![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 31, 2019, 5:38 AM IST
ದೇಶದ ಯುವ ಉದ್ಯಮಿ ಕೆಫೆ ಕಾಫಿ ಡೇ ನ ಸಂಸ್ಥಾಪಕ ಸಿದ್ಧಾರ್ಥ ಹೆಗ್ಡೆ ವಿ.ಜಿ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ನೇತ್ರಾವತಿ ನದಿ ಬಳಿಯಿಂದ ಕಾಣೆಯಾದ ಕಾರಣ ಏನಾದರೂ ಅವಘಡ ಘಟಿಸಿರಬಹುದೆಂದು ಸೋಮವಾರ ರಾತ್ರಿಯಿಂದಲೇ ನಿರಂತರವಾಗಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಆದರೆ ಇನ್ನೂ ಯಾವ ಸುಳಿವೂ ಸಿಕ್ಕಿಲ್ಲ. ಈ ಮಧ್ಯೆ ಸಿದ್ಧಾರ್ಥ ಸುರಕ್ಷಿತವಾಗಿ ಮರಳಿ ಬಂದಿಯಾರು ಎಂಬ ನಿರೀಕ್ಷೆಯೂ ಎಲ್ಲೆಲ್ಲೂ ಮನೆ ಮಾಡಿದೆ.
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಸೋಮವಾರ ರಾತ್ರಿಯಿಂದ ನಾಪತ್ತೆಯಾದ ಸಿದ್ಧಾರ್ಥ್ ಹೆಗ್ಡೆ ಪತ್ತೆಗಾಗಿ ಮಂಗಳವಾರ ಮುಂಜಾನೆಯಿಂದ ರಾತ್ರಿಯ ವರೆಗೆ ವಿವಿಧ ರೀತಿಯ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ದೊರೆಯಲಿಲ್ಲ.
ಮುಂಜಾನೆ 6 ಗಂಟೆಯಿಂದಲೇ ನದಿಯಲ್ಲಿ ಹುಡು ಕಾಟ ಆರಂಭಿಸಲಾಗಿತ್ತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿ ಶಾಮಕದಳ, ಕೋಸ್ಟ್‌ಗಾರ್ಡ್, ಕರಾವಳಿ ಪೊಲೀಸ್ ಪಡೆ, ಸ್ಥಳೀಯ ಮುಳುಗು ತಜ್ಞರು, ಹೋಮ್‌ಗಾರ್ಡ್ ಸೇರಿದಂತೆ 100ಕ್ಕೂ ಅಧಿಕ ಸಿಬಂದಿ ತೊಡಗಿಕೊಂಡಿ ದ್ದರು. ಜಪ್ಪು, ಅಳಿವೆ ಬಾಗಿಲು ವ್ಯಾಪ್ತಿಯಲ್ಲಿ ದಿನವಿಡೀ ಶೋಧಿಸಿದರೂ ಪ್ರಯೋಜನವಾಗಲಿಲ್ಲ.
ಶ್ವಾನದಳವನ್ನು ತರಿಸಿ ಶೋಧ ನಡೆಸಿದ್ದು, ಸೇತುವೆಯ ಅರ್ಧ ಭಾಗಕ್ಕೆ ಬಂದ ಅಲ್ಲೇ ನಿಂತಿದೆ. ಬಳಿಕ ಬಂಟ್ವಾಳ, ಬೆಂಗರೆ, ಕಾರವಾರಗಳಿಂದ ಬಂದ ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿದರು.
ಕೋಸ್ಟ್‌ಗಾರ್ಡ್-ಎನ್‌ಡಿಆರ್‌ಎಫ್
ಜಿಲ್ಲಾಡಳಿತ, ಕೋಸ್ಟ್‌ಗಾರ್ಡ್ – ಎನ್‌ಡಿಆರ್‌ಎಫ್ ತಂಡವನ್ನೂ ಕರೆಸಿತ್ತು. ಕೋಸ್ಟ್‌ಗಾರ್ಡ್, ನೌಕಾಪಡೆಯ ರಾಜ ದೂತ್ ಕಣ್ಗಾವಲು ಹಡಗು, ಎಸಿವಿ ಎಚ್-198 ಹೋವರ್ ಕ್ರಾಫ್ಟ್, ಮುಳುಗು ತಜ್ಞರ 3 ತಂಡಗಳನ್ನು ಬಳಸಲಾಯಿತು. ರೈಲ್ವೇ ಸೇತುವೆಯಿಂದ ತೊಡಗಿ ಸಮುದ್ರ ದವರೆಗೆ ಹೋವರ್‌ಕ್ರಾಫ್ಟ್ ಮೂಲಕ ಹುಡುಕಾಡ ಲಾಯಿತು. ಕೋಸ್ಟ್ ಗಾರ್ಡ್ “ಸಾವಿತ್ರಿಬಾಯಿ ಫುಲೆ’ ಹಡಗನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.
ಸೇತುವೆಯ ಸುತ್ತ ಕುತೂಹಲದ ಕಣ್ಣುಗಳು
ಜಪ್ಪು ಹಳೆ ಸೇತುವೆಯಲ್ಲಿ ಏಕಮುಖ ಸಂಚಾರ ಸ್ಥಗಿತಗೊಳಿಸಿ, ಹೊಸ ಸೇತುವೆಯಲ್ಲಿ ದ್ವಿಪಥ ವ್ಯವಸ್ಥೆ ಮಾಡಲಾಗಿತ್ತು. ವಾಹನ ಸಂಚಾರ ಸ್ವಲ್ಪ ಕಾಲ ಅಸ್ತವ್ಯಸ್ತವಾಗಿತ್ತು. ದಿನವಿಡೀ ಸಾವಿರಾರು ಜನರು ನೆರೆದು ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಶಾಸಕರಾದ ಯು.ಟಿ. ಖಾದರ್, ರಾಜುಗೌಡ, ಮಾಜಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಉಪವಿಭಾಗಾ ಧಿಕಾರಿ ರವಿಚಂದ್ರ ನಾಯಕ್, ತಹಶೀಲ್ದಾರ್ ಗುರು ಪ್ರಸಾದ್, ಕರ್ನಾಟಕ ಕಾಫಿ ಬೆಳಗಾರರ ಫೆಡರೇಷನ್ ಅಧ್ಯಕ್ಷ ಜಯರಾಮ್, ಮೂಡಿಗೆರೆ ಪ್ಲಾಂಟರ್ಸ್ ಅಸೋಸಿ ಯೇಶನ್‌ನ ಬಿ.ಆರ್. ಬಾಲಕೃಷ್ಣ, ಕೆ.ಡಿ. ಮನೋಹರ್, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.
ಕೊನೆಯ ಕರೆಯಲ್ಲಿ ಹೇಳಿದ್ದು “ಸಾರಿ’!
ಸಿದ್ಧಾರ್ಥ್ ಮೊಬೈಲ್‌ನಲ್ಲಿ ಕೊನೆಯದಾಗಿ ಯಾರ ಜತೆ ಮಾತನಾಡಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಸೋಮವಾರ ಸಂಜೆ ಅವರು ಕಾಫಿ ಡೇ ಕಂಪೆನಿಯ ಚೀಫ್ ಫೈನಾನ್ಸ್ ಆಫೀಸರ್ ಜಾವೇದ್ ಜತೆಗೆ ಮಾತನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಯಾಣದುದ್ದಕ್ಕೂ ಹಲವು ಬಾರಿ “ಸಾರಿ’ ಹೇಳುತ್ತಿದ್ದರು; ಹಲವರಿಗೆ ಇದೇರೀತಿ ಕರೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
You seem to have an Ad Blocker on.
To continue reading, please turn it off or whitelist Udayavani.