ಪ್ರವಾಹ ಪೀಡಿತರಿಗೆ ಕೇಂದ್ರದಿಂದ ಸಕಲ ನೆರವು: ಡಿವಿ
Team Udayavani, Aug 20, 2018, 12:15 PM IST
ಸುಬ್ರಹ್ಮಣ್ಯ : ಕೊಡಗು ಮತ್ತು ದ.ಕ. ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಜೀವ, ಆಸ್ತಿಪಾಸ್ತಿ, ಕೃಷಿ ಭೂಮಿ ಹಾಗೂ ರಸ್ತೆಗಳಿಗೆ ಭಾರಿ ಪ್ರಮಾಣದ ಹಾನಿಯುಂಟಾಗಿದೆ. ಉಭಯ ಜಿಲ್ಲೆ, ವಿಶೇಷವಾಗಿ ಕೊಡಗನ್ನು ಸುಸ್ಥಿತಿಗೆ ತರಲು ಕೇಂದ್ರ ಸರಕಾರ ಸಕಲ ನೆರವು ನೀಡಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಭಾರಿ ಮಳೆಯಿಂದ ಸಂತ್ರಸ್ತಗೊಂಡ ಹಾಗೂ ಭೂಕುಸಿತಕ್ಕೆ ಒಳಗಾದ ಪ್ರದೇಶಗಳಿಗೆ ರವಿವಾರ ಭೇಟಿ ನೀಡಿದ ಬಳಿಕ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತನಾಡಿದರು.
ಕೊಡಗು ಮತ್ತು ದ.ಕ. ಜಿಲ್ಲೆಯಲ್ಲಿ ಮಳೆ ಹಾಗೂ ಭೂಕುಸಿತದಿಂದ ಭಾರೀ ನಷ್ಟ ಸಂಭವಿಸಿದೆ. ಅನೇಕ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದು, ಪ್ರಥಮ ಹಂತದಲ್ಲಿ ಅವರ ರಕ್ಷಣೆಗೆ ಆದ್ಯತೆ ನೀಡುತ್ತೇವೆ. ಕೇಂದ್ರ ಸರಕಾರ ವಿವಿಧ ವಿಭಾಗಗಳ ಸೇನಾ ಪಡೆಯನ್ನು ಕೊಡಗಿಗೆ ಕಳಿಸಿಕೊಟ್ಟಿದೆ. ರಕ್ಷಣ ಕಾರ್ಯಕ್ಕೆಂದು ಐದು ಹೆಲಿಕಾಪ್ಟರ್ ಕಳುಹಿಸಿಕೊಟ್ಟಿದ್ದರೂ ಹವಾಮಾನ ವೈಪರೀತ್ಯದಿಂದ ಅವುಗಳ ಸಮರ್ಪಕ ಬಳಕೆ ಸಾಧ್ಯವಾಗಿಲ್ಲ. ಉಭಯ ಜಿಲ್ಲೆಗಳ ನೆರೆ ಸಂತ್ರಸ್ತರಿಗೆ ಪರಿಹಾರ ಜತೆಗೆ ಮರಳಿ ಸುಸ್ಥಿತಿಗೆ ತರಲು ರಾಜ್ಯದ ಕೋರಿಕೆಯಂತೆ ವಿಶೇಷ ಆರ್ಥಿಕ ನೆರವು ನೀಡಲು ಕೇಂದ್ರ ಸರಕಾರ ಸಿದ್ಧವಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.