“ಕಾರ್ಮಿಕ ಕಾನೂನಿನ ಸಮಗ್ರ ಅರಿವು ಅಗತ್ಯ’
Team Udayavani, May 9, 2019, 6:10 AM IST
ಮಹಾನಗರ: ಖ್ಯಾತ ನ್ಯಾಯ ವಾದಿಗಳಾದ ಚಂದ್ರಶೇಖರ ಹೊಳ್ಳ ಕೆ.,ಲತಾ ಸಿ.ಎಸ್. ಹೊಳ್ಳ ಅವರು ಕಾರ್ಮಿಕ ಕಾನೂನುಗಳ ಕುರಿತಂತೆ ಬರೆದ “ವೇಜಸ್ ಆ್ಯಂಡ್ ಲೇಬರ್ ಲಾ ಸ್’ ಮತ್ತು “ಲೇಬರ್ ಲಾ ಸ್ ಇನ್ ನಟೆÕಲ್’ ಎಂಬ ಎರಡು ಪುಸ್ತಕಗಳ ಬಿಡುಗಡೆ ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆಯಿತು.
ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ್ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಬರಹಗಾರ, ಕಲಾವಿದ ಜೀವನದ ಅನಂತರವೂ ಬದುಕಿರುತ್ತಾರೆ. ಬರಹಗಾರನ ಪ್ರತೀ ಬರೆಹವೂ ಎಂದೆಂದಿಗೂ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕ ಕಾನೂನಿನ ಕುರಿತಂತೆ ಜನಸಾಮಾನ್ಯರಲ್ಲಿ ಇರುವ ಸಮಸ್ಯೆ ಸವಾಲುಗಳಿಗೆ, ಸಂಸ್ಥೆಯ ಮುಖ್ಯಸ್ಥರಿಗೆ ಆವಶ್ಯಕ ಮಾಹಿತಿ ನೀಡುವ ಮಹತ್ವದ ಪುಸ್ತಕವನ್ನು ಬಿಡುಗಡೆ ಮಾಡಿರುವುದು ಸಂತಸದ ವಿಚಾರ. ಈ ಪುಸ್ತಕದ ಮುಖೇನ ಕಾರ್ಮಿಕರ, ಸಂಬಂಧಿತ ಕಂಪೆನಿಯವರಿಗೆ ಪೂರಕ ಮಾಹಿತಿಗಳು ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಚಂದ್ರಶೇಖರ ಹೊಳ್ಳ ಕೆ., ಲತಾ ಸಿ.ಎಸ್. ಹೊಳ್ಳ ಅವರು ಈ ಹಿಂದೆ ಮೂರು ಪುಸ್ತಕಗಳನ್ನು ಸಮಾಜಕ್ಕೆ ನೀಡಿದ್ದು, ಅದರ ಮುಖೇನ ಕಾರ್ಮಿಕ ಕಾನೂನಿನ ಸಂಬಂಧಿತ ಮಹತ್ವದ ಮಾಹಿತಿಗಳು ಜನರಿಗೆ ಲಭ್ಯವಾಗುತ್ತಿದೆ. ಇಂತಹ ಸಮಾಜಮುಖೀ ಕಾರ್ಯ ಇನ್ನಷ್ಟು ನಡೆಯುತ್ತಿರಲಿ ಎಂದು ಅವರು ಹೇಳಿದರು.
ದ.ಕ. ಕಾರ್ಮಿಕ ಇಲಾಖೆಯ ಆಫೀಸರ್ ವಿಲ್ಮಾ ತವ್ರೋ ಮಾತನಾಡಿ, ಕಾರ್ಮಿಕರ ವೇತನ ಕುರಿತಂತೆ ಇರುವ ಕಾನೂನುಗಳ ಬಗ್ಗೆ ಚಂದ್ರಶೇಖರ ಹೊಳ್ಳ ಕೆ., ಲತಾ ಸಿ.ಎಸ್. ಹೊಳ್ಳ ಅವರು ಅತ್ಯುತ್ತಮವಾಗಿ ಈ ಹಿಂದಿನ ಮೂರು ಪುಸ್ತಕದಲ್ಲಿ ವಿವರ ನೀಡಿದ್ದಾರೆ. ಇದೀಗ ನಾಲ್ಕು, ಐದನೇ ಪುಸ್ತಕವು ಇದೇ ವಿಚಾರದಲ್ಲಿ ಪ್ರಕಟಗೊಳ್ಳುತ್ತಿರುವುದು ಉತ್ತಮ ವಿಚಾರ ಎಂದು ಶ್ಲಾಘಿಸಿದರು.
ಪುಸ್ತಕದ ಲೇಖಕರು, ಚಂದ್ರಶೇಖರ ಹೊಳ್ಳ ಕೆ., ಲತಾ ಸಿ.ಎಸ್. ಹೊಳ್ಳ ಅವರುಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಆವರು ವಂದಿಸಿದರು. ಶಶಿಧರ ಆಚಾರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.