ದೇಗುಲಗಳಲ್ಲಿ ಸಲಾಂ ಆರತಿ ಬದಲು ಆರತಿ ನಮಸ್ಕಾರ; ಟಿಪ್ಪು ಕಾಲದ ಪದ್ಧತಿ ಕೈಬಿಡಲು ನಿರ್ಧಾರ
ಧಾರ್ಮಿಕ ಪರಿಷತ್ ನಿರ್ಣಯ, ಶೀಘ್ರ ಸುತ್ತೋಲೆ
Team Udayavani, Dec 10, 2022, 7:15 AM IST
ಮಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇಗುಲ ಗಳಲ್ಲಿ ಟಿಪ್ಪು ಆಳ್ವಿಕೆ ಸಂದರ್ಭ ಜಾರಿಗೆ ತಂದಿದ್ದ “ದೀವಟಿಗೆ ಸಲಾಂ’ ಎಂಬ ಪದವನ್ನು ಕೈಬಿಡಲು ಇಲಾಖೆ ತೀರ್ಮಾನಿಸಿದೆ.
ಈ ಕುರಿತು ಈಗಾಗಲೇ ಧಾರ್ಮಿಕ ಪರಿಷತ್ ಅಂತಿಮ ನಿರ್ಣಯ ಕೈಗೊಂಡಿದ್ದು, “ಸಲಾಂ ಆರತಿ’ ಪದದ ಬದಲಾಗಿ “ಆರತಿ ನಮಸ್ಕಾರ’ ಹಾಗೂ “ಸಲಾಂ ಮಂಗಳಾ ರತಿ’ ಬದಲು “ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಾಯಿಸಿ, ಸೇವೆಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ತೀರ್ಮಾನಿಸಿದೆ. ಈ ಬಗ್ಗೆ ಇಲಾಖೆಯಿಂದ ಶೀಘ್ರ ಸುತ್ತೋಲೆ ಹೊರಡಿಸಲಾಗುವುದು.
ಸಲಾಂ ಪದವು ಸಂಸ್ಕೃತ ಭಾಷೆಯದ್ದಲ್ಲ, ಹಾಗಾಗಿ ಹಿಂದೂ ಧಾರ್ಮಿಕ ದತ್ತಿ ದೇವಾ ಲಯಗಳಲ್ಲಿ ಸಂಸ್ಕೃತ ಪದಗಳಿಂದ ಹೇಗೆ ದೇವರ ಸೇವೆಗಳನ್ನು ನಡೆಸಲಾಗುತ್ತದೆಯೋ ಅದೇ ರೀತಿ ಸಲಾಂ ಬದಲಿಗೆ ಬೇರೆ ಸಂಸ್ಕೃತ ಪದವನ್ನು ಬಳಸಬೇಕು ಎಂದು ಪರಿಷತ್ ಸದಸ್ಯರು ಹೇಳಿದ್ದರು.
ಈ ಬಗ್ಗೆ ಆಗಮ ಪಂಡಿತರೊಂದಿಗೆ ಕೂಡ ಚರ್ಚಿಸಲಾಗಿದ್ದು, ಯಾವುದೇ ಪೂಜಾ ವಿಧಿ ವಿಧಾನಗಳಲ್ಲಿ, ಸೇವಾ ಕಾರ್ಯಗಳಲ್ಲಿ ಬದಲಾವಣೆ ಯಾಗುವುದಿಲ್ಲ. ಎಲ್ಲ ಸೇವಾ ಕಾರ್ಯಗಳು ಹಿಂದಿನಿಂದ ನಡೆದು ಬಂದ ರೂಢಿ, ಸಂಪ್ರದಾಯ ಪದ್ಧತಿ ಯಂತೆಯೇ ನಡೆಯುತ್ತವೆ. “ಸಲಾಂ’ ಪದ ಮಾತ್ರ ಕಳಚಿಕೊಂಡು ನಮಸ್ಕಾರ ಎಂಬ ಸಂಸ್ಕೃತ ಪದವನ್ನು ಬಳಸಿಕೊಳ್ಳಲಾಗುತ್ತದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯಾದ್ಯಂತ ಈ ಆಚರಣೆ ಇದೆ.
“ಮುಜರಾಯಿ’ ಪದ ಬಳಕೆಯೂ ಬೇಡ
ಪರ್ಷಿಯನ್ ಪದವಾದ “ಮುಜರಾಯಿ’ ಬಳಕೆಯನ್ನು ಕೂಡ ಹಿಂದೆಯೇ ಕೈಬಿಡಲಾಗಿತ್ತು. ಆದರೂ ಈಗಲೂ ಅದು ರೂಢಿ ಯಲ್ಲಿದೆ. ಆದರೆ ಇನ್ನು ಮುಂದೆ ಆ ಪದ ಬಳಕೆ ಮಾಡಬಾರದು. “ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿ ಇಲಾಖೆ’ ಎಂದೇ ಕರೆಯಬೇಕು ಎಂಬ ಸುತ್ತೋಲೆಯನ್ನೂ ಕಳುಹಿಸಲು ತೀರ್ಮಾನಿಸಲಾಗಿದೆ.
” ದೀವಟಿಗೆ ಸಲಾಂ’ ಎನ್ನುವುದು ಟಿಪ್ಪು ಸುಲ್ತಾನ್ ಆಡಳಿತದ ಸಂದರ್ಭ ಇದ್ದ ಆಚರಣೆ. ಹೊಸ ತೀರ್ಮಾನ ದಂತೆ ಇನ್ನು ಮುಂದೆ ನಮ್ಮ ರಾಜ್ಯವನ್ನಾಳುವವರು ಹಾಗೂ ಜನತೆಗೆ ಒಳಿತಾಗಲಿ ಎಂಬ ಆಶಯದೊಂದಿಗೆ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಪದ್ಧತಿಯ ಹೆಸರು ಮಾತ್ರ “ಆರತಿ ನಮಸ್ಕಾರ’ ಎಂದಿರುತ್ತದೆ. ಶೀಘ್ರವೇ ಇದರ ಸುತ್ತೋಲೆ ದೇವಾಲಯಗಳಿಗೆ ತಲಪಲಿದೆ.
– ಕಶೆಕೋಡಿ ಸೂರ್ಯನಾರಾಯಣ ಭಟ್,
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.