ಕರಾವಳಿ ಪುಣ್ಯ ಕ್ಷೇತ್ರಗಳ ತವರು; ಅದೃಷ್ಟದ ಊರು: ಶಿವರಾಜ್‌ ಕುಮಾರ್‌

Team Udayavani, Dec 12, 2022, 7:15 AM IST

thumb-2

ಮಂಗಳೂರು: ಕರಾವಳಿ ಕಥೆಯಾಧಾರಿತ ಕಾಂತಾರ ಸಿನೆಮಾ ದೇಶ-ವಿದೇಶದಲ್ಲಿಯೂ ಸದ್ದು ಮಾಡುತ್ತಿರುವುದು ಒಂದೆಡೆಯಾದರೆ ಹಲವು ದೈವ ದೇವರ ನೆಲೆಯಾಗಿರುವ ಕರಾವಳಿ ಭೂಮಿ ಪುಣ್ಯ ಕ್ಷೇತ್ರಗಳ ತವರು. ನಿಜಕ್ಕೂ ಕರಾವಳಿ ಎಂಬುದು ಅದೃಷ್ಟದ ತಾಣ; ಹಲವು ವಿಶೇಷತೆಗಳನ್ನು ಒಳ ಗೊಂಡ ವಿವಿಧ ನಂಟು ಬೆಳೆಸಿದ ಊರು. ತಂದೆ ಡಾ| ರಾಜ್‌ಕುಮಾರ್‌ ಅವರಿಗೂ ಕರಾವಳಿ ನೆಲ ಅತ್ಯಂತ ಆಪ್ತವಾಗಿತ್ತು… ಹೀಗೆಂದು ನೆನಪಿಸಿಕೊಂಡವರು ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ “ಉದಯವಾಣಿ’ ಜತೆ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು.

ಬಿಡುಗಡೆಗೆ ಸಿದ್ಧವಾಗಿರುವ “ವೇದ’ ಸಿನೆಮಾ ಹೇಗೆ ಭಿನ್ನವಾಗಿದೆ?
ಗೀತಾ ಪ್ರೊಡಕ್ಷನ್‌ನ ಮೊದಲ ಸಿನೆಮಾ. ನನ್ನ 125ನೇ ಸಿನೆಮಾ. ಕಥೆ ಮೊದಲು ಕೇಳಿದಾಗಲೇ ತುಂಬ ಖುಷಿಯಾಯಿತು. ಆಪ್ತವಾಗುವ ಸಂದೇಶ ಇದರಲ್ಲಿದೆ. ಹಳೆಯ ಗೆಟಪ್‌ ಹಾಗೂ ಹೊಸ ಗೆಟಪ್‌ನಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಹರ್ಷ ಅವರ ಜತೆ ಸಿನೆಮಾ ಮಾಡುವುದೇ ಖುಷಿ. ಎಲ್ಲ ಸಿನೆಮಾಗಳು ಪರೀಕ್ಷೆ ರೀತಿ ಇರುವುದರಿಂದ ಭಯ ಸಾಮಾನ್ಯ.

ಭಜರಂಗಿ, ವಜ್ರಕಾಯ ಯಶಸ್ಸಿನ ಬಳಿಕ ಹರ್ಷ ಅವರ ಜತೆ ವೇದ ಸಿನೆಮಾ ಮಾಡಿದ್ದೀರಿ. ಹೇಗನಿಸುತ್ತದೆ?
ನಿಜಕ್ಕೂ ಇಂಥದ್ದೊಂದು ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ, ಹರ್ಷ ಅವರ ಸಿನೆಮಾ ಮೇಕಿಂಗ್‌ ಹೊಸ ರೂಪದಲ್ಲಿ ಇರುತ್ತದೆ. ಭಜರಂಗಿ 1 ಹಾಗೂ 2, ವಜ್ರಕಾಯ ಈ ಮೂರರಲ್ಲಿಯೂ ಶೇಡ್ಸ್‌ ಬೇರೆ ರೀತಿಯಲ್ಲಿ ನೀಡಿದ್ದರು. ಅವರು ಮಾಡುವ ಸಿನೆಮಾ ಹೊಸ ಗೆಟಪ್‌ ಹಾಗೂ ಸಂದೇಶ ಹೊಂದಿರು ತ್ತದೆ.

ಕಾಂತಾರ ರೀತಿಯಲ್ಲಿ ಕನ್ನಡದ ಹಲವು ಸಿನೆಮಾಗಳು ಪ್ಯಾನ್‌ ಇಂಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದರ ಬಗ್ಗೆ ಏನೆನ್ನುತ್ತೀರಿ?
ನಿಜಕ್ಕೂ ಕನ್ನಡ ಸಿನೆಮಾ ರಂಗಕ್ಕೆ ಇದೊಂದು ಹೊಸ ದಾರಿ. ಹೊಸ ನಿರ್ದೇಶಕರಿಗೆ ಸ್ಫೂರ್ತಿ. ಹೊಸತನ ನೀಡಿ ದರೆ ಯಾವ ಸಿನೆಮಾವೂ ಸದ್ದು ಮಾಡಬಲ್ಲುದು ಎಂಬು ದನ್ನು ಇತ್ತೀಚಿನ ಕನ್ನಡ ಚಿತ್ರಗಳು ತೋರಿಸಿಕೊಟ್ಟಿವೆ.

ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗವನ್ನು ಹತ್ತಿರದಿಂದ ತಾವು ಕಂಡಿದ್ದೀರಿ. ಇಲ್ಲಿನ ವಿಶೇಷವಾದರೂ ಏನು?
ಕರಾವಳಿ ಭಾಗದಲ್ಲಿ ಅವೆಷ್ಟೋ ಸಿನೆಮಾಗಳ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ. ಇದೊಂದು ಅದೃ ಷ್ಟದ ಜಾಗ. ಪುಣ್ಯ ಕ್ಷೇತ್ರದ ಊರು. ಅಪ್ಪಾಜಿಗೂ ಕರಾ ವಳಿ ಶ್ರೇಷ್ಠವಾದ ಜಾಗ. ರಥಸಪ್ತಮಿ, ಮಿಡಿದ ಶ್ರುತಿ, ಆಸೆಗೊಬ್ಬ ಮೀಸೆಗೊಬ್ಬ ಸಮಯದಿಂದಲೇ ನಾನು ಇಲ್ಲಿಗೆ ಬರುತ್ತಿದ್ದೇನೆ. ಒಳ್ಳೆಯ ಮನಸ್ಸಿನ ಜನರು ಇಲ್ಲಿನ ವಿಶೇಷ. ಊಟ ತಿಂಡಿ ಕೂಡ ಡಿಫರೆಂಟ್‌ ಆಗಿರುತ್ತದೆ.

ತುಳು ಸಿನೆಮಾ ಇಂಡಸ್ಟ್ರಿ ಬಗ್ಗೆ ತಮ್ಮ ಅಭಿಪ್ರಾಯ…
ತುಳು ಸಿನೆಮಾ ಮಾಡಬೇಕು ಎಂಬ ಬಗ್ಗೆನಾವೂ ಆಲೋಚನೆ ಮಾಡಿದ್ದೇವೆ. ಕನ್ನಡದ ಜತೆಗೆ ಇರುವ ತುಳು ಭಾಷೆಗೂ ಗೌರವ ನೀಡಬೇಕಾಗಿ ರುವುದು ನಮ್ಮ ಧರ್ಮ. ಹೀಗಾಗಿ ಮುಂದೆ ಆ ಅವಕಾಶ ಸಿಕ್ಕರೆ ಮಾಡುತ್ತೇನೆ.

ಭಕ್ತಿ-ಪ್ರಕೃತಿಯ “ಕಾಂತಾರ’
ಕಾಂತಾರ ಚಿತ್ರದ ಯಶಸ್ಸು ಬಹುದೊಡ್ಡ ಬೆಳವಣಿಗೆ. ಯಾಕೆಂದರೆ ಒಂದು ಸಿನೆಮಾ ಬಗ್ಗೆ ದೇಶ-ವಿದೇಶದಲ್ಲಿಯೂ ಮಾತನಾಡು ತ್ತಾರೆ ಅಂದರೆ ಅದು ದೊಡ್ಡ ಬದಲಾವಣೆಯ ಅಲೆ. ಹೀಗಾಗಿ ಯಾವುದೇ ಸಿನೆಮಾ ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ. ಅದು ದೇವರ ಅನುಗ್ರಹ ಅಷ್ಟೆ. ಹಲವು ವಿಶೇಷತೆಯ ಸೌಂದರ್ಯ ಕಾಂತಾರದಲ್ಲಿ ಇದೆ. ಭಕ್ತಿ, ಪ್ರಕೃತಿಯನ್ನು ಒಂದುಗೂಡಿಸಿದ ಕಾರಣ ಕಾಂತಾರ ವಿಶೇಷವಾಗಿ ಎದ್ದುಕಾಣುತ್ತಿದೆ ಎನ್ನುತ್ತಾರೆ ಶಿವರಾಜ್‌ ಕುಮಾರ್‌.

- ದಿನೇಶ್‌ ಇರಾ

ಟಾಪ್ ನ್ಯೂಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.