ಕುವೈಟ್ ಆರೋಗ್ಯ ಸೇವೆ ಪ್ರದರ್ಶನದಲ್ಲಿ ಎಜೆ ಆಸ್ಪತ್ರೆ
Team Udayavani, Mar 23, 2019, 1:05 AM IST
ಮಂಗಳೂರು: ಕುವೈಟ್‌ನಲ್ಲಿ ಜರಗಿದ ಅಂತಾರಾಷ್ಟ್ರೀಯ ಕುವೈಟ್ ಹೆಲ್ತ್ ಕೇರ್ ಎಕ್ಸ್‌ಪೋ 2019ರಲ್ಲಿ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಅವರ ನೇತೃತ್ವದಲ್ಲಿ ಎ .ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಭಾಗವಹಿಸಿತು.
ಭಾರತೀಯ ವೈದ್ಯರ ವೇದಿಕೆ (ಐಡಿಎಫ್), ಕುವೈಟ್ ಮೆಡಿಕಲ್ ಅಸೋಸಿಯೇಶನ್ (ಕೆಎಂಎ), ಇಂಡಿಯನ್ ಬಿಸಿನೆಸ್ ಆ್ಯಂಡ್ ಪ್ರೊಷೇಶನಲ್ ಕೌನ್ಸಿಲ್ (ಐಬಿಪಿಸಿ) ಮತ್ತು ಕಾನೆ#ಡರೇ ಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಅವರ ಸಹಯೋಗದೊಂದಿಗೆ ಕುವೈಟ್‌ನ ರಾಡಿಸನ್ ಬ್ಲೂ ಹೊಟೇಲ್ ನಲ್ಲಿ ಮಾ. 17 ಮತ್ತು 18ರಂದು ಕುವೈಟ್ ಹೆಲ್ತ್ ಕೇರ್ ಎಕ್ಸ್‌ಪೋ 2019 ಅಯೋಜಿಸಲಾಗಿತ್ತು.
ಎಕ್ಸ್‌ಪೋವನ್ನು ಕುವೈಟ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ| ಅಹಮ್ಮದ್ ಅಲ್ ತುವೈನಿ, ಕುವೈಟ್ ಭಾರತೀಯ ರಾಯಭಾರಿ ಕೆ. ಜೀವ ಸಾಗರ ಹಾಗೂ ಇತರ ರಾಜತಾಂತ್ರಿಕರ ಉಪಸ್ಥಿತಿಯಲ್ಲಿ ಕುವೈಟ್ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ಡಾ| ಮುಸ್ತಫಾ ಮುಹಮ್ಮದ್ ಅಲ್ ರೆಧಾ ಅವರು ಉದ್ಘಾಟಿಸಿದರು.
ಈಗಾಗಲೇ ಎ. ಜೆ.ಯಲ್ಲಿ ಒಮನ್ ಹಾಗೂ ಯುಎಇ ರಾಷ್ಟ್ರದ ಪ್ರಜೆಗಳು ಚಿಕಿತ್ಸೆ ಪಡೆಯುತ್ತಿದ್ದು, ಕುವೈಟ್ ಪ್ರಜೆಗಳು ಮುಂದಿನ ದಿನಗಳಲ್ಲಿ ಎ.ಜೆ.ಗೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಅನೇಕ ರೋಗಿಗಳು ಮತ್ತು ಆರೋಗ್ಯ ಪ್ರವಾಸೋದ್ಯಮ ಕಂಪೆನಿಗಳು ಮಂಗಳೂರಿಗೆ ಆಗಮಿಸುವ ಆಸಕ್ತಿ ತೋರಿವೆ. ಮಂಗಳೂರಿನ ಯಶಸ್ವಿ ಉದ್ಯಮಿ ಡಾ| ಎ. ಜೆ. ಶೆಟ್ಟಿಯವರಿಂದ 2001ರಲ್ಲಿ ಆರಂಭಗೊಂಡ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವಿಶ್ವದರ್ಜೆಯ ಆರೋಗ್ಯ ಸೇವೆ ನೀಡುತ್ತ ಬಂದಿದೆ. ಸಮಗ್ರ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ನೀಡುವ ಕರಾವಳಿಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.