ಥೈಲ್ಯಾಂಡ್ ನಗರವನ್ನು  ಬೆಸೆದ ಹಳ್ಳಿಯ ಕಾಳುಮೆಣಸಿನ ಬಳ್ಳಿ..!


Team Udayavani, Jul 28, 2018, 11:11 AM IST

28-july-5.jpg

ಸುಳ್ಯ : ಮೂವತ್ತೈದು ಕಿ.ಮೀ. ದೂರದ ನಗರದಿಂದ ಅಧ್ಯಯನ ಪ್ರವಾಸ ನೆಪದಲ್ಲಿ ಹಳ್ಳಿಯೊಳಗೆ ಕಾಲಿಟ್ಟ ವಿದ್ಯಾರ್ಥಿಗಳು ನೆಲದೊಳಗೆ ಬೆವರು ಹರಿಸುವ ಕೃಷಿ ಕಲಾವಿದನ ಕುಂಚದಲ್ಲಿ ಮೂಡಿದ ಹಸಿರು ರಾಶಿಯ ಹೊದಿಕೆ ಕಂಡು ಬೆಕ್ಕಸ ಬೆರಗಾದರು..!
ನಗರಮುಖಿಯಿಂದ ಗ್ರಾಮಮುಖಿಯತ್ತ ಹೊರಳುವ ಅರ್ಥಪೂರ್ಣ ಮುಖಾಮುಖಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕುರಿಯಾಜೆ ತಿರುಮಲೇಶ್ವರ ಭಟ್‌ ಅವರ ದೇಸಿ ಸೊಗಡಿನ ಹಚ್ಚ ಹಸಿರಿನ ನಂದನವನದೊಳಗೆ ಶುಕ್ರವಾರ ಏರ್ಪಟ್ಟಿತ್ತು. 

60ಕ್ಕೂ ಅಧಿಕ ವಿದ್ಯಾರ್ಥಿಗಳು
ಪುತ್ತೂರಿನ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಮೂರು ದಿನಗಳ ಮಾಧ್ಯಮ ಬರವಣಿಗೆ ಕಜ್ಯ ಕೊಟ್ಯದಲ್ಲಿ ಅಧ್ಯಯನ ಪ್ರವಾಸದ ನಿಮಿತ್ತ ವಿದ್ಯಾರ್ಥಿಗಳು ಕೃಷಿ ತೋಟಕ್ಕೆ ತೆರಳಿ ಸಾಧಕನ ಯಶೋಗಾಥೆ ಕಣ್ಣಾರೆ ಕಂಡು ಸಂಭ್ರಮಿಸಿದರು. ಸುಳ್ಯ- ಪುತ್ತೂರಿನ ಪದವಿ ಕಾಲೇಜಿನ 60ಕ್ಕೂ ಅಧಿಕ ವಿದ್ಯಾರ್ಥಿಗಳು 2 ಗಂಟೆ ಕಾಲ ನಂದನವನದೊಳಗೆ ಸುತ್ತಾಡಿದರು. ನಾಲ್ಕು ಗೋಡೆಯೊಳಗೆ ಕಾಲ ಕಳೆಯುವ ವಿದ್ಯಾರ್ಥಿಗಳು ಹಳ್ಳಿ ಮೂಲೆಯ ಕೃಷಿ ಕುಟುಂಬದ ಯಶಸ್ಸಿನ ಕಥೆಗೆ ಕಿವಿಗೊಟ್ಟು, ಹಲವು ಮಾಹಿತಿಗಳನ್ನು ಪಡೆದುಕೊಂಡರು.

