ಸವಾಲಿಗೆ ಅಂಜದ ಎಂಡೋಪೀಡಿತೆಯಿಂದ ಸಾಧನೆ
Team Udayavani, Jun 17, 2018, 11:44 AM IST
ಪುತ್ತೂರು: ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ಅಂಜದೆ ಮುನ್ನಡೆಯುವವರು ಬಹಳ ಕಡಿಮೆ. ಗೆಲ್ಲುವ ದಾರಿ ಕಾಣದೇ ತಳಮಳಿಸುವವರಿಗೆ ಸೋತು ಗೆದ್ದ ಸಾಧಕರು ಸ್ಫೂರ್ತಿಯೂ ಆಗುತ್ತಾರೆ. ಕೈ ಕಾಲುಗಳು ಶಾಶ್ವತ ಊನಕ್ಕೊಳಗಾಗಿ ತಿರುಚಿಕೊಂಡಿವೆ. ಕೈಯಲ್ಲೊಂದು ಎಲ್ಬೋ ಸ್ಟಿಕ್ ಹಿಡಿದುಕೊಂಡು ಮೆಟ್ಟಿಲುಗಳನ್ನು ಹತ್ತಿ ಶಾಲಾ ಕೊಠಡಿಗೆ ಬರುವುದನ್ನು ನೋಡುತ್ತಿದ್ದರೆ ಮನಸೊಮ್ಮೆ ಮರುಗದೇ ಇರಲಾರದು. ಆಕೆಯ ದುರದೃಷ್ಟವೋ ಅಥವಾ ಸರಕಾರದ ಅಚಾತುರ್ಯವೋ ಹುಟ್ಟಿನಿಂದಲೇ ಎಂಡೋಸಲ್ಫಾನ್ ಮಹಾಮಾರಿಗೆ ತುತ್ತಾಗಿ ಬದುಕನ್ನು ಕತ್ತಲೆಯನ್ನಾಗಿಸಿತು. ಆದರೆ ಏನಾದರೂ ಸಾಧಿಸಬೇಕೆಂಬ ಮಹದಾಸೆಯಿಂದ ಸಾಧನೆಯ ಕಡೆಗೆ ಸಾಗುತ್ತಿರುವ ಯುವತಿ ಭವ್ಯಾಳ ಕತೆಯಿದು.
ಪುತ್ತೂರು ತಾಲೂಕಿನ ಈಶ್ವರಮಂಗಲದ ಕೂಲಿ ಕಾರ್ಮಿಕ ಮಹಾಲಿಂಗ ಪಾಟಾಳಿ ಹಾಗೂ ಬೀಡಿ ಕಟ್ಟುವ ಕೆಲಸ ಮಾಡುವ ಸಂಜೀವಿ ಅವರ ಪುತ್ರಿ ಭವ್ಯಾ. ಸಣ್ಣ ಮನೆ, ಜೀವನ ಸಾಗಿಸಲು ಸಾಕಾಗದಷ್ಟು ಆದಾಯ, ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿರುವ ಒಬ್ಬ ಅಣ್ಣ, ಇನ್ನೊಬ್ಟಾಕೆ ಅಕ್ಕ ಮದುವೆಯಾಗಿ ಸಂಸಾರಸ್ಥೆ. ಮನೆಯಲ್ಲಿ ಬಡತನದ ಬೇಗೆ, ಇವೆಲ್ಲದರ ನಡುವೆಯೂ ತನ್ನೆರಡು ಮಕ್ಕಳು ಎಂಡೋ ಸಲ್ಫಾನ್ ಪೀಡಿತರು ಎಂಬ ಆಘಾತದೊಂದಿಗೇ ಇವರಿಗಾಗಿ ಶ್ರಮಿಸುತ್ತಿದ್ದಾರೆ ಹೆತ್ತವರು.
ತನ್ನ ಪ್ರಾಥಮಿಕ ಶಿಕ್ಷಣವನ್ನು ಮೇನಾಲ ಸರಕಾರಿ ಶಾಲೆಯಲ್ಲಿ ಮುಗಿಸಿದ ಭವ್ಯಾಗೆ ಬರಹಕ್ಕೆ ಅಂಗಾಂಗಗಳು ಸಹಕರಿಸದಿರುವ ಕಾರಣದಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದಾಗ ನಿರಾಶೆಯಾಗಿತ್ತು. ಹೇಗಾದರೂ ಮಾಡಿ ಹತ್ತನೇ ತರಗತಿಯನ್ನು ಪೂರ್ಣಗೊಳಿಸಬೇಕೆಂಬ ಛಲ ಮೂಡಿತು. ಅಲ್ಲಿಂದ ಮುಂದೆ ಒಳ್ಳೆ ಉದ್ಯೊಗ ಪಡೆಯಬೇಕೆಂಬ ಕನಸಿನಿಂದಲೇ ತನ್ನ 28ನೇ ವಯಸ್ಸಿನಲ್ಲಿ ಭವ್ಯಾ ಸೇರಿದ್ದು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ಗೆ, ಹತ್ತನೇ ತರಗತಿಯ ಖಾಸಗಿ ವಿದ್ಯಾರ್ಥಿನಿಯಾಗಿ. ಸಂಸ್ಥೆ ಈಕೆಯ ಓದಿನ ಹಂಬಲವನ್ನು ಪರಿಗಣಿಸಿ ಉಚಿತ ಶಿಕ್ಷಣ ನೀಡಿತು. ವಿದ್ಯಾಭ್ಯಾಸದ ಬಗೆಗಿನ ಆಕೆಯ ಕನಸೇ ಇದೀಗೆ ಭವ್ಯಾ ಎಸೆಸೆಲ್ಸಿ ತೇರ್ಗಡೆಯಾಗಲು ಸಹಕರಿಸಿದೆ.
ಛಲದಿಂದ ಓದಿ 336 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಆತ್ಮವಿಶ್ವಾಸ, ಛಲ ಆಕೆಯ ಸಾಧನೆಗೆ ಪ್ರೇರಣೆ ನೀಡಿದೆ. ಈಕೆ ಮತ್ತೆ ಅದೇ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ಯೋಜನೆ ಯಡಿ ಖಾಸಗಿಯಾಗಿ ದ್ವಿತೀಯ ಪಿಯುಸಿ ದೈನಂದಿನ ತರಗತಿಗಳಿಗೆ ಹಾಜರಾಗುತ್ತಿದ್ದಾಳೆ.
ಮಾರ್ಗದರ್ಶನ
ವಿದ್ಯಾರ್ಥಿನಿಗೆ ಬೇಕಾದ ಎಲ್ಲ ರೀತಿಯ ಸಲಹೆ, ಮಾರ್ಗದರ್ಶನ ಒದಗಿಸಿದ್ದೇವೆ. ಅದಕ್ಕೆ ಪ್ರತಿಯಾಗಿ ಆಕೆ ಒಳ್ಳೆಯ ರೀತಿಯಲ್ಲಿ ಸಾಧಿಸಿದ್ದಾಳೆ. ಈ ಬಾರಿಯೂ ಉಚಿತ ಶಿಕ್ಷಣದಡಿಯಲ್ಲಿ ದ್ವಿತೀಯ ಪಿ.ಯು.ಸಿ.ಗೆ ಖಾಸಗಿಯಾಗಿ ಸೇರಿದ್ದಾಳೆ. ಅವಳ ಭವಿಷ್ಯ ಉಜ್ವಲವಾಗಬೇಕೆಂಬುದೇ ನಮ್ಮದೂ ಹಾರೈಕೆ.
-ಪಿ.ವಿ. ಗೋಕುಲ್‌ನಾಥ್
ಸಂಚಾಲಕರು, ಪ್ರಗತಿ ಸ್ಟಡಿ ಸೆಂಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.