ಜಾಂಬೂರಿ: ಉಲ್ಲಾಸದ ಉಯ್ಯಾಲೆಯಲಿ ಪ್ರತಿಭೆಯ ಪ್ರಭೆ
Team Udayavani, Dec 24, 2022, 6:55 AM IST
ಜಾಂಬೂರಿಯ ಮೂರನೇ ದಿನವಾದ ಶುಕ್ರವಾರ ಶಿಬಿರಾರ್ಥಿಗಳ ಉತ್ಸಾಹ ಇಮ್ಮಡಿಯಾಗಿದ್ದು, ಎಲ್ಲ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಅದನ್ನು ಸಾಬೀತು ಮಾಡಿದರು. ಶಿಬಿರಾರ್ಥಿಗಳು ಸಮೀಪದ ವಿವಿಧ ಪ್ರವಾಸಿ ಕೇಂದ್ರಗಳಿಗೂ ಭೇಟಿ ನೀಡಿದ್ದು, ಕರಾವಳಿಯ ಸೊಬಗನ್ನು ಆಸ್ವಾದಿಸಿದರು. ವಿವಿಧ ಟಾಸ್ಕ್ಗಳಲ್ಲೂ ಶಿಬಿರಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸಿಕೊಟ್ಟರು.
ಅತಿಥಿ ದೇವೋಭವ
ಆತಿಥ್ಯಕ್ಕೆ ಮನಸೋತ ಮಕ್ಕಳು, ಗಣ್ಯಾತಿಗಣ್ಯರು
ಮೂಡುಬಿದಿರೆ: ಮನೆಗೆ ನಾಲ್ವರು ನೆಂಟರು ಬಂದರೆ ಆತಿಥ್ಯ ಮಾಡುವುದು ಹೇಗೆ ಎಂದು ಯೋಚಿ ಸುವ ಈ ಕಾಲದಲ್ಲಿ ಸಹಸ್ರಾರು ಮಂದಿಗೆ ವಸತಿ-ಊಟೋಪಾಚಾರ ಸಹಿತ ಆತಿಥ್ಯ ಒದಗಿಸುವುದೆಂದರೆ ಹೇಗಾ ದೀತು? ಆದರೆ ಆಳ್ವಾಸ್ ಆವರಣದಲ್ಲಿ ಇದನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಜಾಂಬೂರಿಗೆ ಬಂದಿರುವ ವಿದ್ಯಾರ್ಥಿ ಗಳು, ಮಕ್ಕಳು, ಅಧಿಕಾರಿ ವರ್ಗ, ಕಲಾವಿ ದರು ಜತೆಗೆ ಸಾರ್ವಜನಿಕ ರಿಂದಲೂ ಕೇಳಿ ಬರುತ್ತಿರುವ ಮಾತು “ಆತಿಥ್ಯ ನಂ. 1′ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರ ನೇತೃತ್ವದ ದೊಡ್ಡ ಸಂಖ್ಯೆಯ ಸ್ವಯಂ ಸೇವಕರ ಸಮೂಹದಿಂದ ಇದು ಸಾಧ್ಯವಾಗಿದೆ.
48,500 ವಿದ್ಯಾರ್ಥಿಗಳು, 4 ಸಾವಿರಕ್ಕೂ ಅಧಿಕ ಅಧಿಕಾರಿಗಳು, ತರಬೇತುದಾರರು, 2 ಸಾವಿರಕ್ಕೂ ಅಧಿಕ ವಿವಿಧ ಸ್ಟಾಲ್‌ಗಳ ಸಿಬಂದಿ, 500ಕ್ಕೂ ಅಧಿಕ ಕಲಾವಿದರು, ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದು ಎಲ್ಲರಿಗೂ ವಿವಿಧೆಡೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಅವರು ಇರುವಲ್ಲೇ ಊಟ-ತಿಂಡಿಯ ವ್ಯವಸ್ಥೆಯನ್ನೂ ಮಾಡಲಾಗಿದೆ.
