ಅಂಗನವಾಡಿ ಗೋಡೆಯಲ್ಲಿ ಸ್ವಚ್ಛತೆ ಜಾಗೃತಿಯ ಶಾಶ್ವತ ಚಿತ್ರ-ಬರಹ


Team Udayavani, Jul 1, 2018, 12:04 PM IST

1-july-10.jpg

ನರಿಮೊಗರು: ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು ಪುರುಷರಕಟ್ಟೆ ಇವರಿಂದ ಪುರುಷರಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛ ಭಾರತದ ಕಲ್ಪನೆಯನ್ನು ಮೂಡಿಸುವ ಶಾಶ್ವತ ಗೋಡೆ ಬರಹವನ್ನು ಬಿಡಿಸಲಾಯಿತು.

ಮಕ್ಕಳು ಎಳವೆಯಿಂದಲೇ ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳನ್ನು ಸ್ವಚ್ಛತೆಯ ಕಡೆಗೆ ಆಕರ್ಷಿಸಲು, ಅಂಗನವಾಡಿಯ ಗೋಡೆಗಳನ್ನು ಸ್ವಚ್ಛತೆ ಜಾಗೃತಿಯ ಬರಹದೊಂದಿಗೆ, ಸ್ವಚ್ಛತೆಯ ಬಗೆಗಿನ ಬಣ್ಣ ಬಣ್ಣದ ಚಿತ್ರಬರಹಗಳನ್ನು ಬಿಡಿಸುವ ಮೂಲಕ ವರ್ಣಮಯಗೊಳಿಸಲಾಯಿತು.  ಯುವತಿ ಮಂಡಲದ ಗುರುಪ್ರಿಯಾ ನಾಯಕ್‌, ಸ್ವಾತಿ ನರಿಮೊಗರು ಚಿತ್ರಗಳನ್ನು ರಚಿಸಿದರೆ, ಸದಸ್ಯರಾದ ಖುಷಿತಾ ನರಿಮೊಗರು, ವಿದ್ಯಾ ಪ್ರಸಾದ್‌, ದೀಕ್ಷಿತಾ ಮಣಿಯ, ಸಮೃದ್ಧಿ ಶೆಣೈ, ಮೂಕಾಂಬಿಕಾ ಮಣಿಯ ಸಹಕರಿಸಿದರು.

ಗೋಡೆ ಬರಹ ಅನಾವರಣ ಸಂದರ್ಭ ಯುವತಿ ಮಂಡಲದ ಗೌರವಾಧ್ಯಕ್ಷೆ ವಿದ್ಯಾ ನಾಯಕ್‌, ಭಾಗ್ಯಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷೆ ಸರೋಜಿನಿ, ಅಂಗನವಾಡಿ ಕಾರ್ಯಕರ್ತೆ ಸುಧಾ ರವಿ, ಸಹಾಯಕಿ ಸುಜಾತಾ ಎಸ್‌., ಪುಟಾಣಿಗಳ ಹೆತ್ತವರಾದ ರಾಘವೇಂದ್ರ, ವಸಂತ, ಹರಿಶ್ಚಂದ್ರ, ಶಶಿಕಲಾ, ತಾರಾವತಿ, ಸವಿತಾ, ಅಬ್ಟಾಸ್‌, ನಿಶ್ಮಿತಾ ಮನೋಜ್‌, ಮನೀಷಾ ಜತೆಗೆ ಅಂಗನವಾಡಿಯ ಪುಟಾಣಿಗಳು ಉಪಸ್ಥಿತರಿದ್ದರು.

ಜಾಗೃತಿಗೆ ಯತ್ನ
ಅಂಗನವಾಡಿಯಲ್ಲಿ ಶಾಶ್ವತ ಗೋಡೆ ಬರಹವನ್ನು ಪ್ರಾರಂಭಿಸಿ- ಪುಟಾಣಿ ಮಕ್ಕಳಲ್ಲಿ ಮತ್ತು ತಾಯಂದಿರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಜತೆಗೆ ಮಕ್ಕಳಿಗೆ ಆಹ್ಲಾದಕರ, ಪರಿಸರ ಸ್ನೇಹಿ ವಾತಾವರಣ ಸೃಷ್ಟಿಸಲಾಗಿದೆ. ಮುಂದೆ ಗ್ರಾಮ ಪಂಚಾಯತ್‌ ಆವರಣ, ಬಸ್‌ ತಂಗುದಾಣ, ಈ ಪರಿಸರದ ಎಲ್ಲ ಸರಕಾರಿ ಶಾಲೆಗಳಲ್ಲಿ ಗೋಡೆಬರಹ, ಚಿತ್ರಗಳ ಮೂಲಕ ಪರಿಸರದ ಕುರಿತು ಪ್ರೀತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಯೋಜನೆಗಳನ್ನು ನಮ್ಮ ಪ್ರಖ್ಯಾತಿ ಯುವತಿ ಮಂಡಲವು ಹಮ್ಮಿಕೊಳ್ಳಲಿದೆ. ನೆಹರೂ ಯುವ ಕೇಂದ್ರದ ಕಾರ್ಯಕ್ರಮದಡಿ ವಿನೂತನ ಪ್ರಯತ್ನ ನಮ್ಮದು.
– ಗುರುಪ್ರಿಯಾ ನಾಯಕ್‌,
ಅಧ್ಯಕ್ಷೆ, ಪ್ರಖ್ಯಾತಿ ಯುವತಿ ಮಂಡಲ

ಉತ್ತಮ ಕಾರ್ಯ
ಅಂಗನವಾಡಿಗಳು ಅಭಿವೃದ್ಧಿ ಹೊಂದಬೇಕಾದರೆ ಊರಿನ ಜನರ, ಸಂಘ- ಸಂಸ್ಥೆಗಳ ಸಹಕಾರ ಅತ್ಯಗತ್ಯ. ಇದೇ ಅಂಗನವಾಡಿಯಲ್ಲಿ ಕಲಿತಿರುವ ಯುವತಿ ಮಂಡಲದ ಅಧ್ಯಕ್ಷರ ಜತೆಗೆ ಎಲ್ಲ ಸದಸ್ಯರು ಜೊತೆಗೂಡಿ ತಾವೇ ಅಂಗನವಾಡಿಯ ಗೋಡೆಯನ್ನು ಬರಹ ಹಾಗೂ ಚಿತ್ರಗಳಿಂದ ವರ್ಣಮಯಗೊಳಿಸಿದ್ದಾರೆ. ಉತ್ತಮ ಸಹಕಾರ ನೀಡುತ್ತಿದ್ದಾರೆ.
– ಸುಧಾ ರವಿ,
ಅಂಗನವಾಡಿ ಕಾರ್ಯಕರ್ತೆ

ಟಾಪ್ ನ್ಯೂಸ್

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.