ಅಗ್ರಿಗೋಲ್ಡ್ ವಂಚನೆ ಪ್ರಕರಣ: ಹಣ ಮರಳಿಸಲು ಗ್ರಾಹಕರ ಮೊರೆ
Team Udayavani, Apr 12, 2018, 9:10 AM IST
ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರವು ಶೀಘ್ರ ಅಗ್ರಿ ಗೋಲ್ಡ್ ಏಜೆಂಟರಿಗೆ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಿ ಎಲ್ಲ ಸದಸ್ಯರಿಗೆ ಅವರ ಹಣ ವಾಪಸ್ ಸಿಗುವಂತೆ ಮಾಡಬೇಕು ಎಂದು ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಕಲ್ಯಾಣ ಸಂಘ ಒತ್ತಾಯಿಸಿದೆ.
ಆಂಧ್ರ ಮೂಲದ ಅಗ್ರಿಗೋಲ್ಡ್ ಸಂಸ್ಥೆಯು ತನ್ನ ಗ್ರಾಹಕರಿಗೆ ಅಂದಾಜು 7 ಸಾವಿರ ಕೋ. ರೂ. ಹಿಂದಿರುಗಿಸಲು ಬಾಕಿ ಉಳಿಸಿದೆ. ಈ ಬಗ್ಗೆ ಗ್ರಾಹಕರು ಮತ್ತು ಏಜೆಂಟರು ಹಲವು ಬಾರಿ ಹೋರಾಟ ನಡೆಸಿದರೂ ಸಿಗಬೇಕಾದ ಹಣ ಕೈ ಸೇರಿಲ್ಲ. ಈಗ ಹೈದರಾಬಾದ್ ಹೈಕೋರ್ಟ್‌ನ ಆದೇಶದಂತೆ ಅಗ್ರಿಗೋಲ್ಡ್‌ನ ಆಸ್ತಿಯನ್ನು ಮಾರಾಟ ಮಾಡಿ ಪ್ರತಿ ಸದಸ್ಯನಿಗೆ ಹಣ ಮರಳಿಸಬೇಕೆಂದು ತಿಳಿಸಲಾಗಿದೆ. ಆದರೆ ಈ ಆದೇಶವನ್ನು ಪಾಲಿಸದ ಕಂಪೆನಿಯು ವೃಥಾ ಕಾಲಹರಣ ಮಾಡುತ್ತಿದೆ. ಅಲ್ಲದೆ ಡಾ| ಸುಭಾಷ್‌ಚಂದ್ರ ಫೌಂಡೇಶನ್ ಸಂಸ್ಥೆಯು ಅಗ್ರಿಗೋಲ್ಡ್ ಸಮೂಹ ಸಂಸ್ಥೆಗಳಿಂದ ಅವರ ಆಸ್ತಿಪಾಸ್ತಿ, ಬಾಕಿ ಕೊಡಬೇಕಾದ ಏಜೆಂಟರ ಕಮಿಷನ್ ಮುಂತಾದ ವಿವರಗಳನ್ನು ಕೊಡಲು ಕೇಳಿದೆ. ಆದರೆ ಅದಕ್ಕೂ ಕಂಪೆನಿಯಿಂದ ಪ್ರತಿಕ್ರಿಯೆ ಇಲ್ಲ ಎಂದು ಸಂಘವು ಆರೋಪಿಸಿದೆ. ಶೀಘ್ರ ಗ್ರಾಹಕರ ಹಣ ಶೀಘ್ರ ಹಿಂದಿರುಗಿಸಲು ಸರಕಾರಗಳು ಸೂಚಿಸಬೇಕು. ಅಗ್ರಿಗೋಲ್ಡ್‌ನ ಎಲ್ಲ ನಿರ್ದೇಶಕರನ್ನು ಬಂಧಿಸಿ ಸೂಕ್ತ ತನಿಖೆಗೊಳಪಡಿಸಬೇಕು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸಂಘವು ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.