ಆಗುಂಬೆ ಘಾಟಿ ದುರಸ್ತಿ: ಆಮೆಗತಿ ಕಾಮಗಾರಿ
ಬಂದ್ ಆಗಿ 24 ದಿನ,ಕುಸಿದ ಸ್ಥಳದಲ್ಲಿ ಆರಂಭವಾಗಿಲ್ಲ ಕಾಮಗಾರಿ
Team Udayavani, Apr 25, 2019, 6:10 AM IST
ಹೆಬ್ರಿ: ತಿಂಗಳ ಅವಧಿಯಲ್ಲಿ ಮುಗಿಯಬೇಕಿದ್ದ ಆಗುಂಬೆ ಘಾಟಿ ರಸ್ತೆಯ ದುರಸ್ತಿ ಕಾಮಗಾರಿ 24 ದಿನಗಳ ಬಳಿಕವೂ ಆಮೆಗತಿಯಿಂದ ಸಾಗುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕುಸಿತ ಸಂಭವಿಸಿರುವಲ್ಲಿ ಇನ್ನೂ ಕಾಮ ಗಾರಿಯೇ ಆರಂಭಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಆಗುಂಬೆ ಘಾಟಿ ರಸ್ತೆಯ ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯ 14ನೇ ತಿರುವು ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯ 7ನೇ ತಿರುವಿನಲ್ಲಿ ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿದಿತ್ತು. ಸ್ಥಳದಲ್ಲಿ ಮರಳು ಚೀಲಗಳನ್ನು ಪೇರಿಸಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. 10 ತಿಂಗಳ ಬಳಿಕ ಕೊನೆಗೂ ದುರಸ್ತಿ ಕಾಮಗಾರಿಗೆ ಅನುಮತಿ ಲಭಿಸಿದೆ. ಆದರೆ ಅಪಾಯಕಾರಿ ಸ್ಥಳದಲ್ಲಿ ದುರಸ್ತಿ ನಡೆಸುವ ಬದಲು ಅತೀ ಅಗತ್ಯವಲ್ಲದ ಆನೆಕಲ್ಲಿನ ಬಳಿ ಕಾಮಗಾರಿ ನಡೆಯುತ್ತಿದೆ. 14ನೇ ತಿರುವಿನಲ್ಲಿ ದುರಸ್ತಿಯ ಫಲಕವನ್ನು ನೆಟ್ಟು ಹೆದ್ದಾರಿ ಇಲಾಖೆ ಕೈತೊಳೆದುಕೊಂಡಿದೆ.
ಮೂರು ತಿಂಗಳು ಘಾಟಿ ಬಂದ್ !
ಘಾಟಿ ಬಂದ್ ಆಗಿ 21 ದಿನ ಕಳೆದಿದ್ದು 14ನೇ ತಿರುವು ಹಾಗೂ 7ನೇ ತಿರುವಿನ ದುರಸ್ತಿ ಪೂರ್ಣ ಗೊಳ್ಳಲು ಇನ್ನೂ 2 ತಿಂಗಳು ಬೇಕು ಎನ್ನಲಾಗಿದೆ. ಆರಂಭದಲ್ಲಿ 1ತಿಂಗಳು ಮಾತ್ರ ಎಂದು ಹೇಳಿದ್ದ ಬಂದ್ ಮೂರು ತಿಂಗಳಾದರೂ ತೆರವಾಗುತ್ತದೋ ಇಲ್ಲವೋ ಎಂಬ ಸಂಶಯ ಕಾಡ ಲಾರಂಭಿಸಿದೆ. ಅಷ್ಟರಲ್ಲಿ ಮಳೆಗಾಲ ಆರಂಭವಾದರೆ ಕಾಮಗಾರಿ ಮುಂದು ವರಿಯುವುದು ಕಷ್ಟಸಾಧ್ಯ. ಹಾಗಾದರೆ ಮಳೆಗಾಲದಲ್ಲಿ ಘಾಟಿ ಸಂಪೂರ್ಣ ಕುಸಿದು ಮಲೆನಾಡು – ಕರಾವಳಿ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ.
ವಿಳಂಬವೇಕೆ?
ಆರಂಭದಲ್ಲಿ ಮಾ. 19ರಂದು ಕಾಮಗಾರಿ ಆರಂಭಿಸಲು ಸೂಚಿಸಲಾಗಿತ್ತು. ಆದರೆ ಆ ಪ್ರದೇಶದಲ್ಲಿ ಬೃಹತ್ ಗಾತ್ರದ ಮರ ಗಳಿದ್ದು ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದ ಕಾರಣ ಕಾಮಗಾರಿ ಮುಂದುವರಿಸಲು ಇಲಾಖೆ ಅಡ್ಡಿಪಡಿಸಿತ್ತು. ಬಳಿಕ ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ತೆರವು ಮಾಡದೇ ದುರಸ್ತಿ ಕಾರ್ಯ ಮುಂದುವರಿಸಬಹುದು ಎಂದು ಅನುಮತಿಸಿದ್ದರು. ಹಾಗೆ ಕಾಮ ಗಾರಿ ನಡೆಸಬೇಕಾದರೆ ತಜ್ಞರ ಮಾರ್ಗ ದರ್ಶನ ಅಗತ್ಯವಿದ್ದು, ಇದೇ ಕಾರಣಕ್ಕೆ ಕಾಮಗಾರಿ ಕುಂಟುತ್ತಿದೆ ಎನ್ನಲಾಗಿದೆ.
ತೊಂದರೆ ಯಾರಿಗೆ?
ಶಿವಮೊಗ್ಗ ಹಾಗೂ ಚಿಕ್ಕಮಗ ಳೂರಿನ ಹೆಚ್ಚಿನ ರೋಗಿಗಳು ಮಣಿಪಾಲ ಆಸ್ಪತ್ರೆಯನ್ನು ಅವಲಂಬಿಸಿ ರುವುದರಿಂದ ಆಗುಂಬೆ ಘಾಟಿಯಲ್ಲಿ 5 ನಿಮಿಷಕ್ಕೆ ಒಂದರಂತೆ ಆ್ಯಂಬುಲೆನ್ಸ್Õ ಗಳು ಸಂಚರಿ ಸುತ್ತಿದ್ದವು. ಆದರೆ ಈಗ ಘಾಟಿ ಬಂದ್‌ನಿಂದ ಸಮಸ್ಯೆಯಾಗಿದ್ದು ತುರ್ತು ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿದೆ.
ಉದ್ಯೋಗ, ಶಿಕ್ಷಣ ಮೊದಲಾದ ಕಾರಣಗಳಿಂದ ಉಭಯ ಜಿಲ್ಲೆಗಳ ಜನರು ಪ್ರತಿದಿನ ಅತ್ತಿಂದಿತ್ತ ಸಾಗಬೇಕಾಗಿದ್ದು, ಅವರು ಕೂಡ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ಜನಪ್ರತಿನಿಧಿಗಳು ಮೌನ
ಕರಾವಳಿ -ಮಲೆನಾಡನ್ನು ಸಂಪರ್ಕಿ ಸುವ ಪ್ರಮುಖ ಕೊಂಡಿಯಾದ ಆಗುಂಬೆ ಘಾಟಿ ದುರಸ್ತಿ ಇನ್ನೂ ಆರಂಭವಾಗದಿರುವುಕ್ಕೆ ಇಲಾಖೆಯ ನಿರ್ಲಕ್ಷ್ಯ ಕಾರಣ. ಅವರನ್ನು ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಈಗ ಎಲ್ಲಿದ್ದಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಐದನೇ ತಿರುವು ಕೂಡ ಕಿರಿದಾಗಿರುವುದರಿಂದ ಮೊದಲು ಆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೇವೆ. ಬಳಿಕ ಚೆನ್ನೈಯಿಂದ ತಜ್ಞರನ್ನು ಕರೆಸಿ 7 ಮತ್ತು 14ನೇ ತಿರುವಿನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದೇವೆ.
– ಮಂಜುನಾಥ ನಾಯಕ್, ಸಹಾಯಕ ಅಭಿಯಂತರು,
ರಾ.ಹೆ.ವಿಭಾಗ
ಯಾವುದೇ ಮರ ತೆರವು ಮಾಡದೇ ಕಾಮಗಾರಿ ನಡೆಸುವಂತೆ ಅನುಮತಿ ನೀಡಿದ್ದೇವೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದಿದ್ದಲ್ಲಿ ಮತ್ತೆ ಅನುಮತಿ ಪಡೆಯಬೇಕಾಗುತ್ತದೆ.
– ಪ್ರಭಾಕರನ್,
ಉಪ ಅರಣ್ಯ ಸಂರಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.