ಆಲಂಕಾರು: ನೇಜಿಗೆ ಎಲೆ ಮಡಚುವ ರೋಗ
Team Udayavani, Dec 12, 2022, 5:00 AM IST
ಆಲಂಕಾರು: ಕರಾವಳಿಯ ರೈತರ ಅಡಿಕೆ ಬೆಳೆ ಈಗಾಗಲೇ ಹಲವೆಡೆ ಎಲೆಚುಕ್ಕಿ ರೋಗ ಹಾಗೂ ಹಳದಿ ರೋಗಕ್ಕೆ ತುತ್ತಾಗಿ ನಾಶವಾಗುತ್ತಿದೆ. ಇದೀಗ ನೇಜಿಗೆ ಎಲೆ ಮಡಚುವ ರೋಗ ಕಂಡು ಬಂದಿದ್ದು, ಕೆಲವೊಂದು ರೈತರು ನಾಟಿ ಮಾಡಿದ ನೇಜಿ ಸಂಪೂರ್ಣವಾಗಿ ಕಳೆದುಕೊಂಡು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಕಡಬ ತಾಲೂಕಿನ ಅಲ್ಲಲ್ಲಿ ಈ ರೋಗ ಕಂಡು ಬಂದಿದ್ದು ರೈತರು ಅಪಾರ ಪ್ರಮಾಣದ ಗದ್ದೆ ಕೃಷಿಯನ್ನು ಕಳೆದುಕೊಂಡಿದ್ದಾರೆ.
ಆಲಂಕಾರು ಗ್ರಾಮದ ನೆಕ್ಕರೆ, ಪೆರಾಬೆ ಗ್ರಾಮದ ಮೂಲೆತ್ತ ಮಜಲು ಎಂಬಲ್ಲಿ ನಾಟಿ ಮಾಡಿದ ಸುಮಾರು 10 ಎಕ್ರೆ ಗದ್ದೆಯ ನೇಜಿ ಸಂಪೂರ್ಣ ರೋಗದಿಂದ ನಾಶವಾಗಿದೆ. ನಾಟಿ ಮಾಡಿದ 1 ತಿಂಗಳ ನೇಜಿ ಕೃಷಿಗೆ ಈ ರೋಗ ಹೆಚ್ಚು ಬಾಧಿಸಿದೆ.
ಮರು ಬಿತ್ತನೆಗೆ ಬೀಜದ ಅಭಾವ
ಮರು ಬಿತ್ತನೆಗೆ ರೈತರಿಗೆ ಬಿತ್ತನೆ ಬೀಜದ ಅಭಾವ ಕಾಡುತ್ತಿದೆ. ಹದ ಮಾಡಿದ ಗದ್ದೆಯನ್ನು ಖಾಲಿ ಬಿಡಲು ರೈತನ ಮನಸ್ಸು ಒಪ್ಪದ ಕಾರಣ ಬಿತ್ತನೆ ಬೀಜಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಬೀಜ ಸಂಪಾದಿಸಿಕೊಡುವುದಕ್ಕಾಗಿ ಯತ್ನಿಸುತ್ತಿದ್ದಾರೆ.
ಪೈರು ಕಳೆದುಕೊಂಡಿರುವ ರೈತರು ಮರು ನಾಟಿಗಾಗಿ ಸಿದ್ಧತೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ರೈತರಿಗೆ ನೀರಿನ ಅಭಾವ ಕಾಡಲಿದೆ. ರೈತನ ಯೋಜನೆಯಂತೆ ನಡೆದಿದ್ದರೆ ಡಿಸೆಂಬರ್ ತಿಂಗಳು ಪೈರು ತೆನೆ ಬಿಡುವ ಹಂತದವರೆಗೆ ಬೆಳೆಯುತ್ತಿತ್ತು ಮತ್ತು ಜನವರಿ ಅಂತ್ಯಕ್ಕೆ ಕಟಾವಿಗು ಬರುತ್ತಿತ್ತು. ಆದರೆ ಇದೀಗ ಡಿಸೆಂಬರ್ ತಿಂಗಳಲ್ಲಿ ನೇಜಿ ನಾಟಿ ಮಾಡುವ ಪರಿಸ್ಥಿತಿ ಬಂದಿರುವುದರಿಂದ ಜನವರಿ ತಿಂಗಳಲ್ಲಿ ರೈತರಿಗೆ ತಮ್ಮ ಗದ್ದೆಗಳಿಗೆ ನೀರಿನ ಅಭಾವ ಕಾಡಲಿದೆ. ನೀರಿನ ಸಮಸ್ಯೆ ಎದುರಾದರೆ ಇಲ್ಲಿಯು ರೈತ ನಾಟಿ ಮಾಡಿದ ನೇಜಿಯನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ.
ಮೋಡದ ವಾತಾವರಣದಿಂದ ಹುಳದ ಬಾಧೆ ಹೆಚ್ಚಳ
ಮೋಡ ಕವಿದ ವಾತಾವರಣ ಹಾಗೂ ಆಗಾಗ ಮಳೆ ಬರುವುದರಿಂದ ಈ ಹುಳದ ಬಾಧೆ ಹೆಚ್ಚಾಗುತ್ತಿದೆ. ಕೀಟನಾಶಕ ಸಿಂಪಡಣೆಯಿಂದ ಈ ರೋಗ ನಿಯಂತ್ರಿಸಬಹುದು. ಕ್ಲೋರೋ ಪೈರಿ ಪಾಸ್ ಕೀಟನಾಶಕವನ್ನು ಲೀಟರ್‌ಗೆ 2 ಎಂಎಲ್ ಅಥವಾ ಮೊನೋಪ್ರೊಟೋಪಾಸನ್ನು ಲೀಟರ್‌ಗೆ 1.5 ಎಂಎಲ್ ಅಥವಾ ಫಿರಿಡಾನ್ ಎಕ್ರೆಗೆ 3 ಕೆ.ಜಿ.ಯಷ್ಟು ಒಂದು ಬಾರಿ ಉಪಯೋಗಿಸಿದರೆ ಈ ಹುಳವನ್ನು ನಿಯಂತ್ರಿಸಬಹುದು. ಕೃಷಿ ಇಲಾಖೆಯಲ್ಲಿ ಈ ಎಲ್ಲ ಕೀಟ ನಾಶಕಗಳು ದೊರೆಯುತ್ತಿದ್ದು ಸರಕಾರದ ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುವುದು ಎಂದು ಕಡಬ ತಾ| ಸಹಾಯಕ ಕೃಷಿ ಅಧಿಕಾರಿ ಬರ್ಮಣ್ಣ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ
ಜೀವ ರಕ್ಷಕ ಕ್ರಿಟಿಕಲ್ ಕೇರ್ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ
Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.