![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 10, 2019, 6:06 AM IST
ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಬಳಿಯ ಕೊಳುವೈಲು ಪ್ರದೇಶದಲ್ಲಿನ ಗುಡ್ಡೆ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಆವರಿಸಿದ್ದನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ಸೇರಿಕೊಂಡು ನಂದಿಸಿದ ಘಟನೆ ನಡೆದಿದೆ.
ಗುರುವಾರ ಮಧ್ಯಾಹ್ನ ಸ್ಥಳೀಯ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿಯಲ್ಲಿ ವಿದ್ಯುತ್ ತಂತಿಯ ಮೇಲೆ ತೆಂಗಿನ ಗರಿ ಬಿದ್ದು ಅದರಿಂದ ಬೆಂಕಿಯ ಕಿಡಿಯೊಂದು ಒಣ ಪ್ರದೇಶದಲ್ಲಿದ್ದ ಒಣಹುಲ್ಲಿಗೆ ಹಬ್ಬಿತ್ತು. ಏಕಾಏಕಿ ಸುತ್ತಮುತ್ತ ದಟ್ಟ ಹೊಗೆ ಯಂತಾಗಿ ಸ್ಥಳೀಯವಾಗಿ ಬೆಂಕಿಯ ಕೆನ್ನಾಲಿಗೆ ಹರಡಿತ್ತು. ಹಳೆಯಂಗಡಿ ಗ್ರಾ. ಪಂ. ಸದಸ್ಯ ವಿನೋದ್‌ಕುಮಾರ್ ಕೊಳುವೈಲು ಅವರು ಮಂಗಳೂರಿನ ಅಗ್ನಿಶಾಮಕ ಕೇಂದ್ರಕ್ಕೆ ಮಾಹಿತಿ ನೀಡಿದರು. ಈ ನಡುವೆ ಸ್ಥಳೀಯ ಹಳೆಯಂಗಡಿ ಫ್ರೆಂಡ್ಸ್‌ನ ಸದಸ್ಯರು ಹಾಗೂ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನ ನಡೆಸಿದರು.
ಈ ಬಗ್ಗೆ ಹಳೆಯಂಗಡಿ ಗ್ರಾ.ಪಂ. ಸದಸ್ಯ ವಿನೋದ್‌ಕುಮಾರ್ ಕೊಳು ವೈಲು ಪ್ರತಿಕ್ರಿಯಿಸಿ ಹಳೆಯಂಗಡಿ ಪೇಟೆ ಅಭಿವೃದ್ಧಿ ಹೊಂದಿದಂತೆ ಕೊಳುವೈ ಲಿನಂತಹ ಅನೇಕ ತಿರುವು ರಸ್ತೆಗಳು ಸಹ ಅಭಿವೃದ್ದಿ ಕಾಣಬೇಕು ತುರ್ತಾಗಿ ಬಂದ ಅಗ್ನಿಶಾಮಕ ವಾಹನವು ಸಿಲುಕಿರುವುದಕ್ಕೆ ನಿದರ್ಶನವಾಗಿದೆ ಎಂದರು.
ಸಿಲುಕಿಕೊಂಡ ವಾಹನ
ಹಳೆಯಂಗಡಿ ಮುಖ್ಯ ಪೇಟೆಯಿಂದ ಕೊಳುವೈಲು ರಸ್ತೆ ತಿರುವು ತೀವ್ರ ಇಕ್ಕಟ್ಟಾಗಿದ್ದು ಅಗ್ನಿಶಾಮಕ ದಳದ ವಾಹನವು ತಿರುವಿನಲ್ಲಿಯೇ ಸಿಲುಕಿಕೊಂಡು ಕ್ಷಣಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು ಕೊನೆಗೆ ಹತ್ತಾರು ಬಾರಿ ಮುಂದೆ ಹಿಂದೆ ಚಲಿಸಿ ಬೆಂಕಿ ಬಿದ್ದಿರುವ ಸ್ಥಳಕ್ಕೆ ತೆರಳಿತು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.