ಬಳ್ಪ: ಮುಂದುವರಿದ ಆಪರೇಶನ್ ಚಿರತೆ
ನಾಗರಹೊಳೆಯಿಂದ ಪರಿಣಿತರ ತಂಡ ಆಗಮನ;ಶುಕ್ರವಾರ ಸಂಜೆಯ ತನಕವೂ ಪತ್ತೆಯಿಲ್ಲ
Team Udayavani, Jan 4, 2020, 5:25 AM IST
ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ಬಳ್ಪದಲ್ಲಿ ಕೃಷಿಕ ಮತ್ತು ಇಬ್ಬರು ಅರಣ್ಯಾಧಿಕಾರಿಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ಚಿರತೆಗಾಗಿ ಶೋಧ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಚಿರತೆಗೆ ಅರಿವಳಿಕೆ ನೀಡಿ ಸೆರೆಹಿಡಿಯುವ ಪ್ರಯತ್ನಕ್ಕೆ ಸಿದ್ಧತೆ ಮಾಡಲಾಗಿತ್ತಾದರೂ ಸಂಜೆ ತನಕವೂ ಚಿರತೆಯ ಸುಳಿವು ದೊರಕಲಿಲ್ಲ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶುವೈದ್ಯ ಡಾ| ಮುಜೀಬ್ ರೆಹಮಾನ್ ನೇತೃತ್ವದ ರಂಜನ್, ಅಕ್ರಂ, ನಂಜುಂಡ, ವೆಂಕಟೇಶ ಮತ್ತು ಇತರ ಸಿಬಂದಿ ಸಹಿತ 10 ಮಂದಿಯ ತಂಡ ಬಳ್ಪ ಗ್ರಾಮಕ್ಕೆ ಶುಕ್ರವಾರ ಬೆಳಗ್ಗೆ ಆಗಮಿಸಿತ್ತು.
ನಾಗರಹೊಳೆ ಪಶು ವೈದ್ಯಾಧಿಕಾರಿ ಮತ್ತು ಸುಬ್ರಹ್ಮಣ್ಯ, ಪಂಜ ವಲಯಗಳ ಅರಣ್ಯಾಧಿಕಾರಿಗಳ ಜಂಟಿ ತಂಡಗಳು ಘಟನೆ ನಡೆದ ಕುಳ, ಆಲ್ಕಬೆ, ಕಲ್ಲೇರಿ, ಎಣ್ಣೆಮಜಲು ಮುಂತಾದ ಕಡೆಗಳ ಮೀಸಲು ಅರಣ್ಯಕ್ಕೆ ತೆರಳಿ ಚಿರತೆ ಶೋಧ ಕಾರ್ಯ ನಡೆಸಿದರು. ಅರಿವಳಿಕೆ ಮದ್ದು ಸಹಿತ ಬಂದೂಕು, ಬೋನು, ಬಲೆ ಮತ್ತು ಶಸ್ತ್ರಾಸ್ತ್ರಗಳ ಜತೆ ತಂಡವು ಕಾಡಿನಲ್ಲಿ ಸಾಕಷ್ಟು ದೂರ ಹುಡುಕಾಟ ನಡೆಸಿದರೂ ಚಿರತೆಯ ಸುಳಿವು ಲಭ್ಯವಾಗಿಲ್ಲ.
ಶೋಧ ಕಾರ್ಯವನ್ನು ಸ್ಥಳೀಯರ ಸಹಕಾರ ಪಡೆದು ಶನಿವಾರವೂ ಮುಂದುವರಿಸುವುದಾಗಿ ಡಾ| ಮುಜೀಬ್ ರೆಹಮಾನ್ “ಉದಯವಾಣಿ’ಗೆ ತಿಳಿಸಿದ್ದಾರೆ.
ದಾಳಿ ನಡೆಸಿದ ಬಳಿಕ ಗುರುವಾರ ನಡುರಾತ್ರಿ ತನಕವೂ ಚಿರತೆ ಸ್ಥಳೀಯವಾಗಿ ಓಡಾಟ ನಡೆಸಿರುವುದು ಅರಣ್ಯ ಇಲಾಖೆ ಸಿಬಂದಿಯ ಗಮನಕ್ಕೆ ಬಂದಿತ್ತು. ಚಿರತೆ ಕಾಲಿನಲ್ಲಿ ಉಳಿದಿದ್ದ ಉರುಳಿನ ತುಂಡು ಬೇರ್ಪಟ್ಟು ಕಳಚಿ ಬಿದ್ದಿರುವುದು ಶೋಧದ ವೇಳೆ ಪತ್ತೆಯಾಗಿದೆ. ಹೀಗಾಗಿ ಬಂಧನದಿಂದ ಮುಕ್ತಗೊಂಡ ಚಿರತೆ ದಟ್ಟ ಕಾಡಿನೊಳಗೆ ತೆರಳಿರುವ ಸಾಧ್ಯತೆಗಳಿವೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಮುಂಜಾಗ್ರತೆಯ ಕ್ರಮವಾಗಿ ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಪಾಳಿಯಲ್ಲಿ ಕಾವಲು ಕಾಯುತ್ತಿದ್ದಾರೆ.
ಗಾಯಾಳುಗಳು ಚೇತರಿಕೆ
ಚಿರತೆಯ ದಾಳಿಯಿಂದ ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದು, ಗಂಭೀರ ಗಾಯಗೊಂಡ ಬಾಲಕೃಷ್ಣ ಗೌಡ ಕಾಯರ ಅವರಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಶುಕ್ರವಾರದ ಕಾರ್ಯಾಚರಣೆ ವೇಳೆ ಆರ್‌ಎಫ್ಒಗಳಾದ ಗಿರೀಶ್, ಮಂಜುನಾಥ್, ತ್ಯಾಗರಾಜ್, ಮಂಗಳೂರು ಅರಣ್ಯ ಸಂಚಾರಿ ದಳದ ಪ್ರವೀಣ್ ಶೆಟ್ಟಿ, ಪುತ್ತೂರು ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಸೇರಿದಂತೆ ಮೂರು ವಲಯಗಳ ಸುಮಾರು 50 ಸಿಬಂದಿ ಭಾಗವಹಿಸಿದ್ದರು.
ಮಾಸಿಲ್ಲ ದಾಳಿ ಭೀತಿ
ಬಳ್ಪ ಗ್ರಾಮದಲ್ಲಿ ಗುರುವಾರ ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಚಿರತೆ ಇನ್ನೂ ಪತ್ತೆಯಾಗದೆ ಇರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಮತ್ತೆ ಚಿರತೆ ದಾಳಿಯ ಭೀತಿ ಸ್ಥಳೀಯ ನಿವಾಸಿಗಳನ್ನು ಕಾಡುತ್ತಿದೆ. ಅರಣ್ಯದಂಚಿನ ಕಾಲು ದಾರಿಗಳಲ್ಲಿ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತಿದ್ದಾರೆ. ಮಕ್ಕಳು, ಮಹಿಳೆಯರು ಭಯಭೀತರಾಗಿದ್ದಾರೆ. ಹೆತ್ತವರು ಮಕ್ಕಳನ್ನು ಶಾಲೆಗೆ ಬಿಟ್ಟು ಸಂಜೆ ವಾಪಸ್ ಕರೆತರುತಿದ್ದಾರೆ. ತೋಟಕ್ಕೆ ತೆರಳಲು ಕೂಡ ಕೃಷಿಕರು ಹಿಂಜರಿಯುತ್ತಿದ್ದಾರೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ನಡುಗಲ್ಲು: ಚಿರತೆ ಹಾವಳಿ!
ಇದೇವೇಳೆ ನಾಲ್ಕೂರು ಗ್ರಾಮದಲ್ಲೂ ಚಿರತೆ ಹಾವಳಿ ಕಂಡು ಬಂದಿದೆ. ಸ್ವಲ್ಪ ಸಮಯಗಳಿಂದ ಚಿರತೆ ಮರಕತ, ಉಜಿರಡ್ಕ ಚಾರ್ಮಾತ ಮುಂತಾದ ಕಡೆಗಳಲ್ಲಿ ಸ್ಥಳಿಯರಿಗೆ ಕಾಣಸಿಕ್ಕಿದೆ. ಹಗಲು ಹೊತ್ತಲ್ಲೇ ಕಂಡುಬಂದಿದ್ದು, ಶಾಲಾ ಮಕ್ಕಳು ಮತ್ತು ಊರಿನವರು ಭಯದಲ್ಲೇ ಓಡಾಡುವ ಸನ್ನಿವೇಶ ಇದೆ ಎಂದು ಸ್ಥಳಿಯ ನಿವಾಸಿ ವಿಜಯ್ ಕುಮಾರ್ ಚಾರ್ಮಾತ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.