‘ಪರಿಸರದ ಉಳಿವಿಗೆ ಸಮಾಜದ ಸರ್ವರೂ ಕೈ ಜೋಡಿಸಿ’
ಕಾಟಿಪಳ್ಳ: ವನಮಹೋತ್ಸವ, ಸಸಿ ವಿತರಣೆ
Team Udayavani, Jun 25, 2019, 5:04 AM IST
ಗಣೇಶಪುರ: ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗಣೇಶಪುರ ಮತ್ತು ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕ್ಷೇತ್ರ ಇವುಗಳ ವತಿಯಿಂದ ವನಮಹೋತ್ಸವ ಮತ್ತು ಬೃಹತ್ ಸಸಿ ವಿತರಣೆಯು ರವಿವಾರ ಕಾಟಿಪಳ್ಳ ಜಾರಂದಾಯ ಕೇಶವ ಶಿಶುಮಂದಿರದಲ್ಲಿ ಜರಗಿತು.
ಶಾಸಕ ಡಾ| ಭರತ್ ಶೆಟ್ಟಿ ವೈ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರದ ಮೇಲೆ ಬೃಹತ್ ಪ್ರಮಾಣದ ಹಾನಿಯನ್ನು ಇಂದು ಮಾಡುತ್ತಿದ್ದೇವೆ. ಅಭಿವೃದ್ಧಿಯ ಹೆಸರಲ್ಲಿ ಅರಣ್ಯ ನಾಶದ ಕಾರ್ಯವನ್ನು ಮಾಡುವುದನ್ನು ನಿಲ್ಲಿಸಬೇಕಾಗಿದೆ. ಪ್ರಕೃತಿಗೆ ಮಾರಕವಾಗಿರುವ ಪ್ಲಾಸ್ಟಿಕ್‌ನ್ನು ಆದಷ್ಟು ಕಡಿಮೆ ಬಳಸಬೇಕು. ಪರಿಸರದ ಉಳಿವಿಗೆ ಸಮಾಜದ ಸರ್ವರೂ ಕೈ ಜೋಡಿಸಬೇಕು ಎಂದು ನುಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹನಾಗರ ಕಾರ್ಯವಾಹಕ ಹರಿಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮನಪಾ ಮಾಜಿ ಸದಸ್ಯ ತಿಲಕ್‌ರಾಜ್ ಕೃಷ್ಣಾಪುರ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕ್ಷೇತ್ರ ಅಧ್ಯಕ್ಷ ವಾದಿರಾಜ್, ಉದ್ಯಮಿ ಪರೇಶ್ ಕರ್ಕೇರ, ತಣ್ಣೀರುಬಾವಿ ಜಾರಂತಾಯ ದೈವಸ್ಥಾನ ಆನುವಂಶಿಕ ಮೊಕ್ತೇಸರ ಪದ್ಮನಾಭ ರಾವ್ ಉಪಸ್ಥಿತರಿದ್ದರು. ಹಿಂದೂ ಧಾರ್ಮಿಕ ಸೇವಾ ಸಮಿತಿ ಸದಸ್ಯ ಲೋಕೇಶ್ ಬೊಳ್ಳಾಜೆ ಸ್ವಾಗತಿಸಿದರು. ಹಿಂದೂ ದಾರ್ಮಿಕ ಸೇವಾ ಸಮಿತಿ ಕಾರ್ಯದರ್ಶಿ ದಯಾನಂದ ವಂದಿಸಿದರು. ಪ್ರತಿಮಾ ನಿರ್ವಹಿಸಿದರು.
ಸಾಮಾಜಿಕ ಕಳಕಳಿ ಅಗತ್ಯ
ಮಂಗಳೂರು ವಲಯ ಅರಣ್ಯಾ ಧಿಕಾರಿ ಪಿ. ಶ್ರೀಧರ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬೆಳೆಯುತ್ತಿರುವ ಅಭಿವೃದ್ಧಿ ಹೊಂದಿದ ದೇಶವು ಇಂದು ಪರಿಸರಕ್ಕೆ ಕುತ್ತನ್ನು ತರುತ್ತಿದೆ. ನಾವು ಬದುಕಬೇಕಾದರೆ ಮರಗಿಡಗಳ ಅಗತ್ಯವಿದೆ. ಪರಿಸರದ ಬಗ್ಗೆ ಸಾಮಾಜಿಕ ಕಳವಳಿಯನ್ನು ಸಾರ್ವಜನಿಕರು ವ್ಯಕ್ತಪಡಿಸಬೇಕಾಗಿದೆ. ಸಮಾಜ ಸೇವಾ ಕುರಿತು ಯಾರಿಗೆ ಕಾಳಜಿ ಇರುವುದಿಲ್ಲವೋ ಅವರಿಗೆ ಪರಿಸರದ ಕಾಳಜಿಯೂ ಇರುವುದಿಲ್ಲ ಎಂದು ಅವರು ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.