“ಅಜಿಲಮೊಗರು-ಕಡೇಶಿವಾಲಯ ಸಂಪರ್ಕ ಸೇತುವೆ ಶೀಘ್ರ ಆರಂಭ’


Team Udayavani, Feb 25, 2017, 11:23 AM IST

2402pkt2(revised).jpg

ಪುಂಜಾಲಕಟ್ಟೆ : ಬಹು ಬೇಡಿಕೆಯ, ಮಹತ್ವಾಕಾಂಕ್ಷೆಯ ಅಜಿಲ ಮೊಗರು- ಕಡೇಶಿವಾಲಯ ಸಂಪರ್ಕ ಸೇತುವೆ 31 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ  ಹೇಳಿದರು.

ಅವರು ಬಂಟ್ವಾಳ ತಾಲೂಕಿನ  ಮಣಿನಾಲ್ಕೂರು ಗ್ರಾಮದ ಹಟದಡ್ಕದಲ್ಲಿ 1 ಕೋ.ರೂ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.  

ಈ ಸೇತುವೆ ನಿರ್ಮಾಣದಿಂದ ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಸೀದಿ ಮತ್ತು ಕಡೇಶಿವಾಲಯ ದೇವಸ್ಥಾನಗಳಿಗೆ ಸಂಪರ್ಕ ಸುಗಮವಾಗುತ್ತದೆ. ಜನತೆಗೆ ಸುತ್ತು ಬಳಸಿ ಸಾಗುವ ಅನನುಕೂಲತೆ ದೂರವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು 36 ಕೋ.ರೂ. ವೆಚ್ಚದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಂತಿಮ ಹಂತದಲ್ಲಿದೆ.  ಮಣಿನಾಲ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಈಗಾಗಲೇ ಅಗತ್ಯ ಅನುದಾನಗಳನ್ನು ಒದಗಿಸಿದ್ದು ಇದರೊಂದಿಗೆ ಅಜಿಲಮೊಗರು- ಬಜ-ಬಲಯೂರು ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಸಚಿವರು ಹಟದಡ್ಕ ಕಿರುಹೊಳೆಗೆ 20 ಲ.ರೂ. ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯನ್ನು ಉದ್ಘಾಟಿಸಿದರು.

ತಾಲೂಕು ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ಜಿಲ್ಲಾ ಪಂಚಾಯತ್‌  ಸದಸ್ಯರಾದ ಬಿ. ಪದ್ಮಶೇಖರ ಜೈನ್‌, ಚಂದ್ರಪ್ರಕಾಶ್‌ ಶೆಟ್ಟಿ  ತುಂಬೆ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಸಂಪತ್‌ ಕುಮಾರ್‌ ಶೆಟ್ಟಿ ಮುಂಡ್ರೇಲು, ಗ್ರಾ.ಪಂ. ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ, ಸದಸ್ಯರಾದ ಶಿವಪ್ಪ ಪೂಜಾರಿ ಹಟದಡ್ಕ, ಯಶೋದಾ, ಡೆನಿಸ್‌ ಮೊರಾಸ್‌, ಜಯಲಕ್ಷ್ಮಿ, ಪ್ರಮುಖರಾದ ನಾರಾಯಣ ರೈ, ಪದ್ಮಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಗ್ರಾ.ಪಂ. ಸದಸ್ಯ ಆದಂ ಕುಂಞಿ  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.