ಐಕಳ ಕಂಬಳ: ಬೋಳದಗುತ್ತು ಮತ್ತೆ ಚಾಂಪಿಯನ್
Team Udayavani, Jan 27, 2019, 10:57 AM IST
ಐಕಳ: ತುಳುನಾಡ ಜಾನಪದ ಕ್ರೀಡೆ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಜಗದೀಶ್ ಶೆಟ್ರ ಕೋಣಗಳು ಮತ್ತೆ ಪ್ರಥಮ ಸ್ಥಾನ ಪಡೆದಿವೆ. ಈ ವರ್ಷದ ಎಲ್ಲಾ ಹತ್ತು ಕಂಬಳದಲ್ಲಿ ಫೈನಲ್ ಪ್ರವೇಶ ಮಾಡಿದ ಬೋಳದಗುತ್ತು ಮತ್ತೆ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಐಕಳದಲ್ಲಿ ನಡೆದ ಕಾಂತಾಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಒಟ್ಟು 124 ಜೊತೆ ಕೋಣಗಳು ಭಾಗವಿಹಿಸಿದ್ದು ಇದು ಐಕಳ ಕಂಬಳ ಇತಿಹಾಸದ ದಾಖಲೆಯಾಗಿದೆ.
ತುಳುನಾಡ ವೀರ ಪುರುಷರಾದ ಕಾಂತಾಬಾರೆ ಬೂದಬಾರೆಯರ ಪುಣ್ಯದ ಮಣ್ಣಿನಲ್ಲಿ ನಡೆಯುವ ಈ ಕಂಬಳ ಶನಿವಾರ ಆರಂಭವಾಗಿ ರವಿವಾರ ಸಂಜೆಯ ವೇಳೆ ಸಂಪನ್ನವಾಗಿದೆ.
ಬೋಳದಗುತ್ತು ಬಿಗ್ ಸಾಧನೆ
ನೇಗಿಲು ಹಿರಿಯ ವಿಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರಿ ಸಾಧನೆ ಮಾಡುತ್ತಿರುವ ಬೋಳದಗುತ್ತು ಸಹೋದರರ ಕೋಣಗಳು ಈ ವರ್ಷ ನಡೆದ ಎಲ್ಲಾ ಹತ್ತು ಕಂಬಳದಲ್ಲಿ ಫೈನಲ್ ಪ್ರವೇಶ ಮಾಡಿದ ಅಪರೂಪದ ಸಾಧನೆ ಮಾಡಿವೆ. ಒಟ್ಟು 5 ಪ್ರಥಮ ಸ್ಥಾನ ಮತ್ತು 6 ದ್ವಿತೀಯ ಸ್ಥಾನ ಪಡೆದಿವೆ. ಕಳೆದ ವಾರ ನಡೆದಿದ್ದ ಪುತ್ತೂರು ಕಂಬಳದಲ್ಲಿ ಪ್ರಥಮ ಮತ್ತು ದ್ವಿತೀಯ ಎರಡೂ ಪ್ರಶಸ್ತಿ ಪಡೆದಿದ್ದ ಬೋಳದಗುತ್ತು ಈ ವರ್ಷದ ಸರಣಿ ಶ್ರೇಷ್ಠ ಪ್ರಶಸ್ತಿಯ ಮೇಲೆ ಕಣ್ಣು ಇಟ್ಟಿದೆ.
ಫಲಿತಾಂಶ
ಕನೆಹಲಗೆ: 3 ಜೊತೆ
ಅಡ್ಡಹಲಗೆ: 6 ಜೊತೆ
ಹಗ್ಗ ಹಿರಿಯ: 17 ಜೊತೆ
ನೇಗಿಲು ಹಿರಿಯ: 20 ಜೊತೆ
ಹಗ್ಗ ಕಿರಿಯ: 9 ಜೊತೆ
ನೇಗಿಲು ಕಿರಿಯ: 69 ಜೊತೆ
ಒಟ್ಟು ಕೋಣಗಳ ಸಂಖ್ಯೆ : 124 ಜೊತೆ
ಕನೆಹಲಗೆ:
ಬೇಲಾಡಿ ಬಾವ ಅಶೋಕ್ ಶೆಟ್ಟಿ
ಓಡಿಸಿದವರು: ನಾರಾವಿ ಯುವರಾಜ ಜೈನ್
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಗ್ಗ ಹಿರಿಯ:
ಪ್ರಥಮ: ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜ “B”
ಓಡಿಸಿದವರು: ಪಣಪಿಲು ಪ್ರವೀಣ್ ಕೋಟ್ಯಾನ್
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ “B”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ಹಗ್ಗ ಕಿರಿಯ:
ಪ್ರಥಮ: ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ
ಓಡಿಸಿದವರು: ಪಣಪಿಲು ಪ್ರವೀಣ್ ಕೋಟ್ಯಾನ್
ದ್ವಿತೀಯ: ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗ “A”
ಓಡಿಸಿದವರು: ನಕ್ರೆ ಮಂಜುನಾಥ ಭಂಡಾರಿ
ನೇಗಿಲು ಹಿರಿಯ:
ಪ್ರಥಮ: ಬೋಳದ ಗುತ್ತು ಜಗದೀಶ್ ಶೆಟ್ಟಿ “A”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.M.ಶೆಟ್ಟಿ
ದ್ವಿತೀಯ: ಬಿ.ಸಿ.ರೋಡ್ ಕೈಕುಂಜೆ ಕ್ಲಾಡಿ ಡಿಕ್ರೂಜ್
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ನೇಗಿಲು ಕಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಸಿದ್ದ ಶಕ್ತಿ ಪ್ರಸಾದ್ ಶೆಟ್ಟಿ “A”
ಓಡಿಸಿದವರು: ನತೀಶ್ ಬಾರಾಡಿ
ದ್ವಿತೀಯ: ಸಿದ್ದಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ “A”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.M.ಶೆಟ್ಟಿ
ಅಡ್ಡಹಲಗೆ:
ಪ್ರಥಮ: ಮೇರಮಜಲ್ ಮಿಷನ್ ಗೋಡ್ವಿನ್ ವೆಲ್ವಿನ್ ವಾಸ್
ಓಡಿಸಿದವರು: ಸ್ರಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
ಓಡಿಸಿದವರು: ನಾರಾವಿ ಯುವರಾಜ್ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.