ಗಮನ ಸೆಳೆದ ನಂದನವನ..!
ನಂದನವನದ ಮನೆಯ ಮುಖ್ಯ ಪ್ರವೇಶ ದ್ವಾರದಿಂದ ತೊಡಗಿ ಏಳು ಎಕರೆಯಲ್ಲಿ ಇವರ ಶ್ರಮದ ಹೆಜ್ಜೆ ಗುರುತುಗಳಿವೆ. 18 ವರ್ಷಗಳಿಗಿಂತ ಮಿಕ್ಕಿ ಕೃಷಿ ಕ್ಷೇತ್ರದಲ್ಲಿ ಹಲವು ಪ್ರಯೋಗಗೈದು ಸೈ ಎನಿಸಿಕೊಂಡವರು ಕುರಿಯಾಜೆ ತಿರಮಲೇಶ್ವರ ಭಟ್‌. 100ಕ್ಕೂ ಅಧಿಕ ಬಗೆಯ ದೇಸಿ-ವಿದೇಶಿ ಹಣ್ಣಿನ ಗಿಡ, ಬಗೆ ಬಗೆಯ ಕಳ್ಳಿ ಜಾತಿಯ ಗಿಡಗಳು, ಮನೆ ಅಂಗಲದಲ್ಲಿ ಗಮನ ಸೆಳೆಯುವ ಉದ್ಯಾನವನ, ಒಪ್ಪ – ಹೂರಣವಾಗಿ ಜೋಡಿಸಿಟ್ಟ ಬಣ್ಣ-ಬಣ್ಣದ ಸ್ಟೋನ್‌ಗಳು, ಧಾರವಾಡ ಎಮ್ಮೆ, ಗಿರ್‌ ಜಾತಿಯ ದನ, ನೀರಿನ ಮರುಪೂರಣ.. ಹೀಗೆ ಇದು ಒಂದೆರಡಲ್ಲ. ಮೊಗೆದಷ್ಟು ಮುಗಿಯದ ದೇಶ-ವಿದೇಶದಲ್ಲಿ ಕಾಣ ಸಿಗುವ ತಳಿಗಳು ಏಳು ಎಕರೆ ಭೂಮಿಯಲ್ಲಿ ಸೊಂಪಾಗಿ ಪಸರಿಸಿವೆ. ರಬ್ಬರ್‌ ಹೊರತುಪಡಿಸಿ ಮಿಕ್ಕ ಕೃಷಿಗೆ ಸಾವಯವ ಗೊಬ್ಬರ ಹಾಕುತ್ತಾರೆ. ಹಾಗಾಗಿ ಇಲ್ಲಿ ರೋಗ ಬಾಧೆ ಕಾಣಿಸಿಕೊಳ್ಳುವುದೇ ಅಪರೂಪ. 

ಥೈಲ್ಯಾಂಡ್ ಬೆಸೆದ ಬಳ್ಳಿ..!
ತಿರುಮಲೇಶ್ವರ ಭಟ್‌ ಅವರ ತೋಟದೊಳಗೆ ಬೆಳೆದ ಕಾಳುಮೆಣಸಿನ ಬಳ್ಳಿ ಥಾçಲ್ಯಾಂಡ್‌ಗೆ ರಫ್ತಾಗಿತ್ತು. ಅಲ್ಲಿಂದ ಬೇಡಿಕೆ ಬಂದ ಕಾರಣ ಮಡಿಕೇರಿ ಏಜೆನ್ಸಿ ಮೂಲಕ ತಿರುಮಲೇಶ್ವರ ಭಟ್‌ ಅವರು ಬಳ್ಳಿಯನ್ನು ವಿದೇಶಕ್ಕೆ ಕಳುಹಿಸಿದ್ದರು ಎಂದು ನೆನೆಪಿಸಿದರು ಅಧ್ಯಯನ ಪ್ರವಾಸದ ಸಂಯೋಜಕ ನರೇಂದ್ರ ರೈ ದೇರ್ಲ ಅವ ರು. ಈ ಮೂಲಕ ಹಳ್ಳಿಯಿಂದ ಬಳ್ಳಿ ಮೂಲಕ ಥೈಲ್ಯಾಂಡ್ ಬೆಸೆದ ಕೀರ್ತಿ ಕುರಿಯಾಜೆಯ ಭಟ್‌ ಅವರದ್ದು. ಇಂತಹ ಹತ್ತಾರು ಅಪರೂಪದ ಸಾಧನೆಗಳು ಮೌನ ಸಾಧಕನೊಳಗಿವೆ. ಸ್ವತಃ ದುಡಿಮೆ, ಪತ್ನಿಯ ಸಹಕಾರ ಎಲ್ಲವನ್ನು ವಿವರಿಸಿದರು. ಸಂವಾದದ ಮೂಲಕವೂ ನೆಲದ ಒಡನಾಟ ಬಿಚ್ಚಿಟ್ಟರು. ಇವರ ಸಾಧನೆಗೆ ರಾಜ್ಯ ಪಂಡಿತ್‌ ಕೃಷಿ ಪ್ರಶಸ್ತಿ ಸಂದಿದೆ.

