ಪರಿಶಿಷ್ಟರ ಕುಂದುಕೊರತೆಗಳ ಅಹವಾಲು ಸ್ವೀಕಾರ

Team Udayavani, Feb 1, 2018, 3:34 PM IST

1-Feb-17.jpg

ಬೆಳ್ತಂಗಡಿ : ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪ್ರಾದೇಶಿಕ ಕಚೇರಿ ಮಂಗಳೂರಿನ ಪೊಲೀಸ್‌ ಅಧೀಕ್ಷಕ ಸಿ.ಬಿ. ವೇದಮೂರ್ತಿ ಅವರು ಬುಧವಾರ ಬೆಳ್ತಂಗಡಿ ತಾಲೂಕು ಪ್ರವಾಸದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕುಂದುಕೊರತೆಗಳ ಅಹವಾಲು ಸ್ವೀಕಾರ ನಡೆಸಿದರು.

ದೌರ್ಜನ್ಯ: ತನಿಖೆಗೆ ಸೂಚನೆ
ಕೊಯ್ಯೂರಿನ ಪಿಜಕ್ಕಳದ ಪಿಜಕ್ಕರೆ ಎಂಬ ಮಹಿಳೆ ಪಕ್ಕದ ಜಾಗದ ಚನನ ಗೌಡ ಅವರು ದೌರ್ಜನ್ಯ ನಡೆಸುತ್ತಿದ್ದಾರೆ, ಕೋವಿ ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ, ಪೊಲೀಸರು ಬಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಎಸ್‌ಐ ಅವರಿಗೆ ಈ ಕುರಿತು ತನಿಖೆ ನಡೆಸುವಂತೆ ಎಸ್‌ಪಿ ಸೂಚಿಸಿದರು.

ಪೈಪ್‌ಲೈನ್‌ಗೆ ತಕರಾರು
ಉಜಿರೆ ಸಿದ್ಧವನ ಸಮೀಪ ನೇಮಣ್ಣ ನಾೖಕ ಅವರಿಗೆ ಪಂ. ಮೂಲಕ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗೆ ಪಕ್ಕದ ಜಾಗದವರು ತಕರಾರು ಮಾಡಿ ನೀರಿಗೆ ಅಡ್ಡಿ ಮಾಡುತ್ತಿದ್ದಾರೆ ಎಂಬ ದೂರು ಬಂದಾಗ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೂಲಕ ಉಜಿರೆ ಪಿಡಿಒ ಅವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ದಾರಿ ಸಮಸ್ಯೆ
ಕುಕ್ಕೇಡಿ ಪಂ.ನ ನಿಟ್ಟಡೆಯಲ್ಲಿ ಕಾರ್ತಿಕ್‌ ರಾಜ್‌ ಅವರಿಗೆ ಅಪ್ಪಿ ಎಂಬವರಿಂದ ದಾರಿ ಸಮಸ್ಯೆ ಇದೆ ಎಂದು ದೂರು ನೀಡಿದರು. ಕಡಿರುದ್ಯಾವರದ ಮಾದ ದೂರು ನೀಡಿದ್ದು, ಜಾಗದಲ್ಲಿ ಅಕ್ರಮವಾಗಿ ಮೆಸ್ಕಾಂ ಲೈನ್‌ ಅಳವಡಿಸಲಾಗಿದೆ ಎಂದರು. ಆದರೆ ಈಗಾಗಲೇ ಇದ್ದ ಕಂಬದಲ್ಲಿ ಎಲ್‌ಟಿ ಲೈನ್‌ ತೆಗೆದು ಅದೇ ಕಂಬದಲ್ಲಿ ಎಚ್‌ಟಿ ಲೈನ್‌ ಹಾಕಲಾಗಿದೆ ಎಂದು ಮೆಸ್ಕಾಂ ಹಾಗೂ ಪೊಲೀಸರು ಸ್ಪಷ್ಟನೆ ನೀಡಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಸವರಾಜ್‌ ಅಯ್ಯಣ್ಣನವರ್‌, ಉಪತಹಶೀಲ್ದಾರ್‌ ರಾಮಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಲಕ್‌ ಪ್ರಸಾದ್‌, ತೋಟಗಾರಿಕೆ ಅಧಿಕಾರಿ ಶಿವಪ್ರಕಾಶ್‌, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಿಯಾ ಆಗ್ನೆಸ್‌, ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌, ಸಬ್‌ ಇನ್ಸ್‌ ಪೆಕ್ಟರ್‌ ರವಿ, ನಗರ ಪಂ. ಯೋಜನಾಧಿಕಾರಿ ವೆಂಕಟರಮಣ ಶರ್ಮ ಮೊದಲಾದವರಿದ್ದರು. 

ಬಾಲಕಿಯರ ಹಾಸ್ಟೆಲ್‌ಗೆ ಭೇಟಿ
ಇದಕ್ಕೂ ಮುನ್ನ ವೇದಮೂರ್ತಿಅವರು ಚರ್ಚ್‌ ರೋಡ್‌ನ‌ಲ್ಲಿರುವ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ ಸೌಲಭ್ಯಗಳ ಕುರಿತು ವಿಚಾರಿಸಿದರು. ಪಡಿತರದ ಲೆಕ್ಕಾಚಾರ ಸರಿಯಾಗಿ ನೋಡಿಕೊಳ್ಳುವಂತೆ ನಿರ್ದೇಶಿಸಿದರು.

ನಕಲಿ ಜಾತಿ ಪ್ರಮಾಣಪತ್ರ: ಪ್ರಕರಣ ದಾಖಲು
ಪತ್ರಕರ್ತರೊಂದಿಗೆ ವೇದಮೂರ್ತಿ ಅವರು ಮಾತನಾಡಿ, ನಕಲಿ ಜಾತಿ ಪ್ರಮಾಣಪತ್ರ ಕೊಡುವ ಕಾರ್ಯ ಕೆಲವೆಡೆ ನಡೆದಿದ್ದು ಹೊರ ರಾಜ್ಯದವರಿಗೆ ಅನಧಿಕೃತವಾಗಿ, ಪರಿಶೀಲನೆ ನಡೆಸದೆ ಜಾತಿ ಪ್ರಮಾಣಪತ್ರ ನೀಡಿದ ಅಂತಹ ಕೆಲವು ಕಂದಾಯ ನಿರೀಕ್ಷಕರು ಹಾಗೂ ಗ್ರಾಮಕರಣಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾದ ಅನುದಾನ ಖರ್ಚಾಗದೇ ಉಳಿದಲ್ಲಿ, ದುರುಪಯೋಗವಾದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ತಂದರೆ ಕ್ರಮ ವಹಿಸಲಾಗುತ್ತದೆ ಎಂದರು.

ವೆಚ್ಚ  ಭರಿಸುತ್ತಿಲ್ಲ, ವಿಮಾ ಹಣ ಬಂದಿಲ್ಲ
ಪರಿಶಿಷ್ಟ ಜಾತಿ, ಪಂಗಡದವರಿಗೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹೋಗಲು ವೆಚ್ಚವನ್ನು ಇಲಾಖೆಯಿಂದ ಭರಿಸುವ ಕಾಯ್ದೆ ಇದ್ದರೂ ನೀಡಲಾಗುತ್ತಿಲ್ಲ ಎಂದು ಸಿ.ಕೆ. ಚಂದ್ರಕಲಾ ದೂರಿದರು. ನಗರ ಪಂ. ವತಿಯಿಂದ ನೀಡಲಾಗುತ್ತಿರುವ ಆರೋಗ್ಯ ವಿಮೆಯಲ್ಲಿ ಸೀಮಿತ ಆಸ್ಪತ್ರೆಗಳು ಇರುವ ಕಾರಣ ಎಲ್ಲ ಪರಿಶಿಷ್ಟರಿಗೆ ಅನುಕೂಲವಾಗುತ್ತಿಲ್ಲ. ಅನೇಕರಿಗೆ ವಿಮಾ ಹಣ ಬಂದಿಲ್ಲ ಎಂದು ದಲಿತ ಹೋರಾಟಗಾರ ಸಂಜೀವ ಆರ್‌. ಹೇಳಿದರು. ಈ ಬಗ್ಗೆ ಗಮನ ಹರಿಸುವಂತೆ ಎಸ್‌ಪಿ ಅವರು ನ.ಪಂ. ಅಧಿಕಾರಿಗೆ ಸೂಚಿಸಿದರು.

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.