ಲಂಚ ಸ್ವೀಕಾರ: ಪುತ್ತೂರಿನ ಸರ್ವೇಯರ್ ಎಸಿಬಿ ಬಲೆಗೆ
Team Udayavani, Oct 5, 2019, 4:17 AM IST
ಉಪ್ಪಿನಂಗಡಿ: ಪುತ್ತೂರಿನ ಭೂಮಾಪಕ ಅಧಿಕಾರಿ ಶಿವಕುಮಾರ್ ಅವರು ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹಿರೇಬಂಡಾಡಿ ಗ್ರಾಮದ ಹೆನ್ನಾಳ ನಿವಾಸಿ ಗೋಪಾಲ ಮುಗೇರ ಎಂಬವರು ಕುಟುಂಬದ ಜಾಗ ವನ್ನು ಅಳತೆ ಮಾಡಿ ಕೊ ಡಲು 2015ರ ಜನ ವರಿ 21ರಂದು ಅರ್ಜಿ ಸಲ್ಲಿಸಿದ್ದರು. ಅಳತೆ ಮಾಡಿಕೊಡಲು ಭೂಮಾಪಕರು 30,000 ರೂ. ನೀಡಬೇಕು ಬೇಡಿಕೆ ಇರಿಸಿದ್ದರು. ಇದರಂತೆ ಶುಕ್ರವಾರ ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ಹೊಟೇಲೊಂದರ ಎದುರು ಮುಂಗಡವಾಗಿ 5,000 ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಸಿಬಿ ಪ್ರಭಾರ ವರಿಷ್ಠಾಧಿಕಾರಿ ಸುಧೀರ್ ಎಂ. ಹೆಗ್ಡೆ , ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್, ಯೋಗೀಶ್ ಕುಮಾರ್, ಹೆಡ್ ಕಾನ್‌ಸ್ಟೆಬಲ್ ಹರಿಪ್ರಸಾದ್, ರಾಧಾಕೃಷ್ಣ ಕೆ., ಉಮೇಶ್, ರಾಧಾಕೃಷ್ಣ ಡಿ. ಎ., ಸಿಬಂದಿ ವರ್ಗದ ಪ್ರಶಾಂತ್, ವೈಶಾಲಿ, ರಾಕೇಶ್, ರಾಜೇಶ್, ಗಣೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.