ಆಧಾರ್ ಅದಾಲತ್
Team Udayavani, Dec 8, 2017, 10:07 AM IST
ಪುರಭವನ: ಜಿಲ್ಲಾಡಳಿತ ಹಾಗೂ ಇ ಆಡಳಿತ ಕೇಂದ್ರ ಬೆಂಗಳೂರು ಸಹಯೋಗದಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗಾಗಿ ಪುರಭವನದ ಮಿನಿ ವಿಧಾನ ಸೌಧದಲ್ಲಿ ಆಯೋಜಿಸಲಾದ ಆಧಾರ್ ಅದಾಲತ್‌ನಲ್ಲಿ 1000 ಮಂದಿಗೆ ಆಧಾರ್ ವಿತರಿಸಲಾಗಿದ್ದು, 2,849 ಮಂದಿಗೆ ಟೋಕನ್ ನೀಡಲಾಗಿದೆ.
ಡಿ.4ರಿಂದ 7ರ ವರೆಗೆ ಆಯೋಜಿಸಲಾದ ಅದಾಲತ್‌ನಲ್ಲಿ ಮೊದಲ ದಿನ 98 ಮಂದಿಯ ಆಧಾರ್ ನೋಂದಣಿಯಾಗಿದ್ದು, 152 ಮಂದಿಯ ಆಧಾರ್ ತಿದ್ದುಪಡಿ ಮಾಡಲಾಗಿದೆ. ಎರಡನೇ ದಿನ 101 ಮಂದಿ ನೋಂದಣಿ ಮಾಡಿದ್ದು, 149 ತಿದ್ದುಪಡಿ, ಮೂರನೇ ದಿನ 76 ಮಂದಿ ನೋಂದಣಿ ಹಾಗೂ 174 ತಿದ್ದುಪಡಿ, ಕೊನೆಯ ದಿನ 252 ಮಂದಿಗೆ ಆಧಾರ್ ನೀಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಕೌಂಟರ್
ಆಧಾರ್ ಅದಾಲತ್‌ನಲ್ಲಿ ಟೋಕನ್ ನೀಡಿದವರಿಗೆ ನಿಗದಿಪಡಿಸಲಾದ ದಿನಾಂಕದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಕೌಂಟರ್ ತೆರೆದು ನೋಂದಣಿ ಪ್ರಕ್ರಿಯೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಬೇರೆ ರಾಜ್ಯಗಳ ಜನರಿಂದ ಗೊಂದಲ
ಕಳೆದ ಮೂರು ದಿನಗಳಿಂದ ಆಧಾರ್ ಆದಾಲತ್ ಆಯೋಜಿಸಲಾಗಿದ್ದು, ಬೇರೆ ರಾಜ್ಯಗಳಿಂದ ಸೂಕ್ತ ದಾಖಲೆಗಳಿಲ್ಲದ ಕೂಲಿ ಕಾರ್ಮಿಕರು ಆಗಮಿಸಿದ್ದರಿಂದ ಗೊಂದಲಗಳು ಉಂಟಾಗಿವೆ. ಟೋಕನ್ ನೀಡಲಾದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಲಾದ ವಿಶೇಷ ಕೌಂಟರ್‌ನಲ್ಲಿ ಆಧಾರ್ ವಿತರಿಸಲಾಗುವುದು ಎಂದು ಆಧಾರ್ ಸಂಯೋಜಕರು ತಿಳಿಸಿದ್ದಾರೆ.
ಶೇ.96 ಆಧಾರ್ ವಿತರಣೆ
2017ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 22,11,587 ಜನಸಂಖ್ಯೆ ಇದ್ದು, ಇದರಲ್ಲಿ 21,30,024 ಮಂದಿಗೆ ಆಧಾರ್ ವಿತರಿಸಲಾಗಿದೆ. ಪ್ರಸ್ತುತ ಶೇ.96 ಮಂದಿಗೆ ಆಧಾರ್ ನೀಡಲಾಗಿದ್ದು, ಶೇ.3 ಮಂದಿಗೆ ವಿತರಣೆ ಬಾಕಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.