Mangaluru: ಕೆಥೋಲಿಕರಿಂದ ಆತ್ಮಗಳ ದಿನಾಚರಣೆ: ಮರಣ ಹೊಂದಿದವರ ವಿಶೇಷ ಸ್ಮರಣೆ
Team Udayavani, Nov 4, 2024, 12:31 AM IST
ಮಂಗಳೂರು: ಮರಣ ಹೊಂದಿನ ತಮ್ಮ ಪ್ರೀತಿಪಾತ್ರರನ್ನು ಕೆಥೋಲಿಕರು ಶನಿವಾರ ವಿಶೇಷವಾಗಿ ಸ್ಮರಿಸಿದರು. ಮೃತಪಟ್ಟ ಭಕ್ತ ವಿಶ್ವಾಸಿಗಳ ಸ್ಮರಣೆ ದಿನ(ಆಲ್ ಸೋಲ್ಸ್ ಡೇ)ವನ್ನು ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ನೆರವೇರಿಸಿ ಅವರಿಗಾಗಿ ಪ್ರಾರ್ಥಿಸಲಾಯಿತು. ದ.ಕ. ಹಾಗೂ ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಆಚರಣೆ ಕಂಡುಬಂತು.
ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಎಲ್ಲ ಕ್ರೈಸ್ತರು ಮೃತರಾದ ಕುಟುಂಬಸ್ಥರನ್ನು ಸ್ಮರಿಸಿದರು. ಮಂಗಳೂರು, ಪುತ್ತೂರು, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಕಿನ್ನಿಗೋಳಿ, ಕಾಸರ ಗೋಡು, ಮುಡಿಪು ವಲಯಗಳ ಚರ್ಚ್‌ಗಳಲ್ಲಿ ಆಚರಣೆ ನಡೆಯಿತು. ಗ್ರಾಮಾಂತರ ಭಾಗದಲ್ಲಿ ಬೆಳಗ್ಗೆ ಹಾಗೂ ನಗರ ಪ್ರದೇಶಗಳಲ್ಲಿ ಸಂಜೆ ಬಲಿಪೂಜೆ ಜರಗಿತು.
ಪವಿತ್ರ ಸಭೆಯಿಂದ ಗುರುತಿಸಲ್ಪಟ್ಟ ಹಾಗೂ ಗುರುತಿಸಲ್ಪಡದ ದೇವರ ಸಾಮ್ರಾಜ್ಯದಲ್ಲಿರುವ ಎಲ್ಲ ಸಂತ ಭಕ್ತರನ್ನು ಕೆಥೋಲಿಕ್ ಧರ್ಮ ಪ್ರಾಂತ್ಯ ನ. 1ರಂದು ಸ್ಮರಿಸುತ್ತದೆ. ದೇವರ ಮಾರ್ಗದಲ್ಲಿ ನಡೆದು ಸ್ವರ್ಗಸ್ಥರಾಗಿ ಪ್ರತ್ಯೇಕ ದಿನದಂದು ಸ್ಮರಿಸದೇ ಇರುವ ಸಂತ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರನ್ನು ಜತೆಯಾಗಿ ಸ್ಮರಿಸುವ ದಿನವೇ ಸಮಸ್ತ ಸಂತಭಕ್ತರ ದಿನವಾಗಿದೆ. ಅಂದು ಸಂತ ಭಕ್ತರ ಆದರ್ಶಗಳನ್ನು ಪಾಲಿಸಿ ಜೀವನ ದಲ್ಲಿ ಅಳವಡಿಸುವಂತೆ ಬಲಿಪೂಜೆಯ ವೇಳೆ ಪ್ರವಚನ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.