ನಗರದಲ್ಲಿ ಡಂಪಿಂಗ್‌ ಯಾರ್ಡ್‌ ವ್ಯವಸೆ ಅಭಿವೃದ್ಧಿಗೆ ಕ್ರಮ: ಕೃಷಮೂರ್ತಿ


Team Udayavani, May 25, 2018, 1:53 PM IST

25-may-10.jpg

ನಗರ: ನೆಕ್ಕಿಲದಲ್ಲಿರುವ ಡಂಪಿಂಗ್‌ ಯಾರ್ಡ್‌ನ ಮೇಲುಸ್ತುವಾರಿಗೆ ಸಂಬಂಧಿ ಸಿದಂತೆ ಜಿಲ್ಲಾಧಿಕಾರಿಯವರು ಎಸಿ ನೇತೃತ್ವದಲ್ಲಿ ರಚಿಸಿರುವ ಕಮಿಟಿ ಯಲ್ಲಿರುವ 11.35 ಲಕ್ಷ ರೂ. ಹಾಗೂ ನಗರಸಭೆ ಆಡಳಿತದ 14ನೇ ಹಣಕಾಸು ನಿಧಿಯ ಬಳಕೆಯೊಂದಿಗೆ ಡಂಪಿಂಗ್‌ ಯಾರ್ಡ್‌ನ್ನು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಗುರುವಾರ ಸ್ಥಳೀಯ ಸಾರ್ವಜನಿಕರ ದೂರಿನ ಮೇರೆಗೆ ಡಂಪಿಂಗ್‌ ಯಾರ್ಡ್‌ ಸ್ಥಳಕ್ಕೆ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿ ಸದ್ಯದ ಸ್ಥಿತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಕಡೆಗಳಲ್ಲಿ ಡಂಪಿಂಗ್‌ ಯಾರ್ಡ್‌ ನೋಡಿದ್ದೇನೆ. ಅವುಗಳ ಮಧ್ಯೆ ನೆಕ್ಕಿಲದ ಡಂಪಿಂಗ್‌ ಯಾರ್ಡ್‌ ಸದ್ಯಕ್ಕೆ ಉತ್ತಮ ರೀತಿಯಲ್ಲಿದೆ. ಡಂಪಿಂಗ್‌ ಯಾರ್ಡ್‌ ಸುತ್ತಲಿನ ಕಾಂಪೌಂಡ್‌ ಎತ್ತರಕ್ಕೇರಿಸುವ, ದಾರಿದೀಪದ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ. ಯಾರ್ಡ್ ನಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ, ತಾಜ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಡಂಪಿಂಗ್‌ ಯಾರ್ಡ್‌ನಲ್ಲಿ ಕಸ, ತ್ಯಾಜ್ಯಗಳ ವಿಲೇವಾರಿ ವ್ಯವಸ್ಥೆಯನ್ನು ಸಮರ್ಪಕಗೊಳಿಸುವಂತೆ ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡಲಾಗಿದೆ. ಕೋಳಿ ಸಹಿತ ಮಾಂಸದ ತಾಜ್ಯಗಳನ್ನು ಸಮರ್ಪಕ ವಿಲೇವಾರಿಗೆ ಪ್ಲ್ಯಾನ್‌ ಮಾಡಿಕೊಳ್ಳಬೇಕು. ತ್ಯಾಜ್ಯಗಳನ್ನು ವಾಹನದಲ್ಲಿ ತರುವ ಸಂದರ್ಭ ಸೋರಿಕೆಯಾಗದಂತೆ ಬಂದ್‌ ಇರುವ ವಾಹನ ಬಳಸಬೇಕು. ಕಸದ ರಾಶಿಗೆ ರ್ಯಾಪರ್‌ ಹಾಕಬೇಕು. ಕಸವನ್ನು ಕೆಳಗಿನಿಂದ ಮೇಲಕ್ಕೆ ಹಾಕಿಕೊಂಡು ಬರಬೇಕು ಎಂದು ಎಸಿ ಅವರು ನಗರಸಭಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು. 

4 ಕೋಟಿ ರೂ.ಗೆ ಪ್ರಸ್ತಾವನೆ 
ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮಾತನಾಡಿ, ನಗರಸಭೆಗೆ ಸ್ವಚ್ಛ  ಭಾರತ್‌ ಮಿಷನ್‌ ಅಡಿ 4 ಕೋಟಿ ರೂ. ಅನುದಾನ ಲಭಿಸುತ್ತಿದ್ದು, ಡಿಪಿಆರ್‌ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಅನುದಾನದಲ್ಲಿ ಡಂಪಿಂಗ್‌ ಯಾರ್ಡ್‌ನ ಸಂಪೂರ್ಣ ಅಭಿವೃದ್ಧಿ ಹಾಗೂ ವೈಜ್ಞಾನಿಕ ರೀತಿಯ ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿಗಾಗಿ 14ನೇ ಹಣಕಾಸು ನಿಧಿಯನ್ನೂ ಬಳಕೆ ಮಾಡಲಾಗುವುದು ಎಂದರು. 

ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕ ರಾದ ರಾಮಚಂದ್ರ, ಶ್ವೇತಾ ಕಿರಣ್‌, ಎಂಜಿನಿಯರ್‌ ಅರುಣ್‌ ಕುಮಾರ್‌, ಗುತ್ತಿಗೆದಾರರು, ಸ್ಥಳೀಯರಾದ ವಿಠಲ ಹೆಗ್ಡೆ, ಬಾಲಚಂದ್ರ, ದುರ್ಗಾಪ್ರಸಾದ್‌, ವಿಜಿತ್‌, ಚಂದ್ರ ಗೌಡ ಉಪಸ್ಥಿತರಿದ್ದರು.

15 ದಿನಗಳಲ್ಲಿ ಸರಿಯಾಗಬೇಕು
ನಗರಸಭೆಯ ಎಂಜಿನಿಯರ್‌, ಆರೋಗ್ಯಾಧಿಕಾರಿಗಳು, ಪೌರಾಯುಕ್ತರಿಗೆ ಸೂಚನೆ ನೀಡಿದ ಎಚ್‌.ಕೆ. ಕೃಷ್ಣಮೂರ್ತಿ ಡಂಪಿಂಗ್‌ ಯಾರ್ಡ್‌ ವ್ಯವಸ್ಥೆಯ ಸಮರ್ಪಕತೆ ಒಂದು ದಿನದಲ್ಲಿ ಆಗುವುದಲ್ಲ. ಒಂದು ವಾರ ಸ್ಥಳದಲ್ಲಿ ಹಾಜರಿದ್ದು, ಇಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಬೇಕು. ಕಸ ಹಾಕಿದ ಕೂಡಲೇ ಅದರ ಮೇಲೆ ಮಣ್ಣು ಹಾಕಿಸಬೇಕು. ಈ ಕೆಲಸವನ್ನು ಜನರು ಹೇಳುತ್ತಾರೆ ಎಂದಲ್ಲ, ನಮ್ಮ ಮನೆಯ ಪರಿಸರ ಹೀಗಿದ್ದರೆ? ಎಂದು ಆಲೋಚಿಸಿ ಕೆಲಸ ಮಾಡಬೇಕು. 15 ದಿನಗಳಲ್ಲಿ ಇಲ್ಲಿನ ವ್ಯವಸ್ಥೆ ಸಮರ್ಪಕವಾಗಬೇಕು ಎಂದರು.

ಸಾರ್ವಜನಿಕ ದೂರು
ಸಾರ್ವಜನಿಕ ದೂರು ವರ್ಷದ ಹಿಂದೆ ಯಾರ್ಡ್‌ನಲ್ಲಿ ಬೆಂಕಿ ಆಕಸ್ಮಿಕ ಘಟನೆಯ ಬಳಿಕ ಒಂದಷ್ಟು ವ್ಯವಸ್ಥಿತಗೊಳಿಸಲಾಗಿದೆ. ಆದರೆ ವಾಹನಗಳಲ್ಲಿ ತಾಜ್ಯ, ಕಸಗಳನ್ನು ತರುವ ಸಂದರ್ಭದಲ್ಲಿ ರಸ್ತೆಯಲ್ಲೆಲ್ಲ ಬೀಳಿಸಿಕೊಂಡು ಬರುತ್ತಾರೆ, ಕೊಳಚೆ ನೀರು ಹರಿಯುತ್ತದೆ. ಕೋಳಿ ತಾಜ್ಯಗಳನ್ನು ತಂದು ಹಾಕುತ್ತಿರುವುದರಿಂದ ನಾಯಿ, ಕಾಗೆಗಳು ಇಲ್ಲಿಂದ ಎತ್ತಿಕೊಂಡು ಮನೆಗಳ ಪರಿಸರಕ್ಕೆ ತರುತ್ತವೆ. ಸಹಾಯಕ ಕಮಿಷನರ್‌ ಬರುತ್ತಾರೆ ಎಂಬ ಕಾರಣಕ್ಕೆ ಕಸದ ರಾಶಿಗೆ ಪ್ಲಾಸ್ಟಿಕ್‌ನ್ನು ಅಳವಡಿಸಿದ್ದಾರೆ ಎಂದು ಸ್ಥಳೀಯರು ದೂರಿಕೊಂಡರು.

ಟಾಪ್ ನ್ಯೂಸ್

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

1-shami

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಆಕಾಶ್‌ ಬದಲು ಶಮಿಗೆ ಸ್ಥಾನ?

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Siddapura: ಬೈಕಿಗೆ ಶಾಲೆ ಬಸ್‌ ಢಿಕ್ಕಿ: ದಂಪತಿಗೆ ಗಾಯ

Siddapura: ಬೈಕಿಗೆ ಶಾಲೆ ಬಸ್‌ ಢಿಕ್ಕಿ: ದಂಪತಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Padubidri ಪಾದೆಬೆಟ್ಟು: ನೇಣು ಬಿಗಿದು ಯುವಕ ಆತ್ಮಹತ್ಯೆ

Padubidri ಪಾದೆಬೆಟ್ಟು: ನೇಣು ಬಿಗಿದು ಯುವಕ ಆತ್ಮಹತ್ಯೆ

1-hak

ಕೊಡವ ಕೌಟುಂಬಿಕ ಹಾಕಿಗೆ ಸರಕಾರದಿಂದ 1 ಕೋ. ರೂ.

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

1-shami

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಆಕಾಶ್‌ ಬದಲು ಶಮಿಗೆ ಸ್ಥಾನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.