ವಯಸ್ಸು ಚಿಕ್ಕದಾದರೂ ಕೀರ್ತಿ ದೊಡ್ಡದು!
Team Udayavani, Jan 24, 2020, 5:59 AM IST
ಸಾಧನೆಗೆ ವಯಸ್ಸಿನ ಹಂಗಿಲ್ಲ. ಅಂತೆಯೇ ತಮ್ಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದವರ ಪಟ್ಟಿ ಇಲ್ಲಿದೆ. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎಂಬಂತೆ ಇವರ ಸಾಧನೆ ಜಗದಗಲಕ್ಕೂ ಮುಟ್ಟಿದೆ.
ಶ್ರೀ ಲಕ್ಷ್ಮೀ ಸುರೇಶ್
ವಿಶ್ವದ ಅತಿ ಕಿರಿಯ ವೆಬ್ ಡಿಸೈನರ್ ಮತ್ತು ಸಿಇಒ ಎಂಬ ಖ್ಯಾತಿಯನ್ನು ಶ್ರೀ ಲಕ್ಷ್ಮೀ ಸುರೇಶ್ ಅವರು ಹೊಂದಿದ್ದಾರೆ. ಇವರು ಕೇರಳದ ಕೊಝೀಕ್ಕೊಡ್‌ನವರು. ತಮ್ಮ 6ನೇ ವಯಸ್ಸಿನಲ್ಲೇ ವೆಬ್ ಡಿಸೈನ್ ಮಾಡಿದ್ದಾರೆ. ಪ್ರಸ್ತುತ ಇವರು ಭಾರತಾದ್ಯಂತ 100ಕ್ಕೂ ಹೆಚ್ಚು ಸಂಸ್ಥೆಗಳಿಗೆ ವೆಬ್‌ಸೈಟ್ ವಿನ್ಯಾಸಗೊಳಿಸಿದ್ದಾರೆ. ಇವರಿಗೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.
ನೈನಾ ಜೈಸ್ವಾಲ್
ಅತಿ ಕಿರಿಯ ಪದವೀಧರೆ ಎಂಬ ಹೆಗ್ಗಳಿಕೆ ಪಡೆದಿರುವ ನೈನಾ ಜೈಸ್ವಾಲ್ ಅವರು ತಮ್ಮ 8ನೇ ವಯಸ್ಸಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, 13ನೇ ವಯಸ್ಸಿಗೆ ಪತ್ರಿಕೋದ್ಯಮ ಪದವಿ ಪಡೆದಿದ್ದು ಭಾರತ ಮಾತ್ರವಲ್ಲದೆ ಏಷ್ಯಾದಲ್ಲೇ ಅತೀ ಕಿರಿಯ ಪದವೀಧರೆಯಾಗಿದ್ದಾರೆ. ಕೇವಲ ಓದಿನಲ್ಲಿ ಮಾತ್ರವಲ್ಲದೆ ಇತರ ಚಟುವಟಿಕೆಯಲ್ಲೂ ಮುಂದಿರುವ ಇವರು ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಹಲವು ಬಾರಿ ಜಯಗಳಿಸಿದ್ದಾರೆ. ಅಲ್ಲದೇ ರಾಮಾಯಣ 108 ಶ್ಲೋಕಗಳನ್ನು ಕಂಠಪಾಠ ಮಾಡಿದ್ದಾರೆ.
ಹಿಮಾ ದಾಸ್
ಇವರು ಅಸ್ಸಾಂನ ಭತ್ತದ ಕೃಷಿಕನ ಮಗಳು. ತಮ್ಮ 18ನೇ ವಯಸ್ಸಿನಲ್ಲಿ ಐಎಎಎಫ್ ಉ-20 ಚಾಂಪಿಯನ್‌ಶಿಪ್ 400 ಮೀಟರ್ ಓಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದರಲ್ಲಿ ಬಂಗಾರದ ಪದಕ ಪಡೆದ ಮೊದಲ ಭಾರತೀಯ ಆ್ಯತ್ಲೀಟ್ ಎಂಬ ಹಿರಿಮೆ ಇವರಿಗಿದೆ. 2018 ರಲ್ಲಿ ಅರ್ಜುನ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿರುವ ಹಿಮಾ ಅವರು ಕಾಮನ್‌ವೆಲ್ತ್‌ಗೆ ಅರ್ಹತೆ ಪಡೆಯುವ ಮುನ್ನ ಕೇವಲ ಒಂದು ವರ್ಷ ಮಾತ್ರ ತರಬೇತಿಗೆ ಒಳಗಾಗಿದ್ದರು.
ಸಮೃದ್ಧಿ ಯಾದವ್
ಬೆಂಗಳೂರಿನ ಬೆಡಗಿ ಸಮೃದ್ಧಿ ಯಾದವ್ ಪೋಸ್ಟ್ ಕಾರ್ಡ್‌ನಲ್ಲಿ ಗರಿಷ್ಠ ಬಾರಿ ಕನ್ನಡ ಕಣ್ಮಣಿ ಬರೆದಿರುವ ದಾಖಲೆ ಹೊಂದಿದ್ದಾರೆ. ಇವರು ಫೆಬ್ರವರಿ 4, 2008ರಲ್ಲಿ ಜನಿಸಿದ್ದು. ನವೆಂಬರ್ 30, 2019ರಲ್ಲಿ ಪೊಸ್ಟ್‌ಕಾರ್ಡ್‌ನಲ್ಲಿ ಒಟ್ಟು 852 ಬಾರಿ ಕನ್ನಡ ಕಣ್ಮಣಿ ಬರೆದ ದಾಖಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಾಗಿದೆ.
ಆರತಿ ಕಿರಣ್ ಶೇಟ್
ಹೊನ್ನಾವರದ ನವಿಲುಗೋಣ ಗ್ರಾಮದ ಈ ಬಾಲಕಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿದೆ. ತನ್ನ ಮನೆಯ ಮುಂದೆ ಈ ಬಾಲಕಿ ತನ್ನ ತಮ್ಮನೊಂದಿಗೆ ಆಟವಾಡುತ್ತಿ¨ªಾಗ ದಿಢೀರನೆ ಗೂಳಿಯೊಂದು ದಾಳಿ ಮಾಡುತ್ತದೆ. ಅದಕ್ಕೆ ಅಂಜದೇ ಅದರಿಂದ ತಮ್ಮನ ಪ್ರಾಣವನ್ನು ಕಾಪಾಡಿ ಸಾಹಸ ಮೆರೆದಿದ್ದಕ್ಕಾಗಿ ಸರಕಾರ ಈ ಬಾಲಕಿಗೆ ಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
– ಶಿವಮಲ್ಲಯ್ಯ, ಪ್ರೀತಿ ಭಟ್, ಧನ್ಯಶ್ರೀ, ಪೂರ್ಣಿಮಾ, ಶಿವಾನಂದ
ನಿರ್ವಹಣೆ: ಮಂಗಳೂರು ಸುದಿನ ಡೆಸ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.