21 ಕಡೆ ಪಾಕಶಾಲೆ
21 ಕಡೆಗಳಲ್ಲಿ ಪಾಕ ಶಾಲೆ ಗಳನ್ನು ನಿರ್ವ ಹಿಸಲಾಗುತ್ತಿದ್ದು, ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ-ಉಪಾಹಾರದ ವ್ಯವಸ್ಥೆಯಿದೆ. ಬೆಳಗ್ಗೆ ಬಾಳೆಹಣ್ಣು, ಬ್ರೆಡ್, ಜಾಮ್, ಹಾಲಿನೊಂದಿಗೆ ದೈನಂದಿನ ಮೆನುವಿನಲ್ಲಿರುವ ಊಟ ತಿಂಡಿಗಳನ್ನೂ ಒದಗಿಸಲಾಗುತ್ತಿದೆ. ಮಧ್ಯಾಹ್ನದ ಊಟ ವನ್ನು ಸ್ವೀಟ್, ಪಾಯಸದೊಂದಿಗೆ ವಿತರಿಸ ಲಾಗುತ್ತಿದೆ. 300ಕ್ಕೂ ಅಧಿಕ ಸಂಖ್ಯೆಯಲ್ಲಿ ಅಡುಗೆಯವರು, ಸ್ವಯಂ ಸೇವ ಕರು 24 ಗಂಟೆ ಸೇವೆ ನೀಡುತ್ತಿದ್ದಾರೆ. ಅಕ್ಕಿ, ಸಕ್ಕರೆ, ಕಾಯಿ ಸಾಕಷ್ಟು ಪ್ರಮಾಣದಲ್ಲಿ ಪ್ರಮಾಣದಲ್ಲಿ ಹೊರೆಕಾಣಿಕೆ ಮೂಲಕ ಸಂಗ್ರಹವಾಗಿದೆ. ಇತರ ಅಗತ್ಯ ವಸ್ತುಗಳನ್ನು ಬೇಡಿಕೆಗೆ ತಕ್ಕಂತೆ ತರಿಸಿಕೊಳ್ಳಲಾಗುತ್ತಿದೆ ಎಂದು ಊಟೋಪಚಾರ ವಿಭಾಗದ ಉಸ್ತುವಾರಿ ರಂಗೋಲಿ ಚಂದ್ರ ಹಾಸ ಶೆಟ್ಟಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ವ್ಯವಸ್ಥೆ
ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಅಗತ್ಯ ವಸ್ತುಗಳಾದ ಬಕೆಟ್, ಮಗ್‌ಗಳನ್ನು ಇರಿಸಲಾಗಿದೆ. ಅಧಿಕಾರಿಗಳಿಗೆ ಬೆಡ್, ಬೆಡ್‌ಶೀಟ್‌ಗಳನ್ನು ಒದಗಿಸಲಾಗಿದೆ. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳ ಲಾಗುತ್ತಿದೆ ಎನ್ನುತ್ತಾರೆ ವಸತಿ ವಿಭಾಗದ ಉಸ್ತುವಾರಿ ಪ್ರತೀಕ್ ಕುಮಾರ್ ಶೆಟ್ಟಿ.
ವಾಹನ ಸೌಲಭ್ಯ
ವಿವಿಧೆಡೆ ವಾಸ್ತವ್ಯ ಹೂಡಿರುವವರನ್ನು ಕರೆತರಲು ಮತ್ತು ಮರಳಿ ಬಿಡಲು 120 ಬಸ್‌ಗಳಿವೆ. ವಿಐಪಿ ಗಳಿಗಾಗಿ ಬಾಡಿಗೆ ಕಾರುಗಳು, ವ್ಯಾನ್‌ಗಳನ್ನು ಸನ್ನದ್ಧವಾಗಿ ಇರಿಸ ಲಾಗಿದೆ.ವಿದ್ಯಾರ್ಥಿಗಳಿ ರುವ ಹಾಸ್ಟೆಲ್‌ಗಳಿಗೆ 24 ಗಂಟೆಯೂ ನೀರು ಪೂರೈಕೆ ಇದೆ.
ದಿನದ ವಿಶೇಷ
ಎಂದಿನ ಸ್ಕೌಟ್ಸ್-ಗೈಡ್ಸ್ ಸಾಹನ ಪ್ರದರ್ಶನಗಳು ನಡೆದವು. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ 100ಕ್ಕೂ ಅಧಿಕ ಟಾಸ್ಕ್ಗಳ ಮೂಲಕ ಪ್ರತಿಭೆ ಪ್ರದರ್ಶಿಸಿದರು. 1 ಸಾವಿರ ಮಂದಿ ಪಿಲಿಕುಳಕ್ಕೆ ಭೇಟಿ ನೀಡಿದರು. 2 ಸಾವಿರ ಮಂದಿ ಶ್ರಮದಾನದಲ್ಲಿ, 500 ಮಂದಿ ಬೀಚ್‌ವಾಕ್‌ನಲ್ಲಿ ಪಾಲ್ಗೊಂಡರು. ಕೆಲವರು ಕಡಲ ಕೆರೆ, ಅಲಂಗಾರು, ಸಾವಿರ ಕಂಬದ ಬಸದಿ ಮೊದಲಾದೆಡೆಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ವೀಕ್ಷಿಸಿದರು. ವಿವಿಧ ಮೇಳಗಳು, ಪ್ರದರ್ಶನಗಳು ಎಂದಿನಂತೆ ತುಂಬಿ ತುಳುಕುತ್ತಿದ್ದವು.
ವಿವಾಹ ಪದ್ಧತಿ ಪ್ರದರ್ಶನ
ಮೂಡುಬಿದಿರೆ: ಜಾಂಬೂರಿಯ ಮೂರನೇ ದಿನದ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ- ತೊಡುಗೆಗಳೊಂದಿಗೆ ತಮ್ಮೂರಿನ ವಿವಾಹ ಪದ್ಧತಿಗಳ ಪ್ರದರ್ಶಿಸಿದರು. “ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ರಾಜ್ಯ ಹಾಗೂ ಜಿಲ್ಲಾವಾರು ವಿವಾಹ ಪದ್ಧತಿಗಳ ಪ್ರದರ್ಶನವಿತ್ತು. ವಿದೇಶೀ ವಿದ್ಯಾರ್ಥಿಗಳು ಹಾಗೂ ಅಧಿಕಾರಿ ವರ್ಗದವರು ಭಾರತದ ವಿವಾಹ ಸಂಸ್ಕೃತಿಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.