ರೈತರಿಗೆ ಪರ್ಯಾಯ ಕೃಷಿಯಾಗುತ್ತಿರುವ ತಾಳೆ ಬೆಳೆ


Team Udayavani, Apr 23, 2018, 6:25 AM IST

2104blr1a.jpg

ಬೆಳ್ಳಾರೆ: ವಾಣಿಜ್ಯ ಬೆಳೆಗಳಿಗೆ ಹೆಸರಾದ ಸುಳ್ಯ ತಾಲೂಕಿನಲ್ಲಿ ಈಗ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕೆ ಕಾರಣ ತಾವು ಬೆಳೆದ ಅಡಿಕೆ ಕೃಷಿಗೆ ತಗಲುವ ವಿವಿಧ ರೋಗಗಳು ಜತೆಗೆ ಬೆಲೆ ಕುಸಿತ, ಕಾರ್ಮಿಕರ ಕೊರತೆ, ನಿರ್ವಹಣೆ ವೆಚ್ಚದ ಹೊರೆ, ಮಾರುಕಟ್ಟೆ ಭೀತಿ ಹಾಗೂ ಕಾಡುಪ್ರಾಣಿಗಳ ಉಪಟಳ. ಇದಕ್ಕೆಲ್ಲ ಚಿಂತಿಸುವವರಿಗೆ ಇಲ್ಲಿದೆ ಪರಿಹಾರ. ಅಡಿಕೆ, ತೆಂಗು, ರಬ್ಬರ್‌ಗೆ ಪರ್ಯಾಯವಾಗಿ ತಾಳೆ ಬೆಳೆ ಕೈ ಹಿಡಿಯುತ್ತಿದೆ.

ಸದ್ಯದ ಸ್ಥಿತಿಯಲ್ಲಿ ಅಡಿಕೆಯ ಬದಲು ಪರ್ಯಾಯವಾಗಿ ತಾಳೆ ಬೆಳೆ ಸೂಕ್ತ ಎಂಬ ವಾದ ಇದೆ. ಇದಕ್ಕೆ ಸಾಕ್ಷಿ ತೊಡಿಕಾನ ಗ್ರಾಮದ ಪ್ರಗತಿ ಪರ ಕೃಷಿಕ, ಕೃಷಿ ಪದವೀಧರ ವಸಂತ ಭಟ್‌. 2012ರಲ್ಲಿ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಹಳದಿ ರೋಗ ಕಾಣಿಸಿಕೊಂಡು ಫ‌ಸಲು ನಾಶವಾದಾಗ ಇವರು ಸ್ವತಃ ಚಿಂತನೆ ನಡೆಸಿ ಅದೇ ಸ್ಥಳದಲ್ಲಿ ತಾಳೆ ಬೆಳೆ ಬೆಳೆದಿದ್ದರು. ಆ ಮೂಲಕ ಫ‌ಸಲು ಬೆಳೆದು ಅದರಲ್ಲಿ ಯಶಸ್ವಿಯಾಗಿದ್ದಾರೆ.

350 ಹೆಕ್ಟೇರ್‌ನಲ್ಲಿ
ಜಿಲ್ಲೆಯಲ್ಲಿ ಈ ಹಿಂದೆ ಅಡಿಕೆಗೆ ರೋಗ ತಗುಲಿ ಬೆಳೆ ಕುಂಠಿತವಾದಾಗ ಕೃಷಿಕರೂ ಸಂಶೋಧನೆ ಮುಂದಾಗಿದ್ದರು. ದ.ಕ. ಮತ್ತು ಉಡುಪಿ ಜಿಲ್ಲೆಯ ವಾತಾವರಣ ತಾಳೆ ಬೆಳೆಗೆ ಸೂಕ್ತ ಎಂಬುದು ಮನದಟ್ಟಾ ಗುತ್ತಿದ್ದಂತೆ ಇದೇ ಬೆಳೆ ಬೆಳೆಯಲು ಸರಕಾರವೇ ಪ್ರೋತ್ಸಾಹ ನೀಡಿತ್ತು. ರೈತರೂ ತಾಳೆ ಬೆಳೆಯಲು ಆರಂಭಿಸಿದರು. ಅವಳಿ ಜಿಲ್ಲೆಗಳಲ್ಲಿ ಸುಮಾರು 350ಕ್ಕೂ ಅಧಿಕ ಹೆಕ್ಟೇರ್‌ ಜಾಗದಲ್ಲಿ ತಾಳೆ ಕೃಷಿ ಬೆಳೆಯಲಾಗುತ್ತಿದೆ. ಸುಳ್ಯ ತಾಲೂಕಿನಲ್ಲಿ 100 ಹೆಕ್ಟೇರ್‌ನಲ್ಲಿ ತಾಳೆ ಬೆಳೆ ಇದೆ. ತಾಲೂಕಿನಿಂದ ಪ್ರತಿ ತಿಂಗಳು 13-15 ಟನ್‌ ಕಾಯಿ ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ. ತಾಳೆ ಬಹುವಾರ್ಷಿಕ ಬೆಳೆ. ಗಿಡ ನಾಟಿ ಮಾಡಿದ ಒಂದೇ ವರ್ಷದಲ್ಲಿ ಹೂವು ಬಿಡಲು ಆರಂಬಿಸುತ್ತದೆ. ನಾಲ್ಕು ವರ್ಷಗಳಲ್ಲಿ ಇಳುವರಿ ಕೊಡುತ್ತದೆ. ಗಿಡಗಳ ಬೆಳವಣಿಗೆಯ ದೃಷ್ಟಿಯಿಂದ ಮೂರು ವರ್ಷ ತನಕ ಹಿಂಗಾರವನ್ನು ಕೀಳಬೇಕಾಗುತ್ತದೆ. 35 ವರ್ಷಗಳ ತನಕ ಇಳುವರಿ ನೀಡುತ್ತದೆ.

ತಾಳೆ ಗೊನೆಗೆ ಕೆ.ಜಿ.ಗೆ 10 ರೂ. ದರ ಇದೆ. ದರ ಶೀಘ್ರ ಹೆಚ್ಚಳವಾಗಲಿದೆ. ಸರಕಾರ ಪ್ರೋತ್ಸಾಹಕ ಬೆಲೆ ನೀಡುತ್ತದೆ. ಮಾರುಕಟ್ಟೆಯಲ್ಲಿ ದರ ವ್ಯತ್ಯಯ ಆಗುವುದಿಲ್ಲ. ಸುಳ್ಯದಲ್ಲಿ ಈ ತಿಂಗಳು 1ರಿಂದ 12 ಟನ್‌ ಖರೀದಿ ನಡೆದಿದೆ. ಇನ್ನೂ ಹಲವು ಕಡೆಗಳಲ್ಲಿ ಕಟಾವು ಬಾಕಿ ಇದೆ.

ತೊಡಿಕಾನದ ಮಾದರಿ
ಒಂದು ಕಾಲದಲ್ಲಿ ವಸಂತ್‌ ಭಟ್‌ ತಮ್ಮ 20 ಎಕ್ರೆ ಕೃಷಿ ಭೂ ಮಿಯಲ್ಲಿ 200 ಕ್ವಿಂಟಲ್‌ ಅಡಿಕೆ ಬೆಳೆಯುತ್ತಿದ್ದರು. ಆದರೆ, ಹಳದಿ ರೋಗ ಬಾಧಿಸಿದ ಮೇಲೆ ಇಳುವರಿ ಏಕಾಏಕಿ 15 ಕ್ವಿಂಟ ಲ್‌ಗೆ ಇಳಿಯಿತು. ಇತರ ರೈತ ರಂತೆ ಕೈಕಟ್ಟಿ ಕೂರದೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ, ತಾಳೆ ಕೃಷಿ ಮಾಡಿ ದರು. ಸರಕಾರಿ ಮಟ್ಟದಲ್ಲಿ ಪ್ರಯತ್ನಿಸಿ, ಇತರರಿಗೂ ಪ್ರೇರಣೆ ನೀಡಿ ಅನೇಕ ತಾಳೆ ಕೃಷಿಕರನ್ನು ನಿರ್ಮಾಣ ಮಾಡಿ ದ.ಕ., ಉಡುಪಿ ಜಿಲ್ಲೆಯಲ್ಲಿ ಹೆಚ್ಚು ತಾಳೆ ಕೃಷಿ ಮಾಡುವ ರೈತರಾಗಿದ್ದಾರೆ. ವಸಂತ್‌ ಭಟ್‌ ತಮ್ಮ ಅಡಿಕೆ ಕೃಷಿಯ ಹಳದಿ ರೋಗ ಬಾಧಿತ 20 ಎಕ್ರೆ ಭೂಮಿಯಲ್ಲಿ ತಾಳೆ ಕೃಷಿ ಮಾಡಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ತಾಳೆ ಗೊನೆ ಕೊಯ್ಯತ್ತಾರೆ. ಪ್ರತಿ ಕೊಯ್ಲಿಗೆ 10ರಿಂದ 15 ಕ್ವಿಂಟಲ್‌ ಇಳು ವರಿ ದೊರೆಯುತ್ತದೆ.

ಖಾದ್ಯ ತೈಲಕ್ಕೆ ಬಳಕೆ
ಖಾದ್ಯ ತೈಲ ತಯಾರಿಕೆಗೆ ಈ ತಾಳೆ ಬೆಳೆ ಬಳಕೆ ಆಗುತ್ತಿದೆ. ವಿದೇಶದಿಂದ ತಾಳೆ ಆಮದು ಮಾಡಿ ಕೊಂಡರೆ ದುಬಾರಿಯಾ ಗುವ ಕಾರಣ ಇಲ್ಲೇ ಬೆಳೆಯಲು ಸರಕಾರವೂ ಪ್ರೋತ್ಸಾಹ ನೀಡು ತ್ತಿದೆ. ಕರಾವಳಿ ಕೃಷಿಕರಿಗೆ ಇದು ಸೂಕ್ತ ಪರ್ಯಾಯ ಬೆಳೆ. ತಾಳೆ ಬೆಳೆಯನ್ನು ಪ್ರತಿ 15 ದಿನಗಳಿಗೊಮ್ಮೆ ಗೋದ್ರೇಜ್‌ ಅಗ್ರೋ ವೆಟ್‌ ಸಂಸ್ಥೆ ಮನೆ ಬಾಗಿಲಿಗೆ ಬಂದು ಖರೀದಿಸು ತ್ತದೆ. ಇತರ ಬೆಳೆಗಳಿಗೆ ಹೋಲಿಸಿದರೆ, ಖರ್ಚೂ ತುಂಬಾ ಕಡಿಮೆ. ನಿರ್ವಹಣೆಯೂ ಸುಲಭ. ಬೇಸಗೆಯಲ್ಲಿ ನೀರು, ರಸ ಗೊಬ್ಬರ ಹಾಕಬೇಕು. ವಿಶೇಷ ಆರೈಕೆಯ ಚಿಂತೆ ಇಲ್ಲ. ಅಡಿಕೆಗೆ ವರ್ಷಕ್ಕೆ 300ಆಳು ಬೇಕಿದೆ. ಅಡಿಕೆ, ರಬ್ಬರ್‌ನಂತೆ ಇದಕ್ಕೆ ಕಾರ್ಮಿಕರ ಅಗತ್ಯ ಅಷ್ಟಾಗಿ ಇಲ್ಲ.

ತಾಳೆ ಬೆಳೆಯಿರಿ!
ರೈತರು ಹಳದಿ ರೋಗದ ಚಿಂತೆ ಮರೆತು, ತಾಳೆ ಬೆಳೆಯಲು ಆಸಕ್ತಿ ವಹಿಸಬೇಕು. ತಾಳೆ ಕೃಷಿಯನ್ನು ಅತ್ಯಂತ ಕಡಿಮೆ ಖರ್ಚಿನಿಂದ ಮಾಡಬಹುದು. ಕೂಲಿಯಾಳುಗಳು ಕಡಿಮೆ ಸಾಕು. ರೋಗ ಬಾಧೆ ಕಡಿಮೆ. ತಾಳೆಗೆ ಮಾರುಕಟ್ಟೆಯಲ್ಲೂ ಸಾಕಷ್ಟು ಬೇಡಿಕೆ ಇದೆ. ನಮ್ಮ ದೇಶಕ್ಕೆ ಹೆಚ್ಚಿನ ತಾಳೆ ಎಣ್ಣೆ ವಿದೇಶದಿಂದ ಆಮದಾಗುತ್ತಿದೆ. ತಾಳೆ ಇಂದು ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಪರ್ಯಾಯ ಬೆಳೆಯಾಗಿ ಜನಪ್ರಿಯವಾಗುತ್ತಿದೆ.
 - ವಸಂತ ಭಟ್‌ ತೊಡಿಕನಾನ
ತಾಳೆ ಕೃಷಿಕರು

 - ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.