ನಿರ್ವಸಿತ ಪ್ರದೇಶದ ಅಭಿವೃದ್ಧಿಗೆ ಕ್ರಮ
Team Udayavani, Dec 3, 2017, 11:21 AM IST
ಸುರತ್ಕಲ್ : ಕೃಷ್ಣಾಪುರದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು ನಿರ್ವಸಿತ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಮೊಯಿದಿನ್ ಬಾವಾ ಹೇಳಿದರು.
50 ಲಕ್ಷ ರೂ.ವೆಚ್ಚದಲ್ಲಿ ಕೃಷ್ಣಾಪುರದಲ್ಲಿ 2ನೇ ಹಂತದ ಮಾರುಕಟ್ಟೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕಾಟಿಪಳ್ಳ, ಕೃಷ್ಣಾಪುರ, ಕೂಳೂರು, ಕಾವೂರು ಸಹಿತ ವಿವಿಧೆಡೆ ಮಾರುಕಟ್ಟೆ ಸಂಕೀರ್ಣಗಳು ತಲೆ ಎತ್ತಲಿವೆ. ಈಗಾಗಲೇ ಕಾವೂರು, ಕೃಷ್ಣಾಪುರದಲ್ಲಿ ಕಾಮಗಾರಿ ಆರಂಭವಾಗಿದೆ ಎಂದರು. ಸ್ಥಳೀಯವಾಗಿ ನಾಗರಿಕರಿಗೆ ಒಂದೇ ಸೂರಿನಡಿ ನಿತ್ಯ ಬಳಕೆಯ ವಸ್ತುಗಳು ಲಭ್ಯವಾಗಬೇಕು ಎಂಬುದು ನಮ್ಮ ಅಶಯ. ಇದರಿಂದ ಕಡಿಮೆ ವೆಚ್ಚ, ಸಮಯದ ಉಳಿತಾಯ, ಗುಣ ಮಟ್ಟದ ಪರಿಕರಗಳನ್ನು ಖರೀದಿ ಮಾಡಬಹುದಾಗಿದೆ ಎಂದರು.
ಉತ್ತರಕ್ಕೆ ಅತ್ಯಧಿಕ ಅನುದಾನ
ನಾಲ್ಕು ವರ್ಷದ ಅವಧಿಯಲ್ಲಿ ಮಂಗಳೂರು ಉತ್ತರಕ್ಕೆ ವಿವಿಧ ಹಣಕಾಸು ಯೋಜನೆಯಡಿ, ಮುಖ್ಯಮಂತ್ರಿಗಳ ವಿಶೇಷ ವಿವೇಚನೆಯಿಂದ ನೀಡಿದ ಅನುದಾನ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ಅನುದಾನ ಬಂದಿದೆ.ಇದರಲ್ಲಿ ಮುಖ್ಯವಾಗಿ ಸುರತ್ಕಲ್ ಗಣೇಶ್‌ಪುರ ಚತುಷ್ಪಥ ರಸ್ತೆಗೆ 62 ಕೋ.ರೂ, ಸುರತ್ಕಲ್ ಹೈಟೆಕ್ ಮಾರುಕಟ್ಟೆಗೆ 120 ಕೋ.ರೂ ಸೇರಿದೆ. ನಗರ ಮತ್ತು ಗ್ರಾಮಾಂತರ ಮೂಲ ಸೌಕರ್ಯ ಯೋಜನೆಯಡಿ ರಸ್ತೆ ವಿಸ್ತರಣೆ, ಡಾಮರಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದರು.
ಸ್ಥಳೀಯ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಮಾಜಿ ಮೇಯರ್ ಗುಲ್ಜಾರ್ ಬಾನು, ಪಾಲಿಕೆ ಸುರತ್ಕಲ್ ವಲಯಾ ಯುಕ್ತ ರವಿಶಂಕರ್, ಎಂಜಿನಿಯರ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.