ಆಧಾರ್ ನೋಂದಣಿದಾರರ ದಾಖಲೆಗಳ ನವೀಕರಣ ಕಡ್ಡಾಯ
Team Udayavani, Dec 22, 2022, 6:10 AM IST
ಮಂಗಳೂರು : ಕಳೆದ 10 ವರ್ಷಗಳಿಗೂ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆ ಪಡೆದ ಆಧಾರ್ ನೋಂದಣಿದಾರರು ತಮ್ಮ ದಾಖಲೆಗಳ ನವೀಕರಣ ಮಾಡಿಸಿ ಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಸೂಚಿಸಿದೆ.
ಯುಐಡಿಎಐ ಆಧಾರ್ ಕಾರ್ಡ್‌ಗೆ ನೀಡಲಾದ ಪ್ರಮುಖ ದಾಖಲೆ ಗಳಾದ ನಿವಾಸದ ವಿಳಾಸ ದೃಢೀ ಕರಣ ಪತ್ರ, ವ್ಯಕ್ತಿಯ ಗುರುತಿನ ದಾಖಲೆಗಳ ಜತೆಗೆ ಇತರ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣ ವಾಗಿ ತಿದ್ದುಪಡಿ ಮಾಡಿಕೊಳ್ಳಬೇಕು. ಎಲ್ಲ ಹಳೆಯ ಆಧಾರ್ ನೋಂದಣಿ ದಾರರು ತಮ್ಮ ದಾಖಲೆಗಳಲ್ಲಿನ ವಿವರಗಳು ಲೇಟೆಸ್ಟ್ ಆಗಿರುವಂತೆ ನಿಗಾ ವಹಿಸಬೇಕಿವೆ.
ಕಳೆದ 10 ವರ್ಷಗಳಿಂದ ಸರಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಆಧಾರ್ ಸಂಖ್ಯೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆಯ ಜೋಡಣೆ ಯೊಂದಿಗೆ ವಿವಿಧ ಯೋಜನೆ ಗಳ ಸಹಾಯಧನವು ನೇರ ವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸುಲಭವಾಗಿ ಸಾಧ್ಯವಾಗುತ್ತಿದೆ.
10 ವರ್ಷಗಳ ಮುನ್ನ ಆಧಾರ್ ಪಡೆದವರು ಒಂದು ವೇಳೆ ಮಧ್ಯದಲ್ಲಿ ದಾಖಲೆಗಳ ನವೀಕರಣ ಅಥವಾ ಪೂರಕ ಮಾಹಿತಿಗಳ ಪರಿಷ್ಕರಣೆ ಮಾಡಿಸಿದ್ದಲ್ಲಿ ಪುನಃ ನವೀಕರಣ ಮಾಡುವ ಅಗತ್ಯವಿಲ್ಲ. ಒಂದು ಬಾರಿಯೂ ಕೂಡ ದಾಖಲೆ, ಮಾಹಿತಿ ತಿದ್ದುಪಡಿ ಮಾಡಿಸದವರು ಮಾತ್ರ ಶೀಘ್ರದಲ್ಲಿ ಸಮೀಪದ ಆಧಾರ್ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಬೇಕು. ದಾಖಲೆಗಳ ನವೀಕರಣದ ನಿಗದಿತ ಶುಲ್ಕವನ್ನು ಕೂಡ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.