ಆಟಿಕೆಯಿಂದ ಪ್ರೇರಿತರಾಗಿ ವಿಶೇಷ ವಿನ್ಯಾಸ ರಚನೆ
Team Udayavani, Nov 9, 2017, 3:00 PM IST
ಮಹಾನಗರ: ಎಳವೆಯಲ್ಲಿ ಮಕ್ಕಳಿಗೆ ಪೋಷಕರು ಆಟಿಕೆಗಳನ್ನು ತಂದು ಕೊಡುವುದುಂಟು. ಮಕ್ಕಳು ಅದರಲ್ಲಿ ಸ್ವಲ್ಪ ಆಡಿ ಬಳಿಕ ಮರೆತು ಬಿಡುತ್ತಾರೆ. ಆದರೆ ಕೊಟ್ಟಾರದ ಯುವಕನೊಬ್ಬ ಭೂಪಟದ ಮಾದರಿಯ ತನ್ನ ಬಾಲ್ಯದ ಆಟಿಕೆಯಿಂದ ಪ್ರೇರಣೆಗೊಂಡು 20 ವರ್ಷಗಳ ಬಳಿಕ ರೂಪಿಸಿದ ವಿನ್ಯಾಸಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದು ಲಭಿಸಿದೆ.
ಪೇಟೆಂಟ್‌ಗೆ ಅರ್ಜಿ
ಕಾನ್ಪುರದ ಐಐಟಿಯಲ್ಲಿ ಮಾಸ್ಟರ್ ಆಪ್ ಡಿಸೈನ್ (ಎಂ.ಡೆಸ್) ಪದವಿ ಪಡೆದ ಕಾರ್ತಿಕ್ ಪಿ.ಬಿ. ಅವರ ಅಲೈಗ್ನೋ ಡಿಸೈನ್‌ಗೆ ಸಿಂಗಾಪುರದ ರೆಡ್ ಡಾಟ್ ಸಂಸ್ಥೆಯು ಈ ಸಾಲಿನ ಪ್ರಶಸ್ತಿ ನೀಡಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಪಿ.ಎಚ್.ಬಾಲಕೃಷ್ಣ-ಪಿ.ಬಿ.ಕವಿತಾ ದಂಪತಿಯ ಪುತ್ರ ಕಾರ್ತಿಕ್, ಕೆನರಾ ಪ.ಪೂ.ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬಿಇ ಮುಗಿಸಿದ್ದರು. ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾದರು. ಬಳಿಕ ಕಲಿಯಲೆಂದು ಉದ್ಯೋಗ ಬಿಟ್ಟು, ಐಐಟಿಯಲ್ಲಿ ಎಂ.ಡೆಸ್ ಪದವಿ ಪಡೆದರು. ವಿದ್ಯಾಭ್ಯಾಸದಲ್ಲಿದ್ದಾಗಲೇ ಹಲವು ಅವಶ್ಯಕ ಮಾದರಿಗಳ ಡಿಸೈನ್‌ಗಳನ್ನು ಸಿದ್ಧಪಡಿಸಿದ್ದು, ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಐಐಟಿಯಲ್ಲಿ ಕಲಿಯುತ್ತಿದ್ದಾಗ ಇವರು ಸಿದ್ಧಪಡಿಸಿದ ಸುಲಭ ಚಹಾ ಸಾಗಾಟದ ಕಿಟ್‌ನ ಡಿಸೈನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಿಂಗಾಪುರದ ರೆಡ್ ಸಂಸ್ಥೆಯು ಪ್ರತಿವರ್ಷ ಡಿಸೈನ್ ಕ್ಷೇತ್ರದ ಸುಮಾರು 35 ವಿಭಾಗಗಳಿಗೆ ಪ್ರತಿ ವರ್ಷ ಸ್ಪರ್ಧೆ ನಡೆಸುತ್ತದೆ. ಸ್ಪರ್ಧಿಯು ಸಿದ್ಧಪಡಿಸಿದ ಡಿಸೈನ್‌ನ ಫೋಟೋ ತೆಗೆದು ಕಳುಹಿಸಬೇಕು. ಹೊಸ ವಿಶೇಷವೆನಿಸುವ ವಿನ್ಯಾಸ ರೂಪಿಸಿದವರನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಈ ಬಾರಿಯ ಸ್ಪರ್ಧೆಯಲ್ಲಿ 58 ದೇಶಗಳ 4,724 ಮಂದಿ ಸ್ಪರ್ಧಿಸಿದ್ದರು. ಕಾರ್ತಿಕ್ ಅವರು ಮೂರು ಲೇಯರ್‌ಗಳನ್ನು ಒಳಗೊಂಡ ಅಲೈಗ್ನೋ ಎಂಬ ದಾರಿಸೂಚಕದ ಡಿಸೈನ್‌ವೊಂದನ್ನು ಕಳುಹಿಸಿದ್ದರು. ತನ್ನ ತಂದೆಯೊಂದಿಗೆ ಕಾರ್ತಿಕ್ ಸಿಂಗಾಪುರದಲ್ಲಿ ಇತ್ತೀಚೆಗೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿಯು ಪ್ರಮಾಣ ಪತ್ರ, ರೆಡ್ ಡಾಟ್‌ನ ಇಯರ್ ಬುಕ್‌ನಲ್ಲಿ ಡಿಸೈನ್‌ನ ಕುರಿತು ಅರ್ಧ ಪುಟದ ಲೇಖನ ಹಾಗೂ ಅವರ ಮ್ಯೂಸಿಯಂನಲ್ಲಿ ಒಂದು ವರ್ಷ ಈ ವಿನ್ಯಾಸ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ.
ಬೆಂಬಲ ನೀಡುತ್ತೇವೆ
ಎಳವೆಯಿಂದಲೂ ಕ್ರಿಯಾಶೀಲವಾಗಿ ಅಲೋಚಿಸ್ತುತಾ,ಏನಾದರೊಂದು ಸಾಧಿಸಬೇಕು ಎಂಬ ಛಲ ಹೊಂದಿದವನು. ಯಾವುದೇ ಕೆಲಸ ಮಾಡುವಾಗಲೂ ನಮ್ಮ ಸಲಹೆ ಪಡೆಯುತ್ತಾನೆ. ಆತನ ಎಲ್ಲ ಆಲೋಚನೆಗಳನ್ನು ಬೆಂಬಲಿಸುತ್ತಿದ್ದೇವೆ ಎನ್ನುತ್ತಾರೆ ಅವರ ತಂದೆ.
ದಾರಿಸೂಚಕದ ಡಿಸೈನ್
ದಾರಿಸೂಚಕದ ಡಿಸೈನ್ ತಯಾರಿಸಲು ಕಾರ್ತಿಕ್ ಆರೇಳು ವರ್ಷದವನಾಗಿದ್ದಾಗ ತಂದೆ ಕೊಡಿಸಿದ್ದ ಭೂಪಟ ಮಾದರಿಯ ಆಟಿಕೆಯಿಂದ ಪ್ರೇರೇಪಣೆಗೊಂಡು ಇದನ್ನು ರೂಪಿಸಿದ್ದರು. ಅದರಲ್ಲಿ ಒಂದು ಲೇಯರ್‌ನಲ್ಲಿ ನಾವು ‘ಫ್ರಮ್ ‘ ಸ್ಥಳ ಹಾಗೂ ಇನ್ನೊಂದರಲ್ಲಿ ‘ಟು’ ಸ್ಥಳವನ್ನು ಆಯ್ಕೆ ಮಾಡಿದರೆ ಮಧ್ಯದಲ್ಲಿ ನಾವು ಸಾಗಬೇಕಾದ ಹಾದಿಯನ್ನು ತೋರಿಸುತ್ತದೆ.
ಮೆಡಿಕಲ್ ಡಿವೈಸ್ ಡಿಸೈನ್
ಮಂಗಳೂರು ನಗರದಲ್ಲೇ ಉದ್ಯಮವೊಂದನ್ನು ಸ್ಥಾಪಿಸಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಮೆಡಿಕಲ್ ಡಿವೈಸ್‌ಗಳ ಡಿಸೈನ್‌ಗಳನ್ನು ಸಿದ್ಧಪಡಿಸುವ ಆಶಯ ಹೊಂದಿದ್ದೇನೆ. ಕೆಲವು ವೈದ್ಯರು, ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ಡಿಸೈನ್ ಸಿದ್ಧಪಡಿಸಲಾಗುವುದು. ಮಾಹಿತಿಗೆ ಆಸಕ್ತರು ಇಮೇಲ್ ವಿಳಾಸ [email protected] ಸಂಪರ್ಕಿಸಿ.
– ಕಾರ್ತಿಕ್
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.