ಮದ್ಯ ಸೇವನೆ ಫ್ಯಾಷನ್ ಆಗುತ್ತಿದೆ: ಪ್ರತಿಭಾ ಕುಳಾಯಿ
Team Udayavani, Jul 4, 2017, 3:50 AM IST
ಸುರತ್ಕಲ್: ಇಂದು ಮದ್ಯ ಸೇವನೆ ಫ್ಯಾಷನ್ ಆಗಿ ಬೆಳೆದು ಚಟವಾಗಿ ಅಂಟಿಕೊಳ್ಳುತ್ತಿದೆ. ಇದನ್ನು ತ್ಯಜಿಸಲು ಮತ್ತೆ ಅನುಭವಿಸುವ ಕಷ್ಟ ನಿಜಕ್ಕೂ ಶೋಚನೀಯ. ಇದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಿದರೆ ಉತ್ತಮ ಸಂಸಾರ ನಡೆಸಲು ಸಾಧ್ಯವಾಗುತ್ತದೆ ಎಂದು ಮನಪಾ ಸದಸ್ಯೆ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ತಾಲೂಕು, ಅಖೀಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಬೆಳ್ತಂಗಡಿ, ನಾಗಬ್ರಹ್ಮಸ್ಥಾನ ತೊತ್ತಾಡಿ, ಪ್ರಗತಿ ಬಂಧು ಸ್ವ ಸಹಾಯ ಸಂಘ ಒಕ್ಕೂಟ ಸುರತ್ಕಲ್ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ 1073ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ಸುಖ ಸಂಸಾರ ಹೇಗೆ ಎಂಬುದರ ಕುರಿತು ಶಿಬಿರಾರ್ಥಿಗಳ ಕುಟುಂಬಿಕರಿಗೆ ಮಾಹಿತಿ ನೀಡಿದರು.
ಸಂಯಮ ಅಗತ್ಯ
ಶಿಬಿರದಿಂದ ಹೊರ ಬಂದ ಬಳಿಕ ಮನೆಯವರು ಇವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಪ್ರೀತಿ, ಸಂಯಮದಿಂದ ಹಿಡಿದು ಅವರ ಜತೆ ಒಂದಿಷ್ಟು ಸಮಯ ಕಳೆಯುವುದು ಅವರ ಜತೆ ಬೆರೆತು ಅವರ ಬೇಕು ಬೇಡಗಳನ್ನು ಪೂರೈಸುವ ಮನಸ್ಸು ಮಾಡಿದರೆ ಶಾಶ್ವತವಾಗಿ ಮದ್ಯ ಸೇವನೆಯಿಂದ ಅವರನ್ನು ದೂರವಿಡಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.