ಎಡಿಬಿ ಮೊದಲ ಹಂತದ ಕಾಮಗಾರಿ 2017ಕ್ಕೆ ಪೂರ್ಣ: ಎಚ್.ಸಿ. ಮಹದೇವಪ್ಪ
Team Udayavani, Mar 8, 2017, 11:46 AM IST
ಮಂಗಳೂರು: ರಾಜ್ಯದ ಸುಮಾರು 300 ಕಿ.ಮೀ. ಉದ್ದದ ಕಡಲ ತೀರದಲ್ಲಿ ವಿವಿಧ ಯೋಜನೆಗಳನ್ನು (ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಹಾಗೂ ನಿರ್ವಹಣ ಯೋಜನೆ) ಕೈಗೆತ್ತಿಕೊಳ್ಳುವ ಇರಾದೆಯಿಂದ ಈಗಾಗಲೇ ಎಡಿಬಿ ನೆರವಿನಿಂದ ಕೈಗೊಂಡ 911 ಕೋ.ರೂ.ಗಳ ಯೋಜನೆಯಲ್ಲಿ 223.32 ಕೋ. ರೂ. ಮೊತ್ತದ ಮೊದಲ ಹಂತದ ಕಾಮಗಾರಿ 2017ರ ಮೇ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. 2020ರೊಳಗೆ ಉಳಿದ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಸಚಿವ ಡಾ| ಎಚ್.ಸಿ. ಮಹದೇವಪ್ಪ ಹೇಳಿದರು.
ಮಂಗಳೂರು ಹಳೆ ಬಂದರಿಗೆ ಮಂಗಳವಾರ ಆಗಮಿಸಿದ ಅವರು, ಬಳಿಕ ಟಗ್‌ನಲ್ಲಿ ಪ್ರಯಾಣಿಸಿ ಅಳಿವೆಬಾಗಿಲು ಸುತ್ತಮುತ್ತಲ ಪರಿಸ್ಥಿತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಉಳ್ಳಾಲದ ವರೆಗೆ ಟಗ್‌ನಲ್ಲಿ ತೆರಳಿದ ಸಚಿವರು ಸಮುದ್ರದಲ್ಲಿ ಹೂಳೆತ್ತುವಿಕೆ ಹಾಗೂ ವಿವಿಧ ಬಂದರು ಅಭಿಧಿವೃದ್ಧಿ ಕುರಿತ ಕಾಮಗಾರಿ ಪರಿಶೀಲಿಸಿದ ಅನಂತರ ಸುದ್ದಿಗಾರರ ಜತೆಗೆ ಮಾತನಾಡಿದರು. 2011ರಲ್ಲಿ ಯುಪಿಎ ಅವಧಿಯಲ್ಲಿ ಈ ಯೋಜನೆಗೆ ಮಂಜೂರಾತಿ ದೊರಕಿತ್ತು. ರಾಜ್ಯ ಸರಕಾರ ಶೇ. 15ರಷ್ಟು ಹಾಗೂ ಎಡಿಬಿ ಶೇ. 85ರಷ್ಟು ಹಣ ನೀಡಲಿದೆ. ಕೇಂದ್ರ ಸರಕಾರ ಇದಕ್ಕೆ ಗ್ಯಾರಂಟಿ ನೀಡುತ್ತದೆ. 2014ರಲ್ಲಿ ಇದರ ಕಾಮಗಾರಿ ಪ್ರಾರಂಭವಾಗಿದ್ದು, 20 ಕೋ.ರೂ. ಕಾಮಗಾರಿ ಈಗಾಗಲೇ ಪೂರ್ಣವಾಗಿದೆ. ಮೀನುಗಾರರ ಜೀವನ ಸುಧಾರಣೆ ಹಾಗೂ ಅವರ ಆರ್ಥಿಕ ಮಟ್ಟ ಏರಿಕೆ ಮಾಡುವ ನೆಲೆಯಲ್ಲಿ ಸರಕಾರ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತದೆ. ಬಂದರು ಇಲಾಖೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಮುಂದಿನ ಬಜೆಟ್‌ನಲ್ಲಿ 500ರಿಂದ 600 ಕೋ.ರೂ. ನೀಡಲು ಮುಖ್ಯಮಂತ್ರಿಗೆ ಈ ಬಾರಿ ಕೇಳಿದ್ದೇವೆ ಎಂದರು.
ಮಂಗಳೂರಿಗೆ ಹೂಳೆತ್ತುವ ಯಂತ್ರ
ಮಂಗಳೂರಿನಲ್ಲಿ ಪ್ರಸ್ತುತ ಖಾಸಗಿಯಾಗಿ ಹೂಳೆತ್ತುವ ಯಂತ್ರ ಬಳಸಲಾಗುತ್ತಿದೆ. ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಸುಮಾರು 1 ಕೋ.ರೂ. ಖರ್ಚು ಮಾಡಲಾಗಿದೆ. ಹೀಗಾಗಿ ಮಂಗಳೂರಿಗೆ ಪ್ರತ್ಯೇಕ ಹೂಳೆತ್ತುವ ಯಂತ್ರವನ್ನು ಸರಕಾರದಿಂದ ಖರೀದಿ ಮಾಡಿ ಕಾಮಗಾರಿ ನಡೆಸುವ ಸಂಬಂಧ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಮೀನುಧಿಗಾರರು ಆಗ್ರಹಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.
ಉಳ್ಳಾಲದಲ್ಲಿ 29.70 ಕೋ.ರೂ. ಮೊತ್ತದ ಪ್ರಾಯೋಗಿಕ ಕಾಮಗಾರಿಗೆ ಟೆಂಡರ್ ವಹಿಸಲಾಗಿದೆ ಎಂದರು. ಸಚಿವ ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೋ, ಕಾಪೊರೇಟರ್ ಅಬ್ದುಲ್ ಲತೀಫ್, ಬಂದರು ಇಲಾಖೆ ನಿರ್ದೇಶಕ ಕ್ಯಾ| ಸ್ವಾಮಿ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಕಾಂತರಾಜು, ಕಾರ್ಯಕಾರಿ ಎಂಜಿನಿಯರ್ ಗಣೇಶ್, ಎಡಿಬಿಯ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು.
ಎಡಿಬಿ ಎರಡನೇ ಹಂತಕ್ಕೆ 623 ಕೋ.ರೂ.
ಸಚಿವ ಡಾ| ಎಚ್.ಸಿ. ಮಹದೇವಪ್ಪ ಮಾತನಾಡಿ, ಎಡಿಬಿ ಎರಡನೇ ಹಂತದಲ್ಲಿ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ್ಕೊರೆತ ಸಮಸ್ಯೆ ತೀವ್ರ ಕಾಡುತ್ತಿದೆ. ಅದರಲ್ಲೂ ಸೋಮೇಶ್ವರ, ಎರ್ಮಾಳ್ ತೆಂಕ, ಉದ್ಯಾವರ, ಕೋಡಿಬೆಂಗ್ರೆ, ಪಾವಿನ ಕುರ್ವೆ, ಕೋಡಿಕನ್ಯಾಣ, ಮರವಂತೆ, ಮುರುಡೇಶ್ವರ ಮತ್ತು ಕಮ್ಯೂನಿಟಿ ಉಪಯೋಜನೆಗಳು ಸೇರಿದಂತೆ ಒಟ್ಟು 54.75 ಕಿ.ಮೀ. ಉದ್ದಕ್ಕೆ 623 ಕೋ.ರೂ. ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗಿದೆ. ಉದ್ಯಾವರದಲ್ಲಿ 5 ಕಿ.ಮೀ. ಕಾಮಗಾರಿ ನಿರ್ವಹಿಸಲು 78.44 ಕೋ.ರೂ., ಮರವಂತೆಯಲ್ಲಿ 3.50 ಕಿ.ಮೀ. ಕಾಮಗಾರಿ ನಿರ್ವಹಿಸಲು 88.27 ಕೋ.ರೂ. ನಿಗದಿಪಡಿಸಿ ಗುತ್ತಿಗೆ ನೀಡಲಾಗಿದೆ. ಉಳಿದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.