಳು ಇಲ್ಲಿ ನಡೆಯುವುದಿಲ್ಲ. ಅಪರೂಪಕ್ಕೊಮ್ಮೊಮ್ಮೆ ನಾಣ್ಯ, ಅಂಚೆ ಚೀಟಿ ಪ್ರದರ್ಶನದಂತಹ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಅದಕ್ಕೂ ಜನ ಬರುವುದು ವಿರಳ.

ಅಭಿವೃದ್ಧಿಗೆ ಆದ್ಯತೆ ನೀಡಿ
ಮ್ಯೂಸಿಯಂನಲ್ಲಿ ಪುರಾತನ ಕಡತಗಳು, ಕ್ರಿ.ಶ. 1624ರ ತಾಮ್ರಪಟ ಶಾಸನ, ನಾಣ್ಯ ಸಂಗ್ರಹ, 11, 16ನೇ ಶತ ಮಾನದ ಕಂಚು, ತಾಮ್ರದಲ್ಲಿ ಮಾಡಿದ ದೇವರ ವಿಗ್ರಹಗಳು, 16ನೇ ಶತಮಾನದ ಅಡುಗೆ ಪರಿಕರಗಳು, ನೂತನ ಶಿಲಾ ಯುಗ, ಆದಿ ಶಿಲಾಯುಗದ ಪಳೆಯುಳಿಕೆಗಳು, ತಾಳೆಗರಿ ಗ್ರಂಥ, ಆಗಿನ ಸಂದರ್ಭ ಯುದ್ಧಕ್ಕೆ ಬಳಸುತ್ತಿದ್ದ ಫಿರಂಗಿ, ಕೋವಿ, ಆಯುಧಗಳು, 19ನೇ ಶತಮಾನದ ದೀಪಸ್ತಂಭ, ವೀಣೆ, ನಗಾರಿ ಸೇರಿದಂತೆ ಪುರಾತನ ಕಾಲದ ಹಲವಾರು ವಸ್ತುಗಳು ಈ ವಸ್ತು ಸಂಗ್ರಹಾಲಯದಲ್ಲಿವೆ. ಅಪರೂಪಕ್ಕೆ ನೋಡಲು ಸಿಗುವ ಇಂತಹ ವಸ್ತುಗಳನ್ನು ವೀಕ್ಷಿಸಲು ಜನರೂ ಆಸಕ್ತರಾಗಿರುವುದರಿಂದ ಪುರಾತತ್ವ ಇಲಾಖೆಯು ಇದರ ಅಭಿವೃದ್ಧಿಗೆ ಗಮನ ಕೊಡುವುದು ಅವಶ್ಯವಾಗಿದೆ.

ಮುತುವರ್ಜಿ ವಹಿಸುವೆ
ಬಿಜೈಯ ಶ್ರೀಮಂತಿ ಬಾಯಿ ಸರಕಾರಿ ವಸ್ತು ಸಂಗ್ರಹಾ ಲಯ ಮತ್ತು ಇತರ ಕೆಲವು ಇಂತಹ ಪ್ರಾಚೀನ ವಸ್ತು ಸಂಗ್ರಹಾಲಯಗಳನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಉಪಚು ನಾವಣೆಗಳು ಮುಗಿದ ನಂತರ ಸಂಬಂಧ ಪಟ್ಟ ಇಲಾಖೆಗೆ ಈ ಬಗ್ಗೆ ಪತ್ರ ಬರೆಯಲಾಗುವುದು.
 - ಡಿ. ವೇದವ್ಯಾಸ ಕಾಮತ್‌, ಶಾಸಕರು

ಆವರಣದಲ್ಲಿ ನಾಮಫಲಕ 1960ರಲ್ಲಿ ಶ್ರೀಮಂತಿ ಬಾಯಿ ಮ್ಯೂಸಿಯಂ ಆರಂಭವಾಗಿದ್ದು, ಅನಂತರ ಸರಕಾರಕ್ಕೆ ಹಸ್ತಾಂತರಗೊಂಡಿತು. ವಸ್ತು ಸಂಗ್ರಹಾ ಲಯವನ್ನು ಸೂಚಿಸುವ ನಾಮ ಫಲಕ ಪ್ರವೇಶ ಆವರಣದಲ್ಲಿದೆ. ಹಸುರು ಬೋರ್ಡ್‌ ನಲ್ಲಿ ಮ್ಯೂಸಿಯಂನ ಹೆಸರು ಬರೆಯಲಾಗಿದೆ. ಇದರಿಂದ ಸಂಗ್ರಹಾಲಯ ಎಲ್ಲಿದೆ ಎಂದು ತಿಳಿಯುತ್ತದೆ.
 - ಧನಲಕ್ಷ್ಮೀ ಅಮ್ಮಾಳ್‌, ವಸ್ತು ಸಂಗ್ರಹಾಲಯ ಅಧಿಕಾರಿ

-  ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.