ಇಡೀ ನಂದನವನ ನಮ್ಮೆಲ್ಲರ ಪಾಲಿಗೆ ಹೊಸ ಪ್ರಪಂಚವನ್ನು ತೋರಿಸಿದಷ್ಟು ಖುಷಿ ಕೊಟ್ಟಿದೆ. ವಿದೇಶದ ಹಣ್ಣಿನ ಗಿಡಗಳು ಇಲ್ಲಿ ಹೂ ಬಿಟ್ಟಿವೆ. ಪುಸ್ತಕದಲ್ಲಿ ಕಂಡಿದ್ದ ಕೆಲವು ಗಿಡಗಳು, ಹಣ್ಣುಗಳು ತೋಟ ದೊಳಗೆ ಕಂಡೆವು. ಅಧ್ಯಯನ ಪ್ರವಾಸ ಅರ್ಥಪೂರ್ಣವಾಗಿದೆ ಎಂದು ಅಧ್ಯಯನ ಪ್ರವಾಸಗೈದ ವಿದ್ಯಾರ್ಥಿಗಳು ಹೇಳಿದ್ದಾರೆ.

ಕೃಷಿ ಮೇಲೆ ಪ್ರೀತಿ
ಕೃಷಿಯಲ್ಲಿ ಶ್ರಮದ ಜತೆಗೆ ಸುಖ ಇದೆ. ನಗರದೊಳಗೆ ನುಸುಳಿದ ಅನೇಕರು ಮರಳಿ ಹಳ್ಳಿಯತ್ತ ಮುಖ ಮಾಡಿದ್ದು ಇದೇ ಸುಖ, ನೆಮ್ಮದಿಗೋಸ್ಕರ. ನಂದನವನ ನನ್ನ ಆಸಕ್ತಿ, ಸಹಜ ಕೃಷಿ ಪ್ರೀತಿಯ ಫಲ. 600 ರಬ್ಬರ್‌ ಗಿಡ ತೆಗೆದು ಅಲ್ಲೆಲ್ಲ ಹಣ್ಣಿನ ಗಿಡ ನೆಡುವ ಯೋಚನೆ ನನ್ನೊಳಗಿದೆ.
– ತಿರುಮಲೇಶ್ವರ ಭಟ್‌ ಕುರಿಯಾಜೆ ನಂದನವನ

ಸ್ಫೂರ್ತಿಯಾಗಲಿ
ನಂದನವನದೊಳಗೆ ಹೊಕ್ಕಾಗ ನಿಜವಾದ ಹಸಿರು ಲೋಕದ ದರ್ಶನವಾಗಿದೆ. ವಿದ್ಯಾರ್ಥಿಗಳ ಪಾಲಿಗೆ ಇದು ಒಂದು ದಿನದ ಭೇಟಿ ಆಗಬಾರದು. ನಿತ್ಯವೂ ಕಣ್ಣು, ಕಿವಿ ತೆರೆದು, ನೆಲದೊಳಗಿನ ಬಾಂಧವ್ಯದ ಕಡೆ ಮುಖ ಮಾಡಬೇಕು. ಅಧ್ಯಯನ ಪ್ರವಾಸ ಅದಕ್ಕೊಂದು ಸ್ಫೂರ್ತಿಯಾಗಲಿ.
– ಝೇವಿಯರ್‌ ಡಿ’ಸೋಜಾ
ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು

ವಿಶೇಷ ವರದಿ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.