ನಗರದಲ್ಲೂ ಇವೆ ತೆರಿಗೆ ವಂಚಿಸುವ ವಾಹನಗಳು!
Team Udayavani, Nov 4, 2017, 1:31 PM IST
ಮಹಾನಗರ: ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದೆ, ಸರಕಾರಕ್ಕೆ ತೆರಿಗೆಯನ್ನೂ ವಂಚಿಸುತ್ತಾ, ನಗರದ ರಸ್ತೆಗಳಲ್ಲಿ ಅನಧಿಕೃತವಾಗಿ ಓಡಾಡುತ್ತಿರುವ ಖಾಸಗಿ ವಾಹನಗಳ ಮೇಲೆ ಸಾರಿಗೆ ಇಲಾಖೆ ಹಾಗೂ ಟ್ರಾಫಿಕ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅಂಥ ವಾಹನ ಪತ್ತೆಯಾದರೆ ಮುಟ್ಟುಗೋಲು ಹಾಕಿಕೊಳ್ಳುವುದು ಖಚಿತ!
ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ, ಅನಧಿಕೃತವಾಗಿ ಸಂಚರಿಸುತ್ತಿರುವ ವಾಹನಗಳ ಪೈಕಿ
ಕಾರುಗಳೇ ಹೆಚ್ಚು. ಇಂಥ ವಾಹನಗಳು ತೆರಿಗೆ ವಂಚಿಸಿ ಹಲವು ತಿಂಗಳುಗಳಿಂದ ನೋಂದಣಿರಹಿತವಾಗಿ ಸಂಚರಿಸುತ್ತಿವೆ. ಇವುಗಳ ಬಗ್ಗೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲೂ ಹಲವು ಬಾರಿ ದೂರುಗಳು ಬಂದಿವೆ.
ಮಂಗಳೂರಿನ ಸಾರಿಗೆ ಕಚೇರಿಯಲ್ಲಿಯೇ ತಾತ್ಕಾಲಿಕ ನೋಂದಣಿ ಮಾಡಿಕೊಂಡಿರುವ ಹಾಗೂ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಲ್ಲಿ ತಾತ್ಕಾಲಿಕ ನೋಂದಣಿ ಮಾಡಿಕೊಂಡು ನಗರದಲ್ಲಿ ನಾಲ್ಕೈದು ವರ್ಷಗಳಿಂದ ಓಡಾಡುತ್ತಿರುವ ವಾಹನಗಳು ಹಲವಾರಿವೆ ಎಂಬುದಾಗಿ ಸಾರಿಗೆ ಇಲಾಖೆಯ ಮತ್ತು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ನೋಂದಣಿಯಾಗದ ವಾಹನಗಳನ್ನು ಕೆಲವರು ಖಾಸಗಿ ಬಳಕೆಗೆ ಮಾತ್ರ ಉಪಯೋಗಿಸುತ್ತಿದ್ದರೆ, ಇನ್ನೂ ಕೆಲವರು ಬಾಡಿಗೆಗೂ ಓಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಇಂಥ ವಾಹನಗಳನ್ನು ಗುರುತಿಸುವುದು ಪೊಲೀಸರಿಗೂ ಸುಲಭವಲ್ಲ.
ಪತ್ತೆ ಹಚ್ಚುವ ಮೆಕ್ಯಾನಿಸಂ ಇಲ್ಲ
ತಾತ್ಕಾಲಿಕ ನೋಂದಣಿಯವು ಮತ್ತು ಅಧಿಕೃತವಾಗಿ ನೋಂದಣಿಯಾದವು ಯಾವುವು ಎಂಬುದನ್ನು ಪತ್ತೆ ಹಚ್ಚುವ ಮೆಕ್ಯಾನಿಸಂ ಸಾರಿಗೆ ಕಚೇರಿಯಲ್ಲಿಲ್ಲ. ಹಾಗಾಗಿ ಅನಧಿಕೃತ ವಾಹನಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ ಎಂದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿ ಮೂಲಗಳು ತಿಳಿಸಿವೆ. ಸುಮಾರು 5 ವರ್ಷಗಳಿಂದಲೂ ಅಧಿಕೃತವಾಗಿ ನೋಂದಣಿ ಮಾಡಿಸಿಕೊಳ್ಳದವರೂ ಇದ್ದಾರೆ. ಒಂದೇ ವಾಹನ 2- 3 ಕಡೆ ತಾತ್ಕಾಲಿಕ ನೋಂದಣಿ ಮಾಡಿಕೊಂಡು ಬಂದು ನಗರದಲ್ಲಿ ಓಡಾಡುತ್ತಿವೆ ಎಂದು ಮೂಲಗಳು ವಿವರಿಸಿವೆ. ನೋಂದಣಿ ಆಗದ ವಾಹನಗಳನ್ನು ಪತ್ತೆ ಹಚ್ಚಿ ಅವುಗಳ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೂ ಅಧಿಕಾರವಿದೆ. ಕೆಲವು ವರ್ಷಗಳ ಹಿಂದೆ ಟ್ರಾಫಿಕ್ ವಿಭಾಗದಲ್ಲಿ ಕರ್ತವ್ಯ ನಿರ್ವ ಹಿಸಿದ ಪೊಲೀಸ್ ಸಿಬಂದಿ ಒಬ್ಬರು 3- 4 ಇಂತಹ ವಾಹನಗಳನ್ನು ಪತ್ತೆ ಮಾಡಿ ದಂಡ ವಿಧಿಸಿದ ನಿದರ್ಶನ ಇದೆ.
ನಷ್ಟ , ಸಮಸ್ಯೆ ಏನು?
ವಾಹನಗಳ ಬೆಲೆ ಮತ್ತು ಸಾರಿಗೆ ವಾಹನಗಳಾಗಿದ್ದಲ್ಲಿ ಸೀಟು ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ನೋಂದಣಿ ಮಾಡಿಸದಿದ್ದರೆ ಸರಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟವಾಗುತ್ತದೆ.
ಹೊಸ ವಾಹನ ಖರೀದಿಸುವಾಗ ಸ್ವಲ್ಪ ಮೊತ್ತದ ವಿಮೆಯ ಹಣ ಪಾವತಿಸಲಾಗುತ್ತಿದ್ದು, ಈ ಮೊತ್ತವು ವಾಹನವು ಮಾರಾಟ ಮಳಿಗೆಯಿಂದ ಮನೆಗೆ ತಲಪುವಷ್ಟರ ವರೆಗಿನ ಅವಧಿಗೆ ಮಾತ್ರ ಇರುತ್ತದೆ. ವಾಹನಕ್ಕೆ ಖಾಯಂ ವಿಮೆ ಅನ್ವಯವಾಗಬೇಕಾದರೆ ಅಧಿಕೃತ ನೋಂದಣಿ ಅಗತ್ಯ.ಅಪಘಾತದ ಸಂದರ್ಭದಲ್ಲಿ ವಿಮಾ ಪರಿಹಾರ ಪಡೆಯಬೇಕಾದಲ್ಲಿ ಈ ಮಾದರಿಯ ಖಾಯಂ ವಿಮಾ ಸೌಲಭ್ಯ ಅಗತ್ಯ.
ಅಧಿಕೃತ ನೋಂದಣಿ ಮಾಡಿಸದೆ ವಾಹನಓಡಿಸುವವರು ವಿಮೆ ಮಾಡಿಸಿರುವುದಿಲ್ಲ, ತೆರಿಗೆಯನ್ನು ಪಾವತಿಸುವುದಿಲ್ಲ. ಬ್ಯಾಂಕ್ ಸಾಲ ಪಡೆದು ವಾಹನ ಖರೀದಿಸಿದ್ದು, ಅದು ಅಪಘಾತಕ್ಕೀಡಾದರೆ ವಿಮೆ ಸಿಗದೆ ಬ್ಯಾಂಕಿನವರಿಗೂ ಸಮಸ್ಯೆಯಾಗುತ್ತದೆ.
ವಿಮೆ ಇಲ್ಲದ ವಾಹನದಲ್ಲಿ ಪ್ರಯಾಣಿಸುವುದು ಅಪಾಯಕಾರಿ.
ಪತ್ತೆಯಾದರೆ ಕ್ರಮ ‘ಅಧಿಕೃತವಾಗಿ ನೋಂದಣಿಯಾಗದ ಓಡಾಡುವ ವಾಹನಗಳು ಪತ್ತೆಯಾದರೆ ಕ್ರಮ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.’
– ಮಂಜುನಾಥ ಶೆಟ್ಟಿ,
ಎಸಿಪಿ (ಟ್ರಾಫಿಕ್ ಮತ್ತು ಕ್ರೈಂ)
ಲಿಂಕ್ ಒದಗಿಸಿ ಕೊಡಿ
‘ತಾತ್ಕಾಲಿಕ ಮತ್ತು ಕಾಯಂ ನೋಂದಣಿ ಮಾಡಿದ ವಾಹನಗಳ ಪತ್ತೆಗೆ ಬೇಕಾಗಿರುವ ಲಿಂಕ್ ಒದಗಿಸಿ ಕೊಡಿ ಎಂಬುದಾಗಿ ಸಾರಿಗೆ ಇಲಾಖೆಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ ಇದುವರೆಗೆ ಅದನ್ನು ಒದಗಿಸಿಲ್ಲ. ಖಾಯಂ ನೋಂದಣಿ ಆಗದಿರುವ ವಾಹನಗಳ ಜಾಡು ಹಿಡಿದು ಪತ್ತೆ ಹಚ್ಚುವಂತೆ ವಾಹನಗಳಿಗೆ ಸಾಲ ನೀಡುವ ಬ್ಯಾಂಕುಗಳಿಗೂ ತಿಳಿಸಲಾಗಿದೆ. ಆದರೆ ಬ್ಯಾಂಕಿನವರೂ ಕ್ರಮ ವಹಿಸುತ್ತಿಲ್ಲ.’
– ಜಿ.ಎಸ್. ಹೆಗಡೆ, ಸಾರಿಗೆ
ಅಧಿಕಾರಿ, ಮಂಗಳೂರು
ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.