ಸಾಫ್ಟ್‌ವೇರ್‌ ಉದ್ಯೋಗ ತ್ಯಜಿಸಿ ಕೃಷಿ ಕೈ ಹಿಡಿದ ಕೊಂಡಾಣದ ಪ್ರಗತಿಪರ ಕೃಷಿಕ

ಕೃಷಿಯಲ್ಲಿ ಹಲವು ಪ್ರಯೋಗ ಮಾಡಿ ಯಶಸ್ವಿಯಾಗಿರುವ ಚಂದ್ರಶೇಖರ ಗಟ್ಟಿ

Team Udayavani, Dec 19, 2019, 4:22 AM IST

xc-24

ಹೆಸರು: ಚಂದ್ರಶೇಖರ ಗಟ್ಟಿ
ಏನೇನು ಕೃಷಿ: ಕೆಂದಾಳೆ, ತೆಂಗು
ವಯಸ್ಸು: 45
ಕೃಷಿ ಪ್ರದೇಶ: 3 ಎಕ್ರೆ

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹ ಣ್ತೀದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಉಳ್ಳಾಲ: ಇಂದಿನ ಯುವ ಜನತೆ ಕೃಷಿ ಸಂಸ್ಕೃತಿಯಿಂದ ವಿಮುಖರಾಗಿ ನಗರ ಸಂಸ್ಕೃತಿಗೆ ಮಾರುಹೋಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸಾಫ್ಟ್‌ವೇರ್‌ ಉದ್ಯೋಗವನ್ನು ತ್ಯಜಿಸಿ ಕೃಷಿಯನ್ನು ಮೂಲ ಉದ್ಯೋಗವನ್ನಾಗಿಸಿ ಕೆಂದಾಳೆ, ತೆಂಗು ಕೃಷಿಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು ಕೋಟೆಕಾರು ಗ್ರಾಮ ಕೊಂಡಾಣದ ಪ್ರಗತಿಪರ ಕೃಷಿಕ ಚಂದ್ರಶೇಖರ ಗಟ್ಟಿ. ತೆಂಗು ಕೃಷಿ ಯೊಂದಿಗೆ ಅಂತರ್‌ ಬೆಳೆ ಬೆಳೆದು 22 ವರ್ಷಗಳಿಂದ ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿರುವ ಗಟ್ಟಿಯವರು ಮನೆಯನ್ನೇ ಕೃಷಿ ಮತ್ತು ಸಾಫ್ಟ್‌ವೇರ್‌ನ ಪ್ರಯೋಗ ಶಾಲೆಯನ್ನಾಗಿ ರೂಪಿಸಿ ಯಶಸ್ವಿಯಾಗಿದ್ದಾರೆ. ಮಂಗಳೂರು ತಾ| ಕೋಟೆಕಾರು ಕೊಂಡಾಣ ಕೃಷಿಕ ಕುಟುಂಬದ ನಾರಾಯಣ ಗಟ್ಟಿ ಮತ್ತು ಚಂದ್ರಾವತಿ ಗಟ್ಟಿ ದಂಪತಿಯ ಪುತ್ರ ರಾದ ಚಂದ್ರಶೇಖರ ಗಟ್ಟಿ ಸಾಫ್ಟ್‌ವೇರ್‌ನಲ್ಲಿ ಡಿಪ್ಲೊ ಮಾ ಪದವಿ ಪಡೆದು ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ವೃತ್ತಿ ಜೀವನ ಆರಂಭಿಸಿದವರು. ಏತನ್ಮಧ್ಯೆ ಮನೆಯ ಕೃಷಿಯನ್ನು ವೃತ್ತಿ ಯೊಂದಿಗೆ ಪ್ರವೃತ್ತಿಯನ್ನಾಗಿ ಮುಂದುವರಿಸಿಕೊಂಡು ಹೋಗು ತ್ತಿ ದ್ದರು. 3ಎಕ್ರೆ ಪ್ರದೇಶದಲ್ಲಿ ತೆಂಗು, ಅಡಿಕೆ ಕೃಷಿಯೊಂದಿಗೆ, ಬಾಳೆಗಿಡ, ಜಾಯಿಕಾಯಿ, ಜೇನುಕೃಷಿಯನ್ನು ಮಾಡಿ ಅಂತರ್‌ಬೆಳೆಗೆ ಪ್ರಾಮುಖ್ಯ ನೀಡುತ್ತಿದ್ದಾರೆ. ವಿದೇಶಿ ಮೂಲದ ಮ್ಯಾಂಗೋಸ್ಟಿನ್‌ ಹಣ್ಣಿನ ಗಿಡಗಳ ನರ್ಸರಿಯನ್ನೂ ಆರಂಭಿಸಿದ್ದಾರೆ.

ಪ್ರವೃತ್ತಿಯನ್ನು ವೃತ್ತಿಯಾಗಿಸಿದರು
ಸಾಫ್ಟ್‌ವೇರ್‌ ಉದ್ಯೋಗವನ್ನು ಅನಿರೀಕ್ಷಿತ ಕಾರಣ ದಿಂದ ತೊರೆದ ಗಟ್ಟಿಯವರು ಹೆಚ್ಚಿನ ಸಮಯವನ್ನು ತನ್ನ ಕೃಷಿಗಾಗಿ ಮೀಸಲಿರಿಸಲು ಕೃಷಿಯನ್ನೇ ವೃತ್ತಿಯಾಗಿಸಿ ಕೊಂಡರು. ಆ ಸಂದರ್ಭ ಕೆಂದಾಳೆ ಎಳನೀರಿಗೆ ಔಷಧೀಯ ಗುಣವಿದ್ದು ಮಾರುಕಟ್ಟೆಯಲ್ಲಿ ಅತ್ಯುತ್ತಮ ಧಾರ ಣೆ ಯನ್ನು ಅರಿತು ಕೆಂದಾಳೆ ಕೃಷಿಯತ್ತ ತನ್ನ ದೃಷ್ಟಿ ನೆಟ್ಟರು. ಕಾಸರಗೋಡು, ದ.ಕ. ಜಿಲ್ಲೆ ಸೇರಿದಂತೆ ತೆಂಗು ಕೃಷಿ ಅದರಲ್ಲೂ ಕೆಂದಾಳೆ ಕೃಷಿಯತ್ತ ಅಧ್ಯಯನ ನಡೆಸಿ ಕ್ಷೇತ್ರ ಕಾರ್ಯ ನಡೆಸಿ ತನ್ನ ತೋಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದು ಯಶಸ್ವಿಯಾದರು. ಪಾರಂಪರಿಕವಾಗಿ ತೆಂಗು ಕೃಷಿ ಯನ್ನು ಮಾಡಿ ಹೊಸ ಹೊಸ ಪ್ರಯೋಗಗಳೊಂದಿಗೆ ಕೆಂದಾಳೆ ಕೃಷಿಯನ್ನು ಆಧುನೀಕರಣಗೊಳಿಸಿದರು.ಸಾಫ್ಟ್‌ವೇರ್‌ ಉದ್ಯಮ
22 ವರ್ಷಗಳ ಕೃಷಿ ಅನುಭವದೊಂದಿಗೆ ಹಿಂದಿನ ವೃತ್ತಿಯಾಗಿದ್ದ ಸಾಫ್ಟ್‌ವೇರ್‌ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಮನೆಯಲ್ಲೇ ವಿದೇಶದಲ್ಲಿರುವ ಸಂಸ್ಥೆಗೆ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಆರಂಭಿ ಸಿದ್ದು ಮೂರು ತಿಂಗಳಿನಿಂದ ಮನೆಯಲ್ಲೇ ಸಾಫ್ಟ್‌ವೇರ್‌ ಉದ್ಯಮವನ್ನು ಆರಂಭಿಸಿ 6 ಮಂದಿಗೆ ಉದ್ಯೋಗ ನೀಡಿದ್ದಾರೆ. ಇವರು ಸತತ ಮೂರು ವರ್ಷ ತೆಂಗು ಕೃಷಿಯ ವಿವಿಧ ತಳಿಗಳ ಪ್ರದರ್ಶನ, ಹೊಸ ದಿಲ್ಲಿ ಯಲ್ಲಿ ನಡೆದ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ತೆಂಗು ಕೃಷಿಯ ಪ್ರದರ್ಶನ, ಪ್ರಾತ್ಯಕ್ಷತೆ ನೀಡಿದ್ದಾರೆ. ಕೃಷಿ ಚಟುವಟಿಕೆಗಳ ಅಧ್ಯಯ ನಕ್ಕೆಂದೇ ಕಾಲೇಜು  ವಿದ್ಯಾರ್ಥಿಗಳು, ಸಂಶೋ ಧ ಕರು ಕೊಂಡಾಣದ ಗಟ್ಟಿಯವರ ಕಾರ್ಯಕ್ಷೇತ್ರಕ್ಕೆ ಆಗಮಿಸಿ ಅಧ್ಯಯನ ನಡೆಸುತ್ತಿದ್ದಾರೆ.

ಕೃಷಿ ಸಾಧನೆಗೆ ಪ್ರಶಸ್ತಿಗಳ ಗರಿ
ಚಂದ್ರಶೇಖರ್‌ ಗಟ್ಟಿ ಅವರ ಕೃಷಿ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಕೆಂದಾಳೆ ತೆಂಗು ಕೃಷಿಯಲ್ಲಿ ಮಾಡಿದ ಸಾಧನೆಗೆ ಭಾರತದ ಕೃಷಿ ಮಂತ್ರಾಲಯದ ತೆಂಗು ಅಭಿವೃದ್ಧಿ ಮಂಡಳಿ ನೀಡುವ ರಾಷ್ಟ್ರೀಯ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು 2011ರ ಸೆಪ್ಟಂಬರ್‌ ತಿಂಗಳಿನಲ್ಲಿ ಅಸ್ಸಾಂನ ಗುವಾಹಾಟಿಯಲ್ಲಿ ನಡೆದ ಮಂಡಳಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಸ್ಸಾಂನ ಅಂದಿನ ಮುಖ್ಯಮಂತ್ರಿ ತರುಣ್‌ ಗೊಗೋಯಿ ಅವರು ಪ್ರದಾನ ಮಾಡಿದ್ದು ರಾಷ್ಟ್ರದ ಐದು ಮಂದಿ ಉದಯೋನ್ಮುಖ ತೆಂಗು ಬೆಳೆಗಾರರಲ್ಲಿ ಚಂದ್ರಶೇಖರ್‌ ಗಟ್ಟಿಯವರು ಓರ್ವರು. 2011ರಲ್ಲಿ ಸಮಗ್ರ ಕೃಷಿಯಲ್ಲಿ ಜಿಲ್ಲಾ ಶ್ರೇಷ್ಠ ರೈತ ಪ್ರಶಸ್ತಿ, 2019ರಲ್ಲಿ ಕೃಷಿ ಕಾರ್ಯದಲ್ಲಿ ನೀರು ನಿರ್ವಹಣೆಗೆ ತಾಲೂಕು ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ಮೊಬೈಲ್‌ ಸಂಖ್ಯೆ: 9741828152

ಕೃಷಿಯಿಂದ ಯಶಸ್ಸು ಸಾಧ್ಯ
ಕೃಷಿಯಲ್ಲಿರುವ ಪ್ರತಿಯೊಂದು ವಿಷಯಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅದರೊಟ್ಟಿಗೆ ನಮ್ಮ ಪೂರ್ವಜರ ನಂಬಿಕೆಗಳನ್ನೂ ಉಳಿಸಿಕೊಂಡು ಸಮಗ್ರವಾಗಿ ಕೃಷಿ ಮಾಡಿದರೆ ಯಶಸ್ಸು ಸಾಧ್ಯ. ಕೃಷಿಯಲ್ಲಿ ಶ್ರದ್ಧೆ, ತಾಳ್ಮೆಯೊಂದಿಗೆ ಕಠಿನ ಪರಿಶ್ರಮ ಮತ್ತು ಸತತ ಪ್ರಯತ್ನ ನಡೆಸಿದರೆ ಯಶಸ್ವಿಯಾಗಲು ಸಾಧ್ಯ. ಐಟಿ ಸಂಸ್ಥೆಗಳಲ್ಲಿರುವ ಯುವಜನತೆ ಕೃಷಿಯತ್ತ ಒಲವು ತೋರಿಸುತ್ತಿದ್ದು ಅದರ ಬಗ್ಗೆ ಅಧ್ಯಯನ ಮಾಡಲು ಬರುತ್ತಿದ್ದು ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಕೃಷಿ ಶಿಕ್ಷಣ ನೀಡುವ ಅಗತ್ಯವಿದೆ.ಇದಕ್ಕೆ ಹೆತ್ತವರ ಪ್ರೋತ್ಸಾಹ ಅಗತ್ಯ. ನನ್ನ ಕೃಷಿ ಅಭಿವೃದ್ಧಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹ ನೀಡಿದ್ದಾರೆ. ಉಜಿರೆಯ ರುಡ್‌ಸೆಟ್‌ ಸಂಸ್ಥೆಯ ತರಬೇತಿ, ಆರ್ಥಿಕ ಸಹಕಾರ ನೀಡುತ್ತಿರುವ ಮಂಗಳೂರು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ ಮತ್ತು ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್‌ ಪ್ರೋತ್ಸಾಹದಿಂದಾಗಿ ಕೃಷಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. – ಚಂದ್ರಶೇಖರ ಗಟ್ಟಿ,
ಪ್ರಗತಿಪರ ಕೃಷಿಕ

ವಸಂತ ಎನ್‌. ಕೊಣಾಜೆ

ಟಾಪ್ ನ್ಯೂಸ್

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.