ಕೋಸ್ಟಲ್ ಸಿನೆಮಾದಲ್ಲಿ ಏರಾ ಉಲ್ಲೆರ್ !
Team Udayavani, Apr 26, 2018, 11:53 AM IST
ತುಳು ರಂಗಭೂಮಿ ಹಾಗೂ ಸಿನೆಮಾ ಅಂದಾಗ ಪಕ್ಕನೆ ಕೇಳಿ ಬರುವ ಹೆಸರು ದೇವದಾಸ್ ಕಾಪಿಕಾಡ್. ತುಳು ಸಾಂಸ್ಕೃತಿಕ ಲೋಕದ ಬೆಳವಣಿಗೆಯಲ್ಲಿ ಕಾಪಿಕಾಡ್ ಶ್ರಮ ಅಷ್ಟರ ಮಟ್ಟಿಗೆ ಉಲ್ಲೇಖನೀಯ. ತೆಲಿಕೆದ ಬೊಳ್ಳಿ, ಚಂಡಿ ಕೋರಿ, ಅರೆಮರ್ಲೆರ್ ಸಹಿತ ತುಳು ಸಿನೆಮಾ ಲೋಕದಲ್ಲಿ ಕಾಪಿಕಾಡ್ ಅವರದ್ದು ನಿರಂತರ ಕೊಡುಗೆ. ಅದೇ ಮೂಡ್‌ನಲ್ಲಿ ಈಗ ಸದ್ದಿಲ್ಲದೆ ಸಿನೆಮಾ ಮಾಡುವುದಕ್ಕೆ ಕಾಪಿಕಾಡ್ ಮುಂದಾಗಿದ್ದಾರೆ.
ಈಗಾಗಲೇ ಚಿತ್ರದ ಹೆಸರನ್ನು ಪ್ರಕಟಿಸಿರುವ ಕಾಪಿಕಾಡ್, ಶೂಟಿಂಗ್ ಸಹಿತ ಇತರ ಮಾಹಿತಿಗಳನ್ನು ಸಸ್ಪೆನ್ಸ್ ಆಗಿ ಇಡಲು ವಿಶೇಷ ಕಾಳಜಿ ವಹಿಸಿದ್ದಾರೆ. ಹೀಗಾಗಿಯೇ ಚಿತ್ರದ ಮುಹೂರ್ತ ನಡೆದು ನಾಲ್ಕೈದು ದಿನದ ಶೂಟಿಂಗ್ ನಡೆದಿದ್ದರೂ, ಕಾಪಿಕಾಡ್ ಅವರು ತಾವು ಮಾಡುತ್ತಿರುವ ಸಿನೆಮಾದ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸಿನೆಮಾ ಶೂಟಿಂಗ್ ಎಲ್ಲ ಮುಗಿದ ಅನಂತರವೇ ಸಿನೆಮಾದ ಬಗ್ಗೆ ಪ್ರಚಾರ ಮಾಡುವ ಎಂಬ ಯೋಚನೆಯಲ್ಲಿ ಅವರಿದ್ದಾರೆ.
ಸಿನೆಮಾದ ಹೆಸರು ‘ಏರಾ ಉಲ್ಲೆರ್’. ಹೆಸರೇ ಸೂಚಿಸುವಂತೆ ಇಲ್ಲೊಂದು ಸಸ್ಪೆನ್ಸ್‌ನ ಸೂಚನೆ ಪಕ್ಕಾ ಆದಂತಾಗುತ್ತದೆ. ಹೀಗಾಗಿ ಈ ಸಿನೆಮಾ ಸಸ್ಪೆನ್ಸ್ ಎನ್ನುವುದು ದೃಢವಾಗುತ್ತದೆ. ತುಳುವಿನಲ್ಲಿ ಇಂತಹ ಪ್ರಯತ್ನ ಅಪರೂಪ. ಯಾಕೆಂದರೆ ಕಾಮಿಡಿ ಗಿಮಿಕ್‌ನಲ್ಲಿಯೇ ಸಿನೆಮಾ ಓಡುವುದು ಎಂದು ಈಗಾಗಲೇ ಫಿಕ್ಸ್ ಆಗಿರುವ ಕೋಸ್ಟಲ್‌ವುಡ್‌ನಲ್ಲಿ ಕಾಮಿಡಿ ಜತೆಗೆ ಇನ್ನೂ ಏನಾದರೂ ಬೇಕು ಎಂಬ ಕಳಕಳಿಗೆ ಕಾಪಿಕಾಡ್ ಸ್ಪಂದಿಸಿದ್ದಾರೆ. ಇದೇ ಕಾರಣಕ್ಕಾಗಿ ಸಸ್ಪೆನ್ಸ್ ಚಿತ್ರ ಮಾಡಲು ಮನಸ್ಸು ಮಾಡಿದ್ದಾರೆ.
ಗುಟ್ಟು ಬಿಡದೆ, ಮಂಗಳೂರಿನಲ್ಲಿ ಶೂಟಿಂಗ್ ಕಾಣುತ್ತಿರುವ ‘ಏರಾ ಉಲ್ಲೆರ್’ನಲ್ಲಿ ಅರ್ಜುನ್ ಕಾಪಿಕಾಡ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ ‘ಕರ್ಣೆ’ ಶೂಟಿಂಗ್ ಮುಗಿಸಿ ಬಂದಿರುವ ಅರ್ಜುನ್ ‘ಏರಾ ಉಲ್ಲೆರ್’ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನಾಯಕಿಯಾಗಿ ರಶ್ಮಿತಾ ಚಂಗಪ್ಪ ಕಾಣಿಸಲಿದ್ದಾರೆ. ಉಳಿದಂತೆ ಯಾರಿದ್ದಾರೆ ಎಂಬುದು ಸದ್ಯದ ಕುತೂಹಲ. ಅಂದಹಾಗೆ, ತುಳುವಿನ ಕಾಮಿಡಿ ಸ್ಟಾರ್ ಗಳು ಇದರಲ್ಲೂ ಇದ್ದಾರೆ ಹಾಗೂ ಹೊಸ ಮುಖಗಳಿಗೆ ವಿಶೇಷ ಒತ್ತು ನೀಡಲಾಗಿದೆ ಎಂಬ ಮಾಹಿತಿ ಇದೆ.
ಈಗಾಗಲೇ ಕಾಪಿಕಾಡ್ ‘ಅರೆ ಮರ್ಲೆರ್’ ಮುಗಿಸಿದ ಅನಂತರ ‘ಪಿಸ್‌ಂಟೆ’ ಎಂಬ ಸಿನೆಮಾ ಮಾಡುವುದಿತ್ತು. ಜತೆಗೆ ಕನ್ನಡದಲ್ಲಿ ‘ಜಬರ್ದಸ್ತ್’ ಎಂಬ ಸಿನೆಮಾ ಮಾಡುವ ಬಗ್ಗೆಯೂ ಯೋಚಿಸಿದ್ದರು. ಆದರೆ, ಅದರ ಮಧ್ಯೆಯೇ ಈಗ ದಿಢೀರಾಗಿ ‘ಏರಾ ಉಲ್ಲೆರ್’ ಸಿನೆಮಾ ಮಾಡಲಾಗುತ್ತಿದೆ. ಬೊಳ್ಳಿ ಮೂವೀಸ್ ಲಾಂಛನದಲ್ಲಿ ಸಿನೆಮಾ ರೆಡಿಯಾಗುತ್ತಿದೆ. ಮುಂದಿನ 18 ದಿನದಲ್ಲಿ ಸಿನೆಮಾ ಶೂಟಿಂಗ್ ಪೂರ್ಣಗೊಳಿಸಲಿದೆ. ರಂಗಭೂಮಿ- ಸಿನೆಮಾದಲ್ಲಿ ಎವರ್‌ಗ್ರೀನ್ ಹಾಡುಗಳನ್ನು ನೀಡಿರುವ ಕಾಪಿಕಾಡ್ ಅವರೇ ಈ ಸಿನೆಮಾಕ್ಕೂ ಸಂಗೀತ ಒದಗಿಸಲಿದ್ದಾರೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.