Vitla ಕಾನೂನು ಪದವಿ ಪಡೆದಿದ್ದ ಯುವಕ ಆತ್ಮಹತ್ಯೆ
Team Udayavani, Aug 6, 2024, 11:15 PM IST
![Vitla ಕಾನೂನು ಪದವಿ ಪಡೆದಿದ್ದ ಯುವಕ ಆತ್ಮಹತ್ಯೆ](https://www.udayavani.com/wp-content/uploads/2024/08/byndoor-1-620x365.jpg)
![Vitla ಕಾನೂನು ಪದವಿ ಪಡೆದಿದ್ದ ಯುವಕ ಆತ್ಮಹತ್ಯೆ](https://www.udayavani.com/wp-content/uploads/2024/08/byndoor-1-620x365.jpg)
ವಿಟ್ಲ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿ ಸಮೀಪ ಪಟ್ಲಕೋಡಿ ಎನ್ನುವಲ್ಲಿ ನಡೆದಿದೆ.
ಮಾಣಿ ಪಟ್ಲಕೋಡಿ ನಿವಾಸಿ ತಿಲಕ್ ಪೂಜಾರಿ (34) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಅವಿವಾಹಿತರಾಗಿದ್ದ ಅವರು ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಕೆಲವು ಸಮಯಗಳಿಂದ ಚಾಲಕ ವೃತ್ತಿ ನಿರ್ವಹಿಸುತ್ತಿದ್ದರು.
ಸರಿಯಾಗಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಮನನೊಂದಿದ್ದರು. ಇದರಿಂದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.