“ಆರದಿರಲಿ ಬದುಕು ಸೇವಾ ತಂಡದ ಸಂಭ್ರಮ’
ಕೊಡಗು ಸಂತ್ರಸ್ತ ಕುಟುಂಬಕ್ಕೆ ಸಹಾಯಧನ ವಿತರಣೆ
Team Udayavani, May 23, 2019, 6:03 AM IST
ಮೂಡುಬಿದಿರೆ: ಒಂಬತ್ತು ತಿಂಗಳ ಹಿಂದೆ ರೂಪುಗೊಂಡು ಅಶಕ್ತರ ಅಳಲಿಗೆ ಸ್ಪಂದಿಸುತ್ತ ಬರುತ್ತಿರುವ “ಆರದಿರಲಿ ಬದುಕು – ಆರಾಧನಾ ಸೇವಾ ತಂಡ’ ವಾಟ್ಸಪ್ ಗ್ರೂಪ್ ವತಿಯಿಂದ ಕೊಡಗಿನ ಸಂತ್ರಸ್ತೆ ವನಜಾಕ್ಷಿ ಅವರಿಗೆ 35,000 ರೂ. ನೆರವನ್ನು ಹೊಸನಾಡು ಕೊಡ್ಯಡ್ಕ ಶ್ರೀ ದೇವೀ ಅನ್ನಪೂರ್ಣೇಶ್ವರೀ ಕ್ಷೇತ್ರದ ಸಭಾಂಗಣದಲ್ಲಿ ನಡೆದ “ಸಂಭ್ರಮ’ ಕಾರ್ಯಕ್ರಮದಲ್ಲಿ ನೀಡಲಾಯಿತು.
ಉದ್ಯಮಿ ಕೆ. ಶ್ರೀಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಕಲೆಯ ಮೂಲಕಗಳಿಸಿದ್ದನ್ನು, ಸಹೃದಯರ ಧನಾತ್ಮಕ ಸಹಕಾರದೊಂದಿಗೆ ಸಮಾಜ ಸೇವೆಗೆ ಮುಡಿ ಪಾಗಿಡುತ್ತಿರುವಲ್ಲಿ ಪತ್ರ ಕರ್ತೆ ಪದ್ಮಶ್ರೀ ಭಟ್ ನಿಡ್ಡೋಡಿ, ಅವರ ಪುತ್ರಿ ಉದಯೋನ್ಮುಖ ಬಾಲನಟಿ ಆರಾಧನಾ ಭಟ್ ನೇತೃತ್ವದ “ಆರದಿರಲಿ ಬದುಕು’ ತಂಡ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಹರೀಶ್ ಕೆ. ಆದೂರು ಅವರು ಬದುಕಿನಲ್ಲಿ ಕನಸು ಕಾಣುವುದು, ಅದನ್ನು ನನಸಾಗಿಸಲು ಪರಿಶ್ರಮ ಪಡುವುದು ಮುಖ್ಯ. ಸೂಕ್ತ ಆಯ್ಕೆಯಿಂದ ಸುಂದರ ಬದುಕು ಸಾಧ್ಯ ಎಂದು ಹೇಳಿದರು.
ಯುವ ವಾಗ್ಮಿ ಭಕ್ತಿಶ್ರೀ ಆಚಾರ್ಯ ಬೆಳುವಾಯಿ ಪ್ರಧಾನ ಭಾಷಣ ಮಾಡಿ, ರಾಷ್ಟ್ರೀಯತೆಯ ಚಿಂತನೆ ನಮ್ಮಲ್ಲಿರ ಬೇಕಾಗಿದೆ, ಅಂಥ ಸಂಸ್ಕಾರಯುತ ಜೀವನ ನಮ್ಮದಾಗ ಬೇಕಾಗಿದೆ ಎಂದರು.
ಪತ್ರಕರ್ತ ಡಾ| ಶೇಖರ ಅಜೆಕಾರು ಅವರು ಸಮಗ್ರತೆಯ ಕಲ್ಪನೆ, ಚಿಂತನೆ ಮುಖ್ಯ. ಯಾವುದೇ ಇಸಂ ಅನ್ನು ಮಕ್ಕಳ ಮೇಲೆ ಹೇರಬಾರದು ಎಂದು ಕಿವಿಮಾತು ಹೇಳಿದರು.
ಮುಖ್ಯಅತಿಥಿಗಳಾಗಿ, ಪತ್ರಕರ್ತರಾದ ಪ್ರಸನ್ನ ಹೆಗ್ಡೆ, ಯಶೋಧರ ವಿ. ಬಂಗೇರ, ಜವನೆರ್ ಬೆದ್ರದ ಸ್ಥಾಪಕ ಅಮರ್ ಕೋಟೆ ಪಾಲ್ಗೊಂಡಿದ್ದರು. ಆಳ್ವಾಸ್ ಪ್ರೌಢಶಾಲಾ ವಿದ್ಯಾರ್ಥಿನಿ, ಚಲನಚಿತ್ರ ಬಾಲನಟಿ ಆರಾಧನಾ ಭಟ್ ಉಪಸ್ಥಿತರಿದ್ದರು.
“ಆರದಿರಲಿ ಬದುಕು’ತಂಡದ ಸದಸ್ಯರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.ಕಾರ್ಯಕ್ರಮದ ಸಂಯೋಜಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸ್ವಾಗತಿಸಿದರು.ತಂಡದ ಸದಸ್ಯ ನಾಗರಾಜ ಅಂಬೂರಿ ಪ್ರಸ್ತಾವನೆಗೈದರು.ನಾಗರಾಜ ಬಾಳೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ಕೊಡ್ಯಡ್ಕ ವಂದಿಸಿದರು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.