ನೃತ್ಯ ಸ್ಪರ್ಧೆ ಹೆಜ್ಜೆ ಗೆಜ್ಜೆಯಲ್ಲಿ ಆಳ್ವಾಸ್ ಚಾಂಪಿಯನ್
Team Udayavani, Sep 1, 2017, 8:10 AM IST
ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಆ.30 ಮತ್ತು 31ರಂದು ನಡೆದ ಮಂಗಳೂರು ವಿ.ವಿ. ಅಂತರ್ ಕಾಲೇಜು ನೃತ್ಯ ಸ್ಪರ್ಧೆ “ಹೆಜ್ಜೆ ಗೆಜ್ಜೆ’ ಯಲ್ಲಿ ಆಳ್ವಾಸ್ ಕಾಲೇಜು ತಂಡ ಜಾನಪದ ಸಮೂಹ ನೃತ್ಯದಲ್ಲಿ ಪ್ರಥಮ, ಭರತನಾಟ್ಯದಲ್ಲಿ ದಿವ್ಯಾ ಪ್ರಥಮ ಸ್ಥಾನ ಗಳಿಸುವ ಮೂಲಕ ಕಾಲೇಜು ಸಮಗ್ರ ಪ್ರಶಸ್ತಿ ಎತ್ತಿಕೊಂಡಿದೆ.
ಭರತನಾಟ್ಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮೈತ್ರಿ ದ್ವಿತೀಯ, ಪುತ್ತೂರು ವಿವೇಕಾನಂದ ಕಾಲೇಜಿನ ಶಮಾ ತೃತೀಯ ಬಹುಮಾನ ಗಳಿಸಿದ್ದಾರೆ. ಜಾನಪದ ನೃತ್ಯದಲ್ಲಿ ಗೋವಿಂದದಾಸ್ ಕಾಲೇಜು ದ್ವಿತೀಯ, ಎಂಜಿಎಂ ತೃತೀಯ ಸ್ಥಾನ ಗಳಿಸಿವೆ.
ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಆ. 28 ಮತ್ತು 29ರಂದು ನಡೆದಿದ್ದ ಅಂತರ್ ಕಾಲೇಜು ರಂಗಭೂಮಿ ಸ್ಪರ್ಧೆಯಲ್ಲಿ ಆಳ್ವಾಸ್ ಸ್ಕಿಟ್ ಮತ್ತು ಮೂಕಾಭಿನಯದಲ್ಲಿ ಪ್ರಥಮ, ಮಿಮಿಕ್ರಿಯಲ್ಲಿ ದ್ವಿತೀಯ (ನಿತ್ಯಾನಂದ), ಏಕಾಂಕ ನಾಟಕದಲ್ಲಿ ತೃತೀಯ ಸ್ಥಾನ ಗಳಿಸಿ ಸಮಗ್ರ ಪ್ರಶಸ್ತಿ ಪಡೆದಿದೆ.
ಈ ಎರಡು ಸಮಗ್ರ ಪ್ರಶಸ್ತಿಗಳಲ್ಲದೆ ಈ ಹಿಂದೆ ನಡೆದಿದ್ದ ಅಂತರ್ ಕಾಲೇಜು ಸಂಗೀತ, ಲಲಿತ ಕಲೆ ಹಾಗೂ ಸಾಹಿತ್ಯ ವಿಭಾಗಗಳಲ್ಲೂ ಆಳ್ವಾಸ್ ಕಾಲೇಜು ತಂಡಗಳು ಸಮಗ್ರ ಪ್ರಶಸ್ತಿ ಗಳಿಸುವ ಮೂಲಕ ಮಂಗಳೂರು ವಿ.ವಿ. ಅಂತರ್ ಕಾಲೇಜು ಮಟ್ಟದ “ಯುವಜನೋತ್ಸವ’ ಎಲ್ಲ 5 ವಿಭಾಗಗಳಲ್ಲೂ ಆಳ್ವಾಸ್ ಸಮಗ್ರ ಪ್ರಶಸ್ತಿ ಎತ್ತಿಕೊಂಡಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.