ದೇಸಿ ನಾಯಿ, ಬೆಕ್ಕಿನ ಮರಿಗಳ ದತ್ತು ಕೊಡುವ ಶಿಬಿರ
Team Udayavani, Apr 30, 2018, 11:27 AM IST
ಮಹಾನಗರ: ಅನಾಥ ನಾಯಿ ಬೆಕ್ಕುಗಳಿಗೆ ಅಕ್ಕರೆಯ ಆಶ್ರಯ ಕಲ್ಪಿಸುವ ಉದಾತ್ತ ಕಾರ್ಯಕ್ರಮ ಇದು. ರಸ್ತೆಗಳಲ್ಲಿ ವಾಹನಗಳ ಅಡಿಗೆ ಸಿಲುಕಿ ಜೀವ ಕಳೆದುಕೊಳ್ಳಬೇಕಾಗಿದ್ದ ಬೀದಿಬದಿ ಗಳಲ್ಲಿ ಆಹಾರವಿಲ್ಲದೆ ಹಸಿವಿನಿಂದ ನರಳಬೇಕಾಗಿದ್ದ ಮುಗ್ಧ ಜೀವಿಗಳಿಗೆ ನೆಲೆಯೊಂದನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ಆಶ್ರಯದಲ್ಲಿ ಉರ್ವ ಕೆನರಾ ಪ್ರೌಢ ಶಾಲೆ ಆವರಣದಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತು ಕೊಡುವ ಶಿಬಿರ ರವಿವಾರ ಆಯೋಜಿಸಲಾಗಿತ್ತು.
11 ನಾಯಿ, ಬೆಕ್ಕಿನ ಮರಿ ದತ್ತು
ಶಿಬಿರದಲ್ಲಿ 11 ನಾಯಿ ಮರಿಗಳು ಹಾಗೂ 4 ಬೆಕ್ಕಿನ ಮರಿಗಳನ್ನು ಅರ್ಹರಿಗೆ ದತ್ತು ನೀಡಲಾಯಿತು. ದತ್ತು ಪಡೆಯಲು ಇಚ್ಛಿಸುವ ಜನರು ನಿಗದಿತ ಮೊತ್ತ ಪಾವತಿಸಿ, ಸೂಕ್ತ ದಾಖಲೆಗಳೊಂದಿಗೆ ಶಿಬಿರಕ್ಕೆ ಆಗಮಿಸಿ ತಮಗೆ ಮೆಚ್ಚುಗೆಯಾದ ನಾಯಿ ಹಾಗೂ ಬೆಕ್ಕುಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ದತ್ತು ನೀಡಿದ ನಾಯಿ ಅಥವಾ ಬೆಕ್ಕಿನ ಮರಿಗಳ ತಿಂಗಳಿಗೊಮ್ಮೆ ಅನಿಮಲ್ ಕೇರ್ ಟ್ರಸ್ಟ್‌ಗೆ ವರದಿಯನ್ನು ನೀಡಬೇಕಾಗುತ್ತದೆ.
ರಸ್ತೆ ಬದಿಗಳಲ್ಲಿ ಅನಾಥವಾಗಿ ಬಿದ್ದ, ಗಾಯಗೊಂಡ ನಾಯಿ, ಬೆಕ್ಕು, ದನ ಹಾಗೂ ಪಕ್ಷಿಗಳು ಸೇರಿದಂತೆ ಸುಮಾರು 300ಕ್ಕೂ ಅಧಿಕ ಪ್ರಾಣಿಗಳಿಗೆ ಶಕ್ತಿ ನಗರದ ಅನಿಮಲ್ ಕೇರ್ ಟ್ರಸ್ಟ್ ನಲ್ಲಿ ನೆಲೆ ನೀಡಲಾಗಿದೆ. 2000ರಲ್ಲಿ ಆರಂಭಗೊಂಡ ಸಂಸ್ಥೆಯಲ್ಲಿ 50ಕ್ಕೂ ಅಧಿಕ ಮಂದಿ ಸ್ವಯಂಸೇವಕರಿದ್ದು, ಒಬ್ಬ ಕನ್ಸಲ್ಟೆಂಟ್ ವೈದ್ಯರಿದ್ದಾರೆ. ತಿಂಗಳಿಗೆ ಎರಡು ಬಾರಿ ವಿವಿಧ ಭಾಗದಲ್ಲಿ ದತ್ತು ನೀಡುವ ಕಾರ್ಯಕ್ರಮವನ್ನು ಆಯೋಜಿಸಿ ಸಂಸ್ಥೆಯಲ್ಲಿ ಪ್ರಾಣಿಗಳನ್ನು ದತ್ತು ನೀಡುತ್ತದೆ. ದತ್ತು ನೀಡಿದ ಬಳಿಕ ಅಲ್ಲಿನ ಸ್ವಯಂಸೇವಕರು ಕರೆ ಮಾಡಿ ಅಥವಾ ಭೇಟಿ ನೀಡಿ ಪ್ರಾಣಿಗಳ ಯೋಗ ಕ್ಷೇಮಗಳನ್ನು ವಿಚಾರಿಸುತ್ತಾರೆ.
ತಿಂಗಳಿಗೊಮ್ಮೆ ದತ್ತು ಕಾರ್ಯಕ್ರಮ
ನಮ್ಮ ಸಂಸ್ಥೆಗೆ ಪ್ರತಿ ತಿಂಗಳು ಸುಮಾರು 300 ಸಾಕು ಪ್ರಾಣಿಗಳನ್ನು ಸಾರ್ವಜನಿಕರು ಕರೆ ತಂದು ಬಿಡುತ್ತಾರೆ. ಒಂದುವೇಳೆ ಅವು ಗಾಯಗೊಂಡಿದ್ದರೆ ಸೂಕ್ತ ಚಿಕಿತ್ಸೆ ನೀಡಿ ಪೋಷಣೆ ಮಾಡಲಾಗುತ್ತದೆ. ಅಂಥಹ ಸಾಕು ಪ್ರಾಣಿಗಳನ್ನು ತಿಂಗಳಿಗೊಮ್ಮೆ ದತ್ತು ನೀಡುವ ಕಾರ್ಯಕ್ರಮ ಆಯೋಜಿಸುತ್ತೇವೆ. ಈ ಕಾರ್ಯಕ್ರಮದ ಮೂಲಕ ಬೀದಿ ನಾಯಿ, ಬೆಕ್ಕುಗಳಿಗೆ ಪ್ರೀತಿಯ ನೆಲೆ ದೊರೆಯುತ್ತದೆ.
– ಚೇತನಾ,
ಟ್ರಸ್ಟ್‌ನ ಸ್ವಯಂ ಸೇವಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.