ನೀರಿನ ಸಮಸ್ಯೆ ನಿವಾರಣೆಗೆ ಪಂಚಾಯತ್‌ನಿಂದ ಅಗತ್ಯ ಕ್ರಮ

ಬಜಪೆ ಗ್ರಾಮ ಪಂಚಾಯತ್‌

Team Udayavani, Mar 17, 2020, 5:04 AM IST

bajpe-water-2

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ.

ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆ ಉದ್ಭವಿಸದಂತೆ ಪಂಚಾಯತ್‌ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರು ಸರಬರಾಜಿನ ನಿರ್ವಹಣೆಯನ್ನು ಗ್ರಾ.ಪಂ.ನಿಂದ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಉದ್ಭವಿಸುವ ಸ್ಥಳಗಳಿಗೆ ನೀರಿನ ಟ್ಯಾಂಕರ್‌ ಮೂಲಕ ಸರಬರಾಜಿಗೆ ಮುಂದಾಗಿದೆ.

ಬಜಪೆ: ಬಜಪೆ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರು ಮತ್ತು ಸರಬರಾಜಿಗೆ ಕೊಳವೆ ಬಾವಿ, ಮಳವೂರು ವೆಂಟೆಡ್‌ ಡ್ಯಾಂನ ನೀರನ್ನು ಆಶ್ರಯಿಸಿವೆ. ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು 5 ವಾರ್ಡ್‌ಗಳು, 25 ಸದಸ್ಯರನ್ನೊಳಗೊಂಡಿದೆ.

ಕಳೆದ ಬಾರಿ ಒಂದನೇ ವಾರ್ಡ್‌ ನ ಸುತ್ತು ಪುದೇಲ್‌, ಎರಡನೇ ವಾರ್ಡ್‌ ನ ಜರಿನಗರ, ಮೂರನೇ ವಾರ್ಡ್‌ ನ ದೊಡ್ಡಿಕಟ್ಟ, ಕಲ್ಲಜರಿ, ನಾಲ್ಕನೇ ವಾರ್ಡ್‌ ನ ಕಿನ್ನಿಪದವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು. ಒಂದನೇ ವಾರ್ಡ್‌ನಲ್ಲಿ 752 ಕುಟುಂಬಗಳು, ಎರಡನೇ ವಾರ್ಡ್‌ ನಲ್ಲಿ 871ಕುಟುಂಬಗಳು, 3ನೇ ವಾರ್ಡ್‌ ನಲ್ಲಿ 686 ಕುಟುಂಬಗಳು, 4ನೇ ವಾರ್ಡ್‌ನಲ್ಲಿ 514 ಕುಟುಂಬಗಳು, 5ನೇ ವಾರ್ಡ್‌ ನಲ್ಲಿ 498 ಕುಟುಂಬಗಳು ಒಟ್ಟು 3,321 ಕುಟುಂಬಗಳು ವಾಸವಾಗಿವೆ. 12,097 ಜನಸಂಖ್ಯೆಯನ್ನು ಹೊಂದಿದೆ.

ಕ್ರಿಯಾ ಯೋಜನೆ
ಕಳೆದ ಬಾರಿ ಗ್ರಾ.ಪಂ. ಪೈಪ್‌ ಅಳವಡಿಕೆ, ಪಂಪ್‌ ಅಳವಡಿಕೆ, ಹೊಸ ಕೊಳವೆ ಬಾವಿ, ಪಂಪಿಗೆ ವಿದ್ಯುತ್‌ ಜೋಡಣೆ ಮೊದಲಾದವುಗಳಿಗೆ ಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರಿಗಾಗಿ 14,63,646 ರೂ. ಗಳನ್ನು ಖರ್ಚು ಮಾಡಲಾಗಿದ್ದು ಈ ಬಾರಿ ಕುಡಿಯುವ ನೀರಿನ ವಿವಿಧ ಕಾಮಗಾರಿಗಳಿಗೆ 17,90,000 ರೂ. ಮೀಸಲಿರಿಸಲಾಗಿದ್ದು ಅನುಮೋದನೆಗೆ ತಾಲೂಕು ಪಂಚಾಯತ್‌ಗೆ ಕಳುಹಿಸಲಾಗಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 35 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, ಒಂದನೇ ವಾರ್ಡ್‌ನಲ್ಲಿ 6, ಎರಡನೇ ವಾರ್ಡ್‌ ನಲ್ಲಿ ಮತ್ತು ಮೂರನೇ ವಾರ್ಡ್‌ ನಲ್ಲಿ ತಲಾ 10, ನಾಲ್ಕನೇ ವಾರ್ಡ್‌ 5 ಮತ್ತು ಐದನೇ ವಾರ್ಡ್‌ನಲ್ಲಿ 4 ಕೊಳವೆ ಬಾವಿಗಳಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 9 ಓವರ್‌ ಹೆಡ್‌ ಟ್ಯಾಂಕ್‌ಗಳು, 3ಜಿಎಸ್‌ಎಲ್‌ಆರ್‌ ಟ್ಯಾಂಕ್‌ಗಳಿವೆ. ಒಂದನೇ ವಾರ್ಡ್‌ನಲ್ಲಿ ಸುತ್ತುಪುದೇಲ್‌, ಸ್ವಾಮಿಲಪದವು ಚಡವು, ಕೊರಕಂಬÛ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಒಟ್ಟು 4, ಎರಡನೇ ವಾರ್ಡ್‌ ನಲ್ಲಿ ಹಳೆ ಕಾನ್ವೆಂಟ್‌, ಮೋರ್ನಿಂಗ್‌ ಸ್ಟಾರ್‌ ಶಾಲೆ ಹಾಗೂ ತಾರಿಕಂಬÛದಲ್ಲಿ ಒಟ್ಟು ಮೂರು. ಮೂರನೇ ವಾರ್ಡ್‌ ನಲ್ಲಿ ಮೆಸ್ಕಾಂ ಕಚೇರಿ ಬಳಿ ಒಂದು, ನಾಲ್ಕನೇ ವಾರ್ಡ್‌ ನಲ್ಲಿ ಟ್ಯಾಂಕ್‌ ಇಲ್ಲ. ಐದನೇ ವಾರ್ಡ್‌ ನಲ್ಲಿ ಶಾಂತಿಗುಡ್ಡೆಯಲ್ಲಿ ಒಂದು ಓವರ್‌ಹೆಡ್‌ ಟ್ಯಾಂಕ್‌, ತಾರಿಕಂಬÛ, ಕೊಂಚಾರ್‌, ಕುಂಟಲ ಪಲ್ಕೆಯಲ್ಲಿ ಜಿಎಸ್‌ಎಲ್‌ ಆರ್‌ ಟ್ಯಾಂಕ್‌ಗಳಿವೆ. ವ್ಯಾಪ್ತಿಯಲ್ಲಿ 1408 ಮನೆಗಳಿಗೆ ಪಂಚಾಯತ್‌ನ ನೀರಿನ ಸಂಪರ್ಕ ಇದೆ.

ಕೆರೆ, ನದಿಗಳಿಲ್ಲದ ಗ್ರಾ.ಪಂ.
ಬಜಪೆ ಗ್ರಾ.ಪಂ.ನಲ್ಲಿ ಕೆರೆ ಹಾಗೂ ನದಿ ಇಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದ ಮಳವೂರು ವೆಂಟೆಡ್‌ ಡ್ಯಾಂ ನೀರು ಮತ್ತು ಕೊಳವೆಬಾವಿ ನೀರನ್ನೇ ಆಶ್ರಯಿಸಲಾಗಿದೆ. ಕಳೆದ ಬಾರಿ ಒಂದನೇ ವಾರ್ಡ್‌ನ ಸುತ್ತುಪುದೇಲ್‌ ಪ್ರದೇಶದಲ್ಲಿ ನೀರಿನ ಸಮಸ್ಯೆ ಇತ್ತು. ಕುಡಿಯುವ ನೀರಿನ ನಿರ್ವಹಣೆಯನ್ನು ಅಲ್ಲಿನ ಸಮಿತಿ ನೋಡಿಕೊಳ್ಳುತ್ತಿತ್ತು. ಅದರೆ ಈಗ ಗ್ರಾ.ಪಂ.ನಿಂದ ನಿರ್ವಹಣೆ ಆಗುತ್ತಿದೆ. ಇಲ್ಲಿ ಹೊಸ ಪೈಪ್‌ಗ್ಳನ್ನು ಹಾಕಲಾಗಿದ್ದು ಹೊಸ ಪೈಪ್‌ಗ್ಳನ್ನು ಹಾಕುವಾಗ ಕೆಲವೆಡೆ ಎರಡೆರಡು ನೀರಿನ ಅಕ್ರಮ ಸಂಪರ್ಕಗಳು ಕಂಡುಬಂದವು.

ಜಿ.ಪಂ.ನಿಂದ 5 ಲಕ್ಷ ರೂ. ಅನುದಾನದಲ್ಲಿ ಹೊಸ ಕೊಳವೆಬಾವಿ, ಪೈಪ್‌ಲೈನ್‌ಗಳು, 13ಲಕ್ಷ ರೂ. ವೆಚ್ಚದಲ್ಲಿ 50ಸಾವಿರ ಲೀ. ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ.

ಪರಿಹಾರ ಕ್ರಮಗಳು
ಮಳವೂರು ಡ್ಯಾಂನಿಂದ ನೀರು ಸರಬರಾಜು ಆಗುತ್ತಿದೆ. ಸ್ವಾಮಿಲ ಚಡವಿನಲ್ಲಿ ಎಂಆರ್‌ಪಿಎಲ್‌ ವತಿಯಿಂದ 15ಲಕ್ಷರೂ. ಅನುದಾನದಲ್ಲಿ ಹೊಸ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದೆ. ಇದರಿಂದ ಒಂದನೇ ವಾರ್ಡ್‌ನ ಸ್ವಾಮಿಲ ಪದವು, ಭಟ್ರಕೆರೆ ಹಾಗೂ 3ನೇ ವಾರ್ಡ್‌ ನ ದೊಡ್ಡಿ ಕಟ್ಟ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಕಲ್ಲಜರಿ ಪ್ರದೇಶಕ್ಕೆ ಹೊಸ ಪೈಪ್‌ಲೈನ್‌ ಹಾಕಿ ಡ್ಯಾಂನ ನೀರು ಈ ಬಾರಿ ಸರಬರಾಜು ಮಾಡಲಾಗುತ್ತದೆ. ಕಿನ್ನಿಪದವು ಪ್ರದೇಶ ಗಳಿಗೆ ಹೊಸ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತದೆ. 2ನೇ ವಾರ್ಡ್‌ನ ಜರಿನಗರ ಪ್ರದೇಶಗಳಿಗೆ ಪೈಪ್‌ಲೈನ್‌ ಹಾಕಲಾಗಿದೆ. ಈ ಬಾರಿ ದೊಡ್ಡಿಕಟ್ಟ ಪ್ರದೇಶದಲ್ಲಿನ ಕೊಳವೆ ಬಾವಿಯಲ್ಲಿ ನೀರು ಕಡಿಮೆ. ಒಳಪ್ರ ದೇಶದಲ್ಲಿರುವ 20ಮನೆಗಳಿಗೆ ನೀರಿನ ಸಮಸ್ಯೆಯಾಗಬಹುದು.

ಪಂಚಾಯತ್‌ನಿಂದ ನೀರಿನ ನಿರ್ವಹಣೆ
ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆ ಸದ್ಯ ಬರಲಿಕ್ಕಿಲ್ಲ. ಪಂ. ವ್ಯಾಪ್ತಿಯ 10 ಟ್ಯಾಂಕ್‌ಗಳಿಗೆ ಮಳವೂರು ಡ್ಯಾಂನ ನೀರು ಸರಬರಾಜು ಆಗುತ್ತಿದೆ. ಕಳೆದ ಬಾರಿ ನೀರಿನ ಸಮಸ್ಯೆ ಇದ್ದ ಕಲ್ಲಜರಿ ಪ್ರದೇಶಕ್ಕೆ 1.50ಲಕ್ಷ ರೂ. ವೆಚ್ಚದಲ್ಲಿ ಹೊಸ ಪೈಪ್‌ಲೈನ್‌ ಹಾಕಲಾಗಿದೆ. ಸುತ್ತುಪುದೇಲ್‌ ಪ್ರದೇಶದ ನೀರು ನಿರ್ವಹಣಾ ಸಮಿತಿಯನ್ನು ಬರ್ಖಾಸ್ತು ಮಾಡಿ ಪಂ.ನಿಂದಲೇ ನೀರಿನ ನಿರ್ವಹಣೆ ಮಾಡಲಾಗುತ್ತಿದೆ. .
– ಸಾಯೀಶ್‌ ಚೌಟ, ಪಿಡಿಒ, ಬಜಪೆ ಗ್ರಾ.ಪಂ.

ಅಗತ್ಯ ಕ್ರಮ
ಬಜಪೆ ಗ್ರಾ. ಪಂ. ವ್ಯಾಪ್ತಿಯ ಸುತ್ತುಪುದೇಲ್‌ ಮತ್ತು ಕಲ್ಲಜರಿಯಲ್ಲಿ ಕಳೆದ ಬಾರಿ ನೀರಿನ ಸಮಸ್ಯೆ ಇತ್ತು.ಈ ಬಾರಿ ಆ ವಾರ್ಡ್‌ನಲ್ಲಿ ಎರಡು ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಕಿನ್ನಿಪದವಿನಲ್ಲಿ ಹೊಸ ಕೊಳವೆಬಾವಿಯನ್ನು ಕೊರೆಯಲಾಗಿದೆ. ಕಲ್ಲಜರಿ ಪ್ರದೇಶಗಳಿಗೆ ಹೊಸ ಪೈಪ್‌ಲೈನ್‌ ಹಾಕಿ ನೀರು ಸರಬರಾಜು ಮಾಡಲಾಗುತ್ತಿದೆ. ಮಳವೂರು ವೆಂಟೆಡ್‌ ಡ್ಯಾಂನ ನೀರು ಹೆಚ್ಚಿನೆಡೆ ಸರಬರಾಜು ಆಗುತ್ತಿದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು ಈ ಬಾರಿ ಸಮಸ್ಯೆ ಬಾರದು.
– ರೋಜಿ ಮಥಾಯಸ್‌, ಅಧ್ಯಕ್ಷರು, ಬಜಪೆ ಗ್ರಾ.ಪಂ.

 ಸುಬ್ರಾಯ ನಾಯಕ್‌, ಎಕ್ಕಾರು

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.