ಖಾತೆ: ಶಾಸಕರ ನಿಯೋಗದಿಂದ ಸರಕಾರಕ್ಕೆ ಒತ್ತಡ ನಿರ್ಧಾರ
Team Udayavani, Aug 6, 2017, 6:50 AM IST
ಪುತ್ತೂರು: ಖಾತೆ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ಶಾಸಕಿ ನೇತೃತ್ವದ ನಿಯೋಗ ಸರಕಾರವನ್ನು ಒತ್ತಾಯಿಸಬೇಕು. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿ, ಶಾಸಕರನ್ನು ಭೇಟಿಯಾಗುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲಾ°ಡು ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ಸಮುದಾಯ ಭವನದಲ್ಲಿ ನಡೆದ ವರ್ತಕರ, ದಾಸ್ತಾವೇಜು ಬರಹಗಾರರ, ಕಟ್ಟಡ ಮಾಲಕರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ ಮಾತನಾಡಿ, ನೀವೇ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಶಾಸಕರನ್ನು ಕರೆಯಬೇಕಿತ್ತು ಎಂದು ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಮಹಮ್ಮದ್ ರಫೀಕ್, ಜನ ಸಾಮಾನ್ಯರಿಗೆ ಸಮಸ್ಯೆ ಆಗಬಾರದು ಎಂದರು. ಪ್ರತಿಕ್ರಿಯಿಸಿದ ಮಹಮ್ಮದಾಲಿ, ಶಾಸಕರನ್ನು ಸಭೆಗೆ ಬನ್ನಿ ಎಂದು ಕರೆಯಲು ಸಾಧ್ಯವಾಗಿಲ್ಲ. ನಗರಸಭೆ ಪರಿಮಿತಿಯೊಳಗೆ ಕೆಲಸ ಮಾಡಿದ್ದೇವೆ. ಇಲ್ಲಿ ಕೈಗೊಂಡ ನಿರ್ಣಯದ ಆಧಾರದ ಮೇಲೆ ಕ್ರಮ ಕೈಗೊಳ್ಳುವ ತೀರ್ಮಾನ ನಮ್ಮದಾ ಗಿತ್ತು ಎಂದರು.
ನಿಯೋಗ ತೆರಳುವುದು ಒಳಿತು
ರವಳನಾಥ ಪ್ರಭು ಮಾತನಾಡಿ, ಶಾಸನ ಜಾರಿಗೆ ತರುವ ಅಧಿಕಾರ ಇರುವುದು ವಿಧಾನಸೌಧದಲ್ಲಿ ಕುಳಿತ ಜನಪ್ರತಿನಿಧಿಗಳಿಗೆ ಮಾತ್ರ. ಯಾವುದೋ ಅಧಿಕಾರಿ ಆದೇಶ ಹೊರಡಿಸಲು ಸಾಧ್ಯವಿಲ್ಲ. ಇದಕ್ಕೆ ಬೆಲೆ ಕೊಡುವ ಅಗತ್ಯವೂ ಇಲ್ಲ ಎಂದರು. ಇದನ್ನು ತಡೆದ ಜಗನ್ನಿವಾಸ್ ರಾವ್, ಸುತ್ತೋಲೆ ಹೊರಡಿಸುವ ಬಗ್ಗೆ ನಿರ್ಧರಿಸುವ ಅಧಿಕಾರ ಇರುವುದು ನ್ಯಾಯಾ ಲಯ ಅಥವಾ ಸರಕಾರಕ್ಕೆ ಮಾತ್ರ. ಒಂದು ವೇಳೆ ಇದನ್ನು ನಗರಸಭೆ ಅನುಸರಿಸಿದರೆ ಉಲ್ಲಂಘನೆ ಆಗುತ್ತದೆ ಎಂದರು.
ಈ ಸಮಸ್ಯೆಗೆ ಸರಕಾರ ಮಾತ್ರ ಪರಿಹಾರ ನೀಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಶಾಸಕರ ಮೂಲಕ ನಿಯೋಗ ಕೊಂಡು ಹೋಗುವುದು ಒಳಿತು ಎಂದರು. ಇದಕ್ಕೆ ಎಂಜಿನಿಯರ್ ವಸಂತ್ ಭಟ್ ಹಾಗೂ ವರ್ತಕ ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ ಧ್ವನಿಗೂಡಿಸಿದರು.
ಗೊಂದಲ ಮೂಡಿಸುವ ಪ್ರಯತ್ನ
ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭಾ ಸದಸ್ಯ ಎಚ್. ಮಹಮ್ಮದಾಲಿ, ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ಖಾತೆ ಸಮಸ್ಯೆ ಪುತ್ತೂರಿನಲ್ಲಿ ಸೃಷ್ಟಿಯಾಗಿದೆ. ಖಾತೆ ಸ್ಥಗಿತ ವಿಚಾರದಲ್ಲಿ ಆಡಳಿತ ವ್ಯವಸ್ಥೆ ಮೇಲೆ ಗೂಬೆ ಕೂರಿಸಿ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆದಿದೆ. ಖಾತೆ ನೀಡುವಿಕೆಗಾಗಿ ನಾವು ಬಹಳಷ್ಟು ಶ್ರಮಿಸುತ್ತಿದ್ದರೂ ಅದಕ್ಕಾಗಿಯೇ ನಾವು ಸಿಬಂದಿಯನ್ನು ಇಟ್ಟುಕೊಂಡು ಸಂಬಳ ವ್ಯಯ ಮಾಡುತ್ತಿದ್ದರೂ ಜಿಲ್ಲಾ ಮಟ್ಟದ ಅ ಧಿಕಾರಿಯೊಬ್ಬರು ನಗರಸಭೆಗೆ ಸೀಮಿತಗೊಂಡು ಹೊರಡಿಸಿದ ಆದೇಶದಿಂದಾಗಿ ಸಮಸ್ಯೆಯಾಗಿದೆ ಎಂದರು.
ಯಾವುದೇ ಹಳೆ ಕಟ್ಟಡದ ನಿವೇಶನಗಳ ಬಗ್ಗೆ ಸರಕಾರದ ಆದೇಶದಲ್ಲಿ ಉಲ್ಲೇಖವಿಲ್ಲ. ಆದರೆ ಖಾತೆ ಮಾಡಿಸುವ ಮೊದಲೇ ಸಿಂಗಲ್ ಲೇಔಟ್ ಮಾಡಬೇಕೆಂಬ ಸೂಚನೆ ಅ ಧಿಕಾರಿ ಹೊರಡಿಸಿದ ಸುತ್ತೋಲೆಯಲ್ಲಿ ಇರುವುದರಿಂದ ಪುತ್ತೂರಿಗೆ ಮಾತ್ರ ಸಮಸ್ಯೆಯಾಗಿದೆ. ಯಾವ ನಗರಸಭೆಗೂ ಈ ಆದೇಶ ಹೋಗಿಲ್ಲ ಎಂದರು.
ನಗರಸಭೆ ಸದಸ್ಯರಾದ ಮುಖೇಶ್ ಕೆಮ್ಮಿಂಜೆ, ಶಕ್ತಿ ಸಿನ್ಹ, ಜಯಲಕ್ಷ್ಮೀ ಸುರೇಶ್, ಉಷಾ ಧನಂಜಯ್, ಸ್ವರ್ಣಲತಾ ಹೆಗ್ಡೆ, ಜೆಸಿಂತಾ ಮಸ್ಕರೇನಸ್ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಅಭಿಪ್ರಾಯ ವ್ಯಕ್ತ
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕು. ಬಳಿಕ ಸರಕಾರಕ್ಕೆ ನಿಯೋಗ ಕೊಂಡೊಯ್ಯಬೇಕು ಎಂದು ನಿರ್ಣಯಿಸಲಾಯಿತು. ಅದಕ್ಕೆ ಮೊದಲು ಸುರೇಂದ್ರ ಕಿಣಿ, ಬೆಟ್ಟ ಈಶ್ವರ ಭಟ್, ಸಿದ್ದೀಕ್, ವಕೀಲರ ಸಂಘದ ಅಧ್ಯಕ್ಷರ ಸಮಿತಿ ರಚಿಸಬೇಕು. ಇವರು ಜತೆಯಾಗಿ ಹೋಗಿ ಶಾಸಕರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಸಬೇಕು. ಶಾಸಕರು ಪುಡಾ ಹಾಗೂ ನಗರಸಭೆ ಜತೆ ಮಾತುಕತೆ ನಡೆಸಬೇಕು. ಆಗಷ್ಟೇ ಸಮಸ್ಯೆಯ ನಿಜ ಚಿತ್ರಣ ಮತ್ತು ಪರಿಹಾರದ ದಾರಿ ಕೊಂಡುಕೊಳ್ಳಲು ಸಾಧ್ಯ. ಅನಂತರ ಶಾಸಕಿ ನೇತೃತ್ವದ ನಿಯೋಗ ರಚಿಸಿ, ಸರಕಾರದ ಬಳಿ ತೆರಳಬೇಕು. ಚುನಾವಣೆ ಸಂದರ್ಭವಾದ್ದರಿಂದ ಆದಷ್ಟು ಶೀಘ್ರ ಸಮಸ್ಯೆ ಪರಿಹಾರಕ್ಕೆ ಮುಂದಾಗಬಹುದು ಎಂಬ ಅಭಿಪ್ರಾಯಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.