ಅಪಾರ ಪ್ರಮಾಣದ ಆಸ್ತಿ ಪತ್ತೆ
ಭೂವಿಜ್ಞಾನ ಇಲಾಖೆ ಎಂಜಿನಿಯರ್ ಮನೆ ಮತ್ತು ಕಚೇರಿಗೆ ಎಸಿಬಿ ದಾಳಿ
Team Udayavani, Jun 13, 2019, 5:00 AM IST
ಮಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ದಳದದ.ಕ. ಪೊಲೀಸರು ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನಇಲಾಖೆಯ ಎಂಜಿನಿಯರ್ ಎಸ್. ಮಹದೇವಪ್ಪ ಅವರ ಮನೆ ಮತ್ತು ಕಚೇರಿಗಳಿಗೆ ದಾಳಿ ಮಾಡಿದ್ದಾರೆ. ಮಂಗಳೂರಿನ ಕದ್ರಿ ಕಂಬಳದ ಬಾಡಿಗೆ ಮನೆ, ಬೆಂಗಳೂರಿನ ಡ್ಯೂಪ್ಲೆಕ್ಸ್ ಮನೆ, ಚಿತ್ರದುರ್ಗದ 1 ಮನೆ ಮತ್ತು ಮಂಗಳೂರಿನ ಕಚೇರಿ ಸೇರಿದಂತೆ ಒಟ್ಟು 4 ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.
ದಾಳಿ ಸಂದರ್ಭ 5 ನಿವೇಶನ, ಚಿಕ್ಕಮಗಳೂರು, ಚಿತ್ರದುರ್ಗಗಳಲ್ಲಿ 18 ಎಕರೆ ಕೃಷಿ ಜಮೀನು, 3.11 ಲಕ್ಷ ರೂ. ನಗದು, 2150 ಯುಎಸ್ ಡಾಲರ್, 4800 ಹಾಂಕಾಂಗ್ ಡಾಲರ್, ವಿವಿಧ ಬ್ಯಾಂಕ್‌ಗಳಲ್ಲಿ 6.49 ಲಕ್ಷ ರೂ., ಎಫ್ಡಿ ಖಾತೆಯಲ್ಲಿ 12 ಲಕ್ಷ ರೂ. ಮತ್ತು ಚಿನ್ನಾಭರಣಗಳು, ಎಲ್ಐಸಿ ಪಾಲಿಸಿಗಳು ಪತ್ತೆಯಾಗಿವೆ.
ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಎಸಿಬಿ ಡಿವೈಎಸ್‌ಪಿ ಮಂಜುನಾಥ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಮೋಹಭ್ ಕೊಟ್ಟಾರಿ, ಜಯರಾಂ ಗೌಡ ಅವರು ಬೆಳಗ್ಗೆ 5.30 ಕ್ಕೆ ದಾಳಿ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.