ಏರೊಫಿಲಿಯಾ-2018 ರಾಷ್ಟ್ರೀಯ ಮಟ್ಟದ ಸ್ಪರ್ಧೆ
Team Udayavani, Jan 27, 2018, 3:06 PM IST
ಮಹಾನಗರ: ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕಾಲೇಜಿನ ಬಾನಂಗಳದಲ್ಲಿ ಶುಕ್ರವಾರ ಲೋಹದ ಹಕ್ಕಿಗಳ ಮಾದರಿ ಪ್ರದರ್ಶನ ಜೋರಾಗಿತ್ತು. ಆಗಾಗ ಬಾನಂಗಳದಲ್ಲಿ ಹಾರಾಟ ನಡೆಸುವ ರಿಮೋಟ್ ವಿಮಾನ ನೆರೆದಿದ್ದ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಇದಕ್ಕೆ ಸಾಕ್ಷಿಯಾದದ್ದು ಕಾಲೇಜಿನಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ಏರೊಫಿಲಿಯಾ- 2018 ರಾಷ್ಟ್ರೀಯ ಮಟ್ಟದ ಸ್ಪರ್ಧೆ. ಏರೋ ಮಾದರಿ ಸ್ಪರ್ಧೆಯಲ್ಲಿ ವಿವಿಧ ಪ್ರೌಢಶಾಲಾ ವಿಭಾಗದಿಂದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತಾವು ತಯಾರಿಸಿದ ವಿಮಾನ ಮಾದರಿಯನ್ನು ಪ್ರದರ್ಶಿಸಿದರು.
2.75 ಲಕ್ಷ ರೂ. ಬಹುಮಾನ
ಕಾರ್ಯಕ್ರಮದಕ್ಕೆ ಆಗಮಿಸಿದ ವಿದ್ಯಾರ್ಥಿ ಮತ್ತು ಸಾರ್ವಜನಿಕರೊಂದಿಗೆ ಗಣಿತ, ಇತಿಹಾಸ, ಕಲೆ, ಗ್ರಾಫಿಕ್ಸ್ ಹಾಗೂ ವಿಜ್ಞಾನದಲ್ಲಿ ತಮ್ಮ ಅನುಭವಗಳನ್ನು ಸ್ಪರ್ಧಿಗಳು ಹಂಚಿಕೊಂಡರು. ಏರೊಫಿಲಿಯಾ 2018ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2.75 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದ್ದು, ಭಾರತದ ಪ್ರಸಿದ್ಧ ಡ್ರೋಣ್ ಸ್ಪರ್ಧೆಗೆ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಯ ಏರ್ ಕ್ರಾಫ್ಟ್‌ನ ಮಾದರಿಗಳನ್ನು ವಿದ್ಯುತ್‌ಚಾಲಿತ ವ್ಯವಸ್ಥೆಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಪ್ರದರ್ಶಿಸಿದರು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ರೇಡಿಯೊ ಫೈಯರ್ಗಳು ಭಾಗವಹಿಸಿದ್ದು, ಸ್ಪರ್ಧೆಯ ವಿಶೇಷ ಆಕರ್ಷಣೆ.
ತಾಂತ್ರಿಕ ಚರ್ಚೆ
ಆರ್‌ಸಿ ಮಾಡೆಲಿಂಗ್ ಬಗ್ಗೆ ಅತಿಥಿಗಳಿಂದ ತಾಂತ್ರಿಕವಾಗಿ ಚರ್ಚೆ ನಡೆಯಿತು. ಈ ಬಾರಿ ಟೆಕ್ಸಾಸ್, ಲೇಕ್ ಲ್ಯಾಂಡ್. ಯುಎಸ್‌ಎ, ಫ್ಲೊರಿಡಾ ದೇಶಗಳಲ್ಲಿ ನಡೆದ ಎಸ್‌ಎಇ ಅಂತಾರಾಷ್ಟ್ರೀಯ ಏರೊ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನುಭವ ಪಡೆದಿರುವ ತಂಡದ ಸದಸ್ಯರ ತಂಡ ಟೀಮ್ ಚಾಲೆಂಜರ್ಸ್‌ನಲ್ಲಿ ಇದೆ.
ಸ್ಪರ್ಧೆಯಲ್ಲಿನ ಆಕರ್ಷಣೆ
ಭಾರತ ಮತ್ತು ದುಬೈಗಳ 5 ವೃತ್ತಿಪರ ತಂಡಗಳಿಂದ ಫಕ್ಸ್ಡ್ ವಿಂಗ್, 3ಡಿ ಹೆಲಿಕಾಫ್ಟರ್ ಏರ್ ಶೋ ಪ್ರದರ್ಶನ, ಡಿಆರ್‌ಡಿಒ, ಏರ್‌ಫೋರ್ಸ್, ಇಸ್ರೋ ಮತ್ತು ಐಐಎಸ್‌ಸಿಗಳಿಂದ ತಜ್ಞರು ಭಾಗವಹಿಸುವಿಕೆ, ಏರೋ ಮಾದರಿ, ಡ್ರೋಣ್ ರೇಸ್ ಈ ಬಾರಿಯ ಶೋದ ಪ್ರಮುಖ ಆಕರ್ಷಣೆಯಾಗಿದೆ.
ತಂತ್ರಜ್ಞಾನ ಬೆಳೆಯುತ್ತಿದೆ
ಕಾರ್ಯಕ್ರಮವನ್ನು ಗ್ರೂಪ್ ಕ್ಯಾ| ಎಂ.ಜೆ. ಅಗಸ್ಟಿನ್ ಉದ್ಘಾಟಿಸಿ, ತಂತ್ರಜ್ಞಾನ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದರಂತೆಯೇ ಮಾನವ ಕೂಡ ಇದಕ್ಕೆ ಒಗ್ಗಿಕೊಂಡಿದ್ದಾನೆ ಎಂದು ಹೇಳಿದರು. ಮುಖ್ಯ ಅತಿಥಿ ಕರ್ನಲ್ ಮಹೇಂದ್ರ ಬಾಬು ಮಾತನಾಡಿ, ಪ್ಲೈಯಿಂಗ್ ಇಂದಿನ ದಿನದಲ್ಲಿ ಪ್ಯಾಷನ್ ಆಗಿ ಪರಿವರ್ತನೆಯಾಗಿದೆ ಎಂದರು. ಕಾಲೇಜಿನ ಉಪ ಪ್ರಾಂಶುಪಾಲ ಎಸ್.ಎಸ್. ಬಾಲಕೃಷ್ಣ, ಟೀಂ ಚಾಲೆಂಜ್‌ನ ಪ್ರಾಬಿಡ್ ಪಣಿಕ್ಕನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.