ಅಖಂಡ ಭಾರತ ಸಂಕಲ್ಪ: ಕಲ್ಲಡ್ಕ ಪ್ರಭಾಕರ ಭಟ್
Team Udayavani, Sep 12, 2019, 5:55 AM IST
ಮಂಗಳೂರು: ಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ರದ್ದು ಮಾಡುವ ಮುಖೇನ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸಾಬೀತುಪಡಿಸಲಾಗಿದೆ. ಈ ಮೂಲಕ ಅಖಂಡ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ಕೇಂದ್ರ ಸರಕಾರ ನೀಡಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಮಂಗಳೂರು ರಾಮಕೃಷ್ಣ ಮಿಷನ್‌ವತಿಯಿಂದ ಬುಧವಾರ ನಗರದ ರಾಮೃಕೃಷ್ಣ ಮಠದಲ್ಲಿ ಆಯೋಜಿಸ ಲಾದ ಸ್ವಚ್ಛ ಭಾರತ- ಶ್ರೇಷ್ಠ ಭಾರತ ವಿಷಯದ ಕುರಿತ ವಿಚಾರಗೋಷ್ಠಿ ಹಾಗೂ ಸ್ವಾಮಿ ವಿವೇಕಾನಂದರ ಶಿಕಾಗೋ ಉಪನ್ಯಾಸದ 125ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 125 ಉಪನ್ಯಾಸ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಸುಭದ್ರ ರಾಷ್ಟ್ರ ಕಟ್ಟಲು ಪಣತೊಡಬೇಕು. ಹಳೇ ಚಿಂತನೆಯ ಮೂಲಕ ಹೊಸ ಕಲ್ಪನೆಯನ್ನು ಜಗತ್ತಿಗೆ ನೀಡುವ ಪ್ರಯತ್ನ ಸಾಗಬೇಕು ಎಂದರು.
ಜಾತ್ಯತೀತ ಎಂಬ ಶಬ್ದವನ್ನು ವಿಶೇಷವಾಗಿ ಉಲ್ಲೇಖೀಸಿ ವಿವರಿಸುವ ಅಗತ್ಯ ನಮಗಿಲ್ಲ. ಯಾಕೆಂದರೆ ಅದೆಷ್ಟೋ ದೇಶಗಳಿಂದ ಬಂದವರಿಗೆ ಆಶ್ರಯ ನೀಡಿದ ಹಿರಿಮೆ ಭಾರತಕ್ಕಿದೆ. ಸ್ವಾಮಿ ವಿವೇಕಾನಂದರು ಎಲ್ಲ ಹಂತದಲ್ಲಿಯೂ ಪ್ರೇರಣಾದಾಯಿ ಗಳು. ಅವರು ಮಾಡಿದ ಒಂದು ಭಾಷಣವನ್ನು 125 ವರ್ಷಗಳ ನಂತರವೂ ನೆನಪಿಸಿಕೊಂಡು ಆ ದಿನವನ್ನು ಈಗಲೂ ಆಚರಿಸುತ್ತೇವೆ ಅಂದರೆ ಅದಕ್ಕಿಂತ ದೊಡ್ಡ ವಿಶೇಷ ಇನ್ನೊಂದಿಲ್ಲ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಮಕೃಷ್ಣ ಮಿಷನ್ ವತಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು.ಸಂಪನ್ಮೂಲ ವ್ಯಕ್ತಿ ಪರಿಸರ ಹೋರಾಟ ಗಾರ ದಿನೇಶ್ ಹೊಳ್ಳ, ಜಾದೂಗಾರ ಕುದ್ರೋಳಿ ಗಣೇಶ್, ಉಪನ್ಯಾಸಕಾರ ಶ್ರೀಕೃಷ್ಣ ಉಪಾಧ್ಯಾಯ ಪುತ್ತೂರು ಉಪಸ್ಥಿತರಿದ್ದರು. ಮಂಗಳೂರು ರಾಮ ಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಪ್ರಸ್ತಾವನೆಗೈದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸಂತೋಷ್ ನಿರೂಪಿಸಿದರು.
ಸ್ವಚ್ಛತೆ ಸರಕಾರಿ ಯೋಜನೆ ಅನ್ನಬೇಡಿ
ಹೈದರಾಬಾದ್ ರಾಮಕೃಷ್ಣ ಮಠದ ಸ್ವಾಮಿ ಬುದ್ಧಿದಾನಂದಜಿ ಮಾತನಾಡಿ, ಬಾಹ್ಯ ಪರಿಸರನ್ನು ಸ್ವಚ್ಛವಾಗಿರಿಸದೆ ಅಂತರಂಗ ನಿರ್ಮಲವಾಗಿರಿಸಲು ಸಾಧ್ಯವಿಲ್ಲ. ಶ್ರೀಮದ್ಭಾಗವತದಲ್ಲಿಯೇ ಸ್ವಚ್ಛತೆಕುರಿತು ಉಲ್ಲೇಖವಿದ್ದು,ಸ್ವಚ್ಛತಾ ಅಭಿಯಾನ ಸರಕಾರಿ ಯೋಜನೆ ಎಂಬುದನ್ನು ಯಾರೂ ಪರಿಗಣಿಸ ಬಾರದು. ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ ಎಂಬ ಅರಿವು ಜಾಗೃತವಾಗಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!
Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
Ullala: ಆಯತಪ್ಪಿ ಪಾಳು ಬಾವಿಗೆ ಬಿದ್ದು ಸ್ಥಳೀಯ ಮೀನುಗಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.