ಕಾಲಡಿಯಲ್ಲಿ ಅದ್ವೈತ ಕೇಂದ್ರ: ಡಾ| ಶರ್ಮಾ
Team Udayavani, Feb 10, 2018, 8:15 AM IST
ಮಂಗಳೂರು: ಶಂಕರಾ ಚಾರ್ಯರ ಹುಟ್ಟೂರಾದ ಕಾಲಡಿಯಲ್ಲಿ ಅದ್ವೈತ ಕೇಂದ್ರವನ್ನು ಆರಂಭಿಸಲಾಗಿದ್ದು, ವೇದಾಂತ, ಇಂಡಾಲಜಿ, ಇಂಡಿಕ್ ಸೈನ್ಸ್ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ಜ್ಞಾನ ಪರಂಪರೆಯನ್ನು ಅರಿಯುವ ಉತ್ಸಾಹ ಇರುವ ಎಲ್ಲರಿಗೂ ಇಲ್ಲಿ ಕಲಿಕೆಯ ಅವಕಾಶವಿದೆ. ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ. ಕಲಿಕೆಯ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಚಿನ್ಮಯ ಮಿಷನ್ ಮಂಗಳೂರು ಶಾಖೆಯ ಅಧ್ಯಕ್ಷ ಡಾ| ಎಸ್.ಎಂ. ಶರ್ಮಾ ಹೇಳಿದರು.
ಕೆನರಾ ಹೈಸ್ಕೂಲ್ ಅಸೋಸಿಯೇ ಶನ್ ವತಿಯಿಂದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ನಡೆದ “ಏರ್ಯ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಮಾತನಾಡಿ, “ಜಗತ್ತಿ ನಲ್ಲಿರುವ ಒಳ್ಳೆಯ ವಿಷಯಗಳೆಲ್ಲ ನಮ್ಮೆಡೆಗೆ ಹರಿದು ಬರಲಿ ಎಂದು ವೇದಗಳ ಕಾಲದಲ್ಲಿಯೇ ಸಾರಿದ ನಾಡು ನಮ್ಮದು. ಅಂತಹ ಉದಾತ್ತ ಚಿಂತನೆಗಳ ದೇಶದಲ್ಲಿ ಇಂದಿನ ಪರಿಸ್ಥಿತಿ ಸ್ವಲ್ಪವೂ ಚೆನ್ನಾಗಿಲ್ಲ ಎಂದು ವಿಶ್ಲೇಷಿಸಿದರು.
ನಾವು ವ್ಯಾವಹಾರಿಕ ದೃಷ್ಟಿಯಿಂದ ಮಾತ್ರ ಬೆಳೆದಿದ್ದೇವೆಯೇ ಹೊರತು ಆಂತರಿಕವಾಗಿ ಬೆಳವಣಿಗೆ ಸಾಧ್ಯ ವಾಗಿಲ್ಲ. ಆಂತರಿಕವಾಗಿ ಸೋತಿದ್ದೇವೆ. ಮನುಷ್ಯ ಮನುಷ್ಯರನ್ನು ನಂಬುವ ಪರಿಸ್ಥಿತಿಯೇ ಇಂದು ಇಲ್ಲವಾಗಿದೆ. ಇದು ಬೇಸರದ ಸಂಗತಿ ಎಂದರು.
ಕೆನರಾ ಹೈಸ್ಕೂಲ್ ಅಧ್ಯಕ್ಷ ಎಸ್. ಎಸ್. ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಕಾಲೇಜಿನ ನಿವೃತ್ತ ಗ್ರಂಥಪಾಲಕರಾದ ಇಂದಿರಾ ಟಿ. ಅಭಿನಂದನ ಭಾಷಣ ಮಾಡಿದರು. ಪ್ರಾಂಶುಪಾಲರಾದ ಡಾ| ಕೆ.ವಿ. ಮಾಲಿನಿ, ಗೌರವ ಕಾರ್ಯದರ್ಶಿ ರಂಗನಾಥ ಭಟ್ ಉಪಸ್ಥಿತರಿದ್ದರು. ಡಾ| ಕಲ್ಪನಾ ಪ್ರಭು ನಿರೂಪಿಸಿದರು. ಡಾ| ಶಾಂತಲಾ ವಿಶ್ವಾಸ್ ಪ್ರಶಸ್ತಿಯ ವಿವರ ನೀಡಿದರು. ತಾರಾಕುಮಾರಿ ಪ್ರಶಸ್ತಿ ಪತ್ರ ವಾಚನ ಮಾಡಿದರು. ಡಾ| ಮನೋಹರ ಜೋಷಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
Mangaluru: ತ್ಯಾಜ್ಯ ಸಾಗಾಟ ವಾಹನಕ್ಕೆ ಏಳೇ ವರ್ಷ ಬಾಳಿಕೆ!
Mangaluru: ದ್ವಿಮುಖ ಸಂಚಾರ ನಿರ್ಧಾರಕ್ಕೆ ಅಡೆತಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.