ಕದಿಕೆ ರಸ್ತೆಗೆ ಎಚ್ಚರಿಕೆ ಫಲಕ ಅಳವಡಿಕೆ
Team Udayavani, Jun 21, 2018, 12:38 PM IST
ಪಡುಪಣಂಬೂರು: ಮೀನುಗಾರಿಕಾ ಇಲಾಖೆಯಿಂದ 2 ಕೋ. ರೂ. ವೆಚ್ಚದಲ್ಲಿ ಪಡುಪಣಂಬೂರು ಗ್ರಾ. ಪಂ. ಮತ್ತು ಹಳೆಯಂಗಡಿ ಗ್ರಾ. ಪಂ.ನ ಗಡಿ ಪ್ರದೇಶವಾಗಿರುವ ಕದಿಕೆ-ಹೊಗೆಗುಡ್ಡೆ ನೂತನ ರಸ್ತೆಯಲ್ಲಿ ಸುರಕ್ಷತಾ ಕ್ರಮಕ್ಕೆ ಮೀನುಗಾರಿಕಾ ಇಲಾಖೆ ಮುಂದಾಗಿದೆ.
ಹೊಸ ರಸ್ತೆಯು ನಿರ್ಮಾಣವಾಗಿ ವರ್ಷ ಕಳೆದಿದ್ದರೂ ಯಾವುದೇ ರೀತಿಯ ಸೂಚನಾ ಫಲಕವನ್ನು ಅಳವಡಿಸಿದೇ ಇದ್ದುದರಿಂದ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ಇದೆ ಹಾಗೂ ಇಲ್ಲಿನ ಮೂಲಸೌಕರ್ಯದ ಬಗ್ಗೆ ’ಉದಯವಾಣಿಯ’ ಸುದಿನದಲ್ಲಿ ಎ. 5ರಂದು ವಿಶೇಷ ವರದಿಯ ಮೂಲಕ ಗಮನ ಸೆಳೆದಿತ್ತು.
ಇದೀಗ ರಸ್ತೆಯ ತಿರುವಿನಲ್ಲಿ ಸಂಚಾರಿ ನಿಯಮಗಳ ಎಚ್ಚರಿಕೆಯ ಫಲಕ, ಶಾಲಾ ಮಕ್ಕಳು ಸಂಚರಿಸುವಲ್ಲಿ ಎಚ್ಚರಿಕೆಯ ಫಲಕ, ನದಿಯ ತೀರದಲ್ಲಿ ಇರುವ ಕಲ್ಲಿಗೆ ಹಾಗೂ ಮೋರಿಗಳಿಗೆ ಬಿಳಿ ಸುಣ್ಣವನ್ನು ಬಳಿದು ವಾಹನ ಸವಾರರಿಗೆ ಮುಂಜಾಗ್ರತ ಎಚ್ಚರಿಗೆಳನ್ನು ಸೂಚಿಸುವ ಜತೆಗೆ ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಇಂತಹ ಫಲಕವನ್ನು ಅಳವಡಿಸಲಾಗಿದೆ.
ದಾರಿದೀಪ ಇನ್ನೂ ಆಗಿಲ್ಲ
ಪಡುಪಣಂಬೂರು ಹಾಗೂ ಚಿತ್ರಾಪುವಿನ ಮೂಲಕ ಸಸಿಹಿತ್ಲು ಪ್ರದೇಶಕ್ಕೆ ಸಂಪರ್ಕಿಸುವ ಈ ನೂತನ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನ ಸವಾರರು ಆಯಾ ತಪ್ಪಿದರೇ ನೇರವಾಗಿ ನದಿಗೆ ಬೀಳುವ ಸಾಧ್ಯತೆ ಇದೆ. ತಿರುವು ರಸ್ತೆಗಳಿರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಸಹ ಅಪಾಯ ತಪ್ಪಿದ್ದಲ್ಲ. ರಾತ್ರಿ ಸಮಯದಲ್ಲಿ ಸೂಕ್ತವಾದ ಬೆಳಕಿನ ಆವಶ್ಯಕತೆ ಇರುವುದರಿಂದ ದಾರಿ ದೀಪವನ್ನು ಅಳವಡಿಸುವ ಬಗ್ಗೆ ಪಡುಪಣಂಬೂರು ಗ್ರಾ. ಪಂ. ಕ್ರಮ ಕೈಗೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.