ಹನಿ – ಹನಿ ಮಳೆ ಲೆಕ್ಕ: PGSN ಪ್ರಸಾದ್‌ ಬಳಿ ಪಕ್ಕಾ!


Team Udayavani, Jul 10, 2018, 2:05 AM IST

hani-lekka-9-7.jpg

ಸುಳ್ಯ: ಇದು ಒಂದೆರಡು ವರ್ಷಗಳ ಪ್ರಯತ್ನ ಅಲ್ಲ. 43 ವರ್ಷ ಹನಿ – ಹನಿ ಮಳೆಯ ಲೆಕ್ಕ ತೆಗೆದು, ದಾಖಲೆ ರೂಪದಲ್ಲಿ ಸಂಗ್ರಹಿಸಿದ ಅಪರೂಪದ ಸಂಗತಿಯಿದು..! ಇಂತಹ ಹವ್ಯಾಸ ಹೊಂದಿರುವುದು ಬಾಳಿಲದ ಪ್ರಗತಿಪರ ಕೃಷಿಕ PGSN ಪ್ರಸಾದ್‌. ಅವರ ಬಳಿ ನಾಲ್ಕು ದಶಕ ಹನಿ -ಹನಿ ಮಳೆಯ ಲೆಕ್ಕ ಪಕ್ಕಾ ಇದೆ.

43 ವರ್ಷಗಳ ಕಾರ್ಯ
ತಂದೆ ಪಾಟಾಜೆ ಗೋವಿಂದಯ್ಯ ಅವರು 1930ರ ದಶಕದಲ್ಲೇ ತನ್ನೂರಿನಲ್ಲಿ ಸುರಿ ಯುವ ಮಳೆ ಪ್ರಮಾಣ ಅಂದಾಜಿಸಿ ಬರೆದಿಡುವ ಹವ್ಯಾಸ ಹೊಂದಿದ್ದರು. ಈ ಆಸಕ್ತಿ ಪುತ್ರ PGSN ಪ್ರಸಾದ್‌ ಅವರಲ್ಲಿ ಮೂಡಿತ್ತು. ರೇಡಿಯೋದಲ್ಲಿನ ಹವಾಮಾನ ಸುದ್ದಿ ಆಸಕ್ತಿಗೆ ಇನ್ನಷ್ಟು ಇಂಬು ನೀಡಿತ್ತು.

ಮಳೆ ಮಾಪನ
1976ರಲ್ಲಿ ತನ್ನ ಮನೆ ಅಂಗಳದಲ್ಲಿ ಮಳೆ ಮಾಪನ ಇರಿಸಿ, ಅದನ್ನು ಆಳೆದು ದಾಖಲಿಸಲು ಆರಂಭಿಸಿದರು. ಪಾಟಾಜೆ ಗೋವಿಂದಯ್ಯ ಸತ್ಯನಾರಾಯಣ ಪ್ರಸಾದ್‌ (PGSN ಪ್ರಸಾದ್‌) 43 ವರ್ಷಗಳಲ್ಲಿ ಮಳೆ, ಹವಾಮಾನ ಕುರಿತು ಸೋಜಿಗದ ಸಂಗತಿಗಳನ್ನು ಗಮನಿಸಿ, ದಾಖಲಿಸಿದ್ದಾರೆ.


ಸಂಗ್ರಹ ಹೀಗೆ…

ಮೇಲಿನಿಂದ ಕೆಳಗಿನವರೆಗೂ ಸಮಾನ ಅಳತೆಯ, ಒಳ ತಳಭಾಗ ಸಮತಟ್ಟಾಗಿರುವ ಗಾಜಿನ ಜಾಡಿ ಬಳಸಿ, ಜಾಡಿಯನ್ನು ಕನಿಷ್ಠ 2 ಅಡಿ ಎತ್ತರದ ಪೀಠದ ಮೇಲೆ ಗಾಳಿಗೆ ಬೀಳದಂತೆ ಭದ್ರಪಡಿಸಲಾಗಿದೆ. ಮಳೆ ಮಾಪಕಕ್ಕೆ ಮಳೆ ನೀರು ಅಡೆತಡೆ ಇಲ್ಲದೆ ಬೀಳುವಂತಿರಬೇಕು. ಮನೆ ಮುಂಭಾಗದಲ್ಲಿ ಈ ಮಾಪಕ ಇಡಲಾಗಿದೆ. PGSN ಕಾರ್ಯನಿಮಿತ್ತ ಮನೆಯಲ್ಲಿರದಿದ್ದರೆ, ಅವರ ಪತ್ನಿ ಅಥವಾ ಮಗ ಮಳೆ ಮಾಪನವನ್ನು ದಾಖಲಿಸುತ್ತಾರೆ.

ಮುಂಗಾರು ಪೂರ್ವ
– ಗರಿಷ್ಠ ಮಳೆ – 873 ಮಿ.ಮೀ. (1977 ಜ. 1ರಿಂದ ಜೂ. 6)
– ಕನಿಷ್ಠ ಮಳೆ – 163 ಮಿ.ಮೀ. (1986 ಜನವರಿ 1ರಿಂದ ಜೂನ್‌ 4)
– ಮುಂಗಾರು ಪೂರ್ವ ಸರಾಸರಿ ಮಳೆ – 337.8 ಮಿ.ಮೀ. (1976-2015)
– ಅತ್ಯಧಿಕ ಮುಂಗಾರು ಮಳೆ – 4796 ಮಿ.ಮೀ. (ಜೂ. 2ರಿಂದ ಸೆ. 8 – 1980)
– ಕನಿಷ್ಠ ಮುಂಗಾರು ಮಳೆ – 1741 ಮಿ.ಮೀ. (1987 ಜೂ. 3ರಿಂದ ಸೆ. 1)
– ಸರಾಸರಿ ಮುಂಗಾರು ಮಳೆ – 3331.3 ಮಿ.ಮೀ. (1976-2015)
– ಅತ್ಯಧಿಕ ಹಿಂಗಾರು ಮಳೆ – 1475 ಮಿ.ಮೀ. (ಸೆ. 5ರಿಂದ ಡಿ. 31 – 1976)
– ಕನಿಷ್ಠ ಹಿಂಗಾರು ಮಳೆ – 373 ಮಿ.ಮೀ. (1982 ಸೆ. 2ರಿಂದ ಡಿ. 31)
– ಸರಾಸರಿ ಹಿಂಗಾರು ಮಳೆ – 819.9 ಮಿ.ಮೀ. (1976-2015)
– ದಿನವೊಂದರ ಗರಿಷ್ಠ ಮಳೆ – 292 ಮಿ.ಮೀ. (1-8-1982)
– 48 ಗಂಟೆಗಳ ಗರಿಷ್ಠ ಮಳೆ – 507 ಮಿ.ಮೀ. (1, 2 ಆಗಸ್ಟ್‌, 1982)
– 72 ಗಂಟೆಗಳ ಗರಿಷ್ಠ ಮಳೆ – 632 ಮಿ.ಮೀ. (1982 ಜು. 31ರಿಂದ ಆ. 2)
– 1992ರ ಜು. 27ರಿಂದ ಆ. 2ರ ವರೆಗೆ ಸತತ ಒಂದು ವಾರ ಕಾಲ 934 ಮಿ.ಮೀ. ಮಳೆ ಸುರಿದಿರುವುದು ದಾಖಲೆ.
– 1978ರಲ್ಲಿ ಮೇ 9ರಿಂದ ಸೆ. 5ರ ತನಕ ಸತತ 120 ದಿನಗಳಲ್ಲಿ 4908 ಮಿ.ಮೀ. (ಆ ವರ್ಷ ವಾರ್ಷಿಕ 619 ಮಿ.ಮೀ.) ಮಳೆ ಸುರಿದಿತ್ತು.
– 1998ರಲ್ಲಿ ಜೂ. 8ರಿಂದ ಜು. 14ರ ತನಕ ಸತತ 37 ದಿನಗಳಲ್ಲಿ 2150 ಮಿ.ಮೀ. ಮಳೆ ದಾಖಲಾಗಿತ್ತು (ದಿನವೊಂದರ ಗರಿಷ್ಠ ಸರಾಸರಿ – 5 8ಮಿ.ಮೀ.).


ತಾಳ್ಮೆ ಅಗತ್ಯ

ನನ್ನ ಪಾಲಿಗೆ ಇದು ಹವ್ಯಾಸ ಮಾತ್ರ ಅಲ್ಲ. ದಿನಚರಿ ಆಗಿದೆ. ದಾಖಲೆ ಸಂಗ್ರಹಕ್ಕೆ ತಾಳ್ಮೆ ಅತ್ಯಗತ್ಯ. ಮಳೆಮಾಪನ ಅಳವಡಿಕೆ 1,000 ರೂ. ಒಳಗೆ ಖರ್ಚು ತಗಲುತ್ತದೆ. ಸಣ್ಣ ಖರ್ಚು. ನನಗೆ ಸಿಕ್ಕಿದ ಮಾಹಿತಿ ಪ್ರಕಾರ ತಾಲೂಕಿನಲ್ಲಿ ನಾಲ್ಕು ಮಂದಿ ಮಳೆ ಮಾಪನ ಅಳವಡಿಸಿದ್ದಾರೆ. ಬೇರೆ ಇದ್ದರೂ ಇರಬಹುದು. 
– PGSN ಪ್ರಸಾದ್‌, ಹವ್ಯಾಸಿ ಮಳೆ ಮಾಪಕ

ಆಸಕ್ತಿಕರ ಮಾಹಿತಿ
– ವರ್ಷವೊಂದರಲ್ಲಿ ಮಳೆ ಬಂದ ಅತ್ಯಧಿಕ ದಿನಗಳು – 201 (1978)
- ವರ್ಷವೊಂದರಲ್ಲಿ ಮಳೆ ಬಂದ ಕನಿಷ್ಠ ದಿನಗಳು – 144 (1986)
- ವರ್ಷವೊಂದರಲ್ಲಿ ಮಳೆ ಬರುವ ಸರಾಸರಿ ದಿನಗಳು – 165 (1976-2015)
- ವಾರ್ಷಿಕ ಗರಿಷ್ಠ ಮಳೆ – 6443 ಮಿ.ಮೀ.(1980)
– ವಾರ್ಷಿಕ ಕನಿಷ್ಠ ಮಳೆ – 2732 ಮಿ.ಮೀ. (1987)
– ವಾರ್ಷಿಕ ಸರಾಸರಿ ಮಳೆ – 4490 ಮಿ.ಮೀ. (1976-2015)

— ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

Mudhol: ಪ್ರತ್ಯೇಕ ಅಪಘಾತ ಇಬ್ಬರು ಮೃತ್ಯು..

Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.