Mangaluru ಪೊಲೀಸರಿಗೆ ಸವಾಲಾದ ದರೋಡೆ ಪ್ರಕರಣ
Team Udayavani, Jun 26, 2024, 11:10 PM IST
ಮಂಗಳೂರು: ಕಳೆದ ಶುಕ್ರವಾರ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣ ಭೇದಿಸುವುದು ಮಂಗಳೂರು ಪೊಲೀಸರಿಗೆ ಸವಾಲಾಗುತ್ತಿದೆ.
ನಗರ ಅಪರಾಧ ಪತ್ತೆದಳದ ನೇತೃತ್ವದಲ್ಲಿ ಪೊಲೀಸ್ ತಂಡಗಳು ತನಿಖೆ ತೀವ್ರಗೊಳಿಸಿವೆ. ಆದರೆ ದರೋಡೆಕೋರರ ಜಾಡು ಹಿಡಿಯುವುದು ಸಾಧ್ಯವಾಗಿಲ್ಲ. ದರೋಡೆಗೆ ಬಳಸಿರುವ ಕಾರಿನ ಪತ್ತೆಗೆ ಕಾರ್ಯಾಚರಣೆ ಕೇಂದ್ರೀಕರಿಸಲಾಗಿದ್ದು ನಗರ ಹಾಗೂ ಹೊರವಲಯದ ಎಲ್ಲ ಆಯಕಟ್ಟಿನ ಸಿಸಿ ಕೆಮರಾಗಳ ದೃಶ್ಯ ಪರಿಶೀಲನೆ ನಡೆಸಲಾಗುತ್ತಿದೆ.
ದರೋಡೆಕೋರರು ಸಾಕಷ್ಟು ಯೋಜನಾಬದ್ದವಾಗಿಯೇ ಕೃತ್ಯ ಎಸಗಿದ್ದಾರೆ. ಬಾಡಿಗೆ ಕಾರು ಬಳಸಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ಶೀಘ್ರ ಸೆರೆ ವಿಶ್ವಾಸ
ಇದುವರೆಗೆ ಲಭ್ಯವಾಗಿರುವ ಸುಳಿವಿನ ಬೆನ್ನು ಹತ್ತಿರುವ ಪೊಲೀಸರು ಪ್ರಕರಣವನ್ನು ಶೀಘ್ರ ಭೇದಿಸುವ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಲ್ಕು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗುವ ವಿಶ್ವಾಸ ಪೊಲೀಸರಲ್ಲಿದೆ.
ಒತ್ತಡ
ದರೋಡೆ ನಡೆದು ವಾರ ಸಮೀಪಿಸುತ್ತಿದ್ದರೂ ಪ್ರಕರಣ ಭೇದಿಸದಿರುವುದರಿಂದ ಪೊಲೀಸರ ಮೇಲೆ ವಿವಿಧ ಕೋನಗಳಲ್ಲಿ ಒತ್ತಡಗಳು ಕೂಡ ಬರುತ್ತಿವೆ ಎಂದು ತಿಳಿದುಬಂದಿದೆ.
9 ಲ.ರೂ ಮೌಲ್ಯದ ಸೊತ್ತು
ದರೋಡೆಕೋರರು ಪದ್ಮನಾಭ ಕೋಟ್ಯಾನ್ ಅವರಿಗೆ ಚೂರಿಯಿಂದ ಇರಿದು ಅವರನ್ನು, ಪತ್ನಿ ಪುತ್ರನನ್ನು ಕಟ್ಟಿ ಹಾಕಿ 1.50 ಲ.ರೂ ನಗದು, ಚಿನ್ನಾಭರಣ ಸಹಿತ ಸುಮಾರು 9 ಲ.ರೂ. ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.