ಸುರತ್ಕಲ್‌ನಲ್ಲಿ ಪವಿತ್ರಾ ಗೌಡ ಹೋಲುವ ಕೇಸ್: ಯುವತಿಗೆ ಅಶ್ಲೀಲ ಫೋಟೋ- ಸಂದೇಶ ಕಳಿಸಿ ಕಿರುಕುಳ
ಕಿರುಕುಳಕ್ಕೆ ಬೇಸತ್ತು ಅನಾರೋಗ್ಯಕ್ಕೆ ಒಳಗಾದ ಯುವತಿ
Team Udayavani, Oct 1, 2024, 12:09 PM IST
ಸುರತ್ಕಲ್: ಚಿತ್ರನಟಿ ಪವಿತ್ರ ಗೌಡ ಅವರ ಕೇಸಿಗೆ ಹೋಲುವ ಪ್ರಕರಣವೊಂದು ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ನಡೆದಿರುವುದು ವರದಿಯಾಗಿದೆ.
ಮಂಗಳೂರಿನಲ್ಲಿ ಶಿಕ್ಷ,ಣ ಪಡೆಯುತ್ತಿರುವ ಯುವತಿಗೆ ಯುವಕನೊಬ್ಬ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಘಟನೆ?: 19 ವರ್ಷ ಯುವತಿ ಈ ಹಿಂದೆ ಸುರತ್ಕಲ್ ನಲ್ಲಿ ಕಲಿಯುತ್ತಿರುವಾಗ ಮಂಜನಾಡಿ ಬಳಿಯ ಮೊಹಮ್ಮದ್ ಶಾಕಿಬ್ ಎಂಬಾತ ಚೊಕ್ಕಬೆಟ್ಟಿನ ಸ್ನೇಹಿತೆಯ ಬಳಿಯಿಂದ ನಂಬರ್ ಪಡೆದುಕೊಂಡು ಯುವತಿಗೆ ಪ್ರತಿದಿನ ಮೆಸೇಜ್ ಮಾಡುತ್ತಿದ್ದ. ಯುವತಿಯ ಹಿಂದೆ ಬಿದ್ದಿದ್ದ ಶಾಕಿಬ್ ಆಕೆಗೆ ವಾಟ್ಸಾಪ್‌ನಲ್ಲಿ ಪ್ರತಿದಿನ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದ. ಯುವತಿಗೆ ಮರ್ಮಾಂಗದ ಚಿತ್ರವನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಇದರಿಂದಾಗಿ ಮಾನಸಿಕವಾಗಿ ನೊಂದ ಯುವತಿ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಆಕೆ ಕಡಿಮೆ ರಕ್ತದೊತ್ತಡದ ಸಮಸ್ಯೆಗೂ ಒಳಗಾಗಿ ಕಾಲೇಜಿಗೂ ಹೋಗಲಾಗದೆ ಮನೆಯಲ್ಲಿಯೇ ಉಳಿಯುವಂತ ಸ್ಥಿತಿಗೆ ಬಂದಿದ್ದಾಳೆ.
ಈ ವಿಚಾರವನ್ನು ಯುವತಿ ಪೋಷಕರಿಗೆ ತಿಳಿಸಿದ್ದು, ಬಳಿಕ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ, ದೂರು ಸ್ವೀಕರಿಸಿದ ಪೊಲೀಸರು ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಶಾಕಿಬ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಯುವತಿ ಕಡೆಯವರು ಒಟ್ಟಾಗಿ ಠಾಣೆಯಲ್ಲಿ ಸೇರಿ ಯುವಕನ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹೋಟೆಲ್ ಒಂದರಲ್ಲಿ ರಿಸೆಪ್ಷನ್ ವಿಭಾಗದಲ್ಲಿ ಕೆಲಸಕ್ಕೆ ಸೇರಿರುವ ಈ ಯುವಕ ಹೋಟೆಲ್ ಗೆ ಬರುವ ಗ್ರಾಹಕರ ವಿರುದ್ದವೂ ಇಂತಹ ದುಷ್ಕೃತ್ಯ ಮಾಡಿದ್ದಾನೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Air India; ಮಂಗಳೂರು – ಅಬುಧಾಬಿ ವಿಮಾನ 12 ತಾಸು ವಿಳಂಬ!
Jharkhand CM ಹೇಮಂತ್ ಸೊರೇನ್ ಬೇಕಲದಲ್ಲಿ
Dharmasthala; ನಮ್ಮೂರು ನಮ್ಮ ಕೆರೆಯಡಿ 800ನೇ ಕೆರೆ ಹಸ್ತಾಂತರ
MUST WATCH
ಹೊಸ ಸೇರ್ಪಡೆ